ವಿಚಾರಣೆಗೆ ಬಂದ ನಾದಬ್ರಹ್ಮ ಹಂಸಲೇಖ: ಠಾಣೆ ಎದುರು ಹೈಡ್ರಾಮಾ.. ಪ್ರೊಟೆಸ್ಟ್ ನಡೆಯಲು ಕಾರಣವೇನು ಗೊತ್ತಾ..?

Updated: Thursday, November 25, 2021, 16:21 [IST]

ವಿಚಾರಣೆಗೆ ಬಂದ ನಾದಬ್ರಹ್ಮ ಹಂಸಲೇಖ: ಠಾಣೆ ಎದುರು ಹೈಡ್ರಾಮಾ.. ಪ್ರೊಟೆಸ್ಟ್ ನಡೆಯಲು ಕಾರಣವೇನು ಗೊತ್ತಾ..?

ಸಂಗೀತ ನಿರ್ದೇಶಕ, ಸಾಹಿತಿ, ನಾದಬ್ರಹ್ಮ ಹಂಸಲೇಖ ಅವರು ಕೆಲ ದಿನಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು ಅಸ್ಪೃಶ್ಯತೆ ದೇಶಕ್ಕಂಟಿದ ಶಾಪ ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದು ಮಾತನಾಡಿ ವಿವಾದ ಸೃಷ್ಟಿಸಿದ್ದರು. ಪೇಜಾವರಶ್ರೀಗಳಿಗೆ ಅವಮಾನಿಸಿದ್ದಾರೆ ಎಂದು ಜನರು ಆಕ್ರೋಶಗೊಂಡಿದ್ದರು. ಈ ಪ್ರಕರಣ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹಂಸಲೇಖ ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ಬೆಂಗಳೂರಿನಲ್ಲಿ ಇರದ ಕಾರಣ ವಿಚಾರಣೆಗೆ ಬಂದಿರಲಿಲ್ಲ. ಪೊಲೀಸರು ನೋಟೀಸ್ ಅನ್ನು ಹಂಸಲೇಖ ಅವರ ಮನೆ ಬಾಗಿಲಲ್ಲಿ ಅಂಟಿಸಿ ಬಂದಿದ್ದರು. 

ಈ ಹಿನ್ನೆಲೆ ಇಂದು ಹಂಸಲೇಖ ಅವರು ವಿಚಾರಣೆಗೆ ಆಗಮಿಸಿದ್ದರು. ತಮ್ಮ ವಕೀಲರ ಜೊತೆ ಬಸವನಗುಡಿ ಠಾಣೆಗೆ ಆಗಮಿಸಿದ ಹಂಸಲೇಖ ಅವರೊಂದಿಗೆ ನಟ ಚೇತನ್ ಕೂಡ ಬಂದಿದ್ದರು. ಪೊಲೀಸರು ಬಾಗಿಲಲ್ಲೇ ಚೇತನ್ ಅವರನ್ನು ತಡೆದರು. ಈ ವೇಳೆ ಠಾಣೆ ಎದುರು ಹೈಡ್ರಾಮವೇ ನಡೆಯಿತು. ಈ ಸಂದರ್ಭದಲ್ಲಿ ಚೇತನ್ ಅವರ ಆಗಮನವನ್ನು ಭಜರಂಗದಳ ವಿರೋಧಿಸಿತು. ಭಜರಂಗಳ ಮುಖಂಡ ತೇಜಸ್ ಮಾತನಾಡಿ, ಹಂಸಲೇಖ ಅವರು ಭೇಷರತ್ ಕ್ಷಮೆ ಕೇಳಬೇಕು. ಈ ವಿಚಾರದಲ್ಲಿ ಚೇತನ್ ಅವರಿಗೆ ಏನು ಕೆಲಸ. ಸುಮ್ಮನೆ ಸಮಾಜದ ಸ್ವಾಸ್ತ್ಯ ಕೆಡಿಸುತ್ತಿದ್ದಾರೆ. ಸಸ್ಯಹಾರಿ ಹಾಗೂ ಮಾಂಸಹಾರಿ ಎಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.      

 

ಪೊಲೀಸ್ ಠಾಣೆ ಎದುರು ಪರ-ವಿರೋಧ ಸಂಘಟನೆಗಳ ಜಮಾಯಿಸಿ ಪ್ರತಿಭಟನೆ ನಡೆಸಿದವು. ಪೇಜಾರವರ ಶ್ರೀಗಳಿಗೆ ಜಿಂದಾಬಾದ್ ಎಂದು ಹಿಂದೂಪರ ಸಂಘಟನೆಗಳು ಹಾಗೂ ದಲಿತ ವಿರೋಧಿಗಳಿಗೆ ಧಿಕ್ಕಾರ ಎಂದು ಕನ್ನಡಪರ ಸಂಘಟನೆಗಳು ದಿಕ್ಕಾರ ಕೂಗಿದರು. ಚೇತನ್ ರಸ್ತೆಯಲ್ಲೇ ಕುಳಿತು ಧರಣಿಗೆ ಮುಂದಾದರು. ಈ ನಡುವೆ ವಿಚಾರಣೆ ಮುಗಿಸಿ ಹಂಸಲೇಖ ತೆರಳಿದರು. ಬಳಿಕ ಹಂಸಲೇಖ ಅವರ ಲಾಯರ್ ದ್ವಾರಕನಾಥ್ ಮಾತನಾಡಿ, ಪೊಲೀಸ್ ಅವರು ವಿಚಾರಣೆಗೆ ಕರೆದಿದ್ರು. ತನಿಖಾಧಿಕಾರಿ 29 ಪ್ರಶ್ನೆಗಳನ್ನ ಕೇಳಿದ್ದು ಎಲ್ಲದಕ್ಕೂ ಹಂಸಲೇಖ ಅವರು ಉತ್ತರಿಸಿದ್ದಾರೆ. ಅನುಮಾನಗಳು ಬಂದಲ್ಲಿ ಮತ್ತೆ ವಿಚಾರಣೆಗೆ ಬರವಂತೆ ಸೂಚಿಸಿದ್ದಾರೆ ಎಂದು ಹೇಳಿದರು.