Haripriya : ನನ್ನ ಫೇವರೇಟ್ ಆಸನ ನೋಡಿಕೊಳ್ಳಿ ಎಂದು ಚಾಪೆ ಮೇಲೆ ಯೋಗ ದಿನವೇ ಹರಿಪ್ರಿಯಾ ಎಡವಟ್ಟು..!

By Infoflick Correspondent

Updated:Thursday, June 23, 2022, 20:46[IST]

Haripriya : ನನ್ನ ಫೇವರೇಟ್ ಆಸನ ನೋಡಿಕೊಳ್ಳಿ ಎಂದು ಚಾಪೆ ಮೇಲೆ ಯೋಗ ದಿನವೇ ಹರಿಪ್ರಿಯಾ ಎಡವಟ್ಟು..!

ವೃತ್ತಿಪರವಾಗಿ ಹರಿಪ್ರಿಯಾ ಎಂದು ಕರೆಯಲ್ಪಡುವ ಶ್ರುತಿ ಚಂದ್ರಸೇನಾ ಅವರು ಭಾರತೀಯ ನಟಿ ಆಗಿದ್ದು ಹಾಗೆ ರೂಪದರ್ಶಿಯಾಗಿಯೂ ಸಹ ಗಮನ ಸೆಳೆದಿದ್ದಾರೆ. ಹೌದು ಕನ್ನಡದ ನಟಿ ಹರಿಪ್ರಿಯಾ ಅವರು ಹೆಚ್ಚು ಕನ್ನಡ ಚಿತ್ರದ ಮೂಲಕವೆ ಬೆಳಕಿಗೆ ಬಂದು ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಅವರು ಕೆಲವು ತಮಿಳು, ಮತ್ತು ತೆಲುಗು ಚಿತ್ರಗಳ ಜೊತೆಗೆ ಮುಖ್ಯವಾಗಿ ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಹರಿಪ್ರಿಯಾ ಉಗ್ರಂ, ರನ್ನ, ರಿಕಿಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸಿದ ನಂತರ ಕನ್ನಡ ಚಿತ್ರರಂಗದಲ್ಲಿ ಸ್ಥಾಪಿತ ನಟಿಯಾದರು. ನೀರ್ ದೋಸೆ, ಭರ್ಜರಿ, ಸಂಹಾರ, ಲೈಫ್ ಜೊತೆ ಒಂದ್ ಸೆಲ್ಫಿ, ಬೆಲ್ ಬಾಟಮ್, ಡಿ/ಓ ಹಾಗೆ ಪಾರ್ವತಮ್ಮ ಮತ್ತು ಬಿಚ್ಚುಗತ್ತಿ – ಅಧ್ಯಾಯ 1, ದಳವಾಯಿ ಡಾಂಗೆ ಚಿತ್ರಗಳು ಇವರಿಗೆ ಪ್ರಸಿದ್ದಿ ತಂದು ಕೊಟ್ಟಿವೆ..

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳ ಜೊತೆ ಲೈವ್ ನಲ್ಲಿ ಮಾತನಾಡುತ್ತಾರೆ. ಕೆಲವೊಂದಿಷ್ಟು ವಿಚಾರಗಳ ಬಗ್ಗೆ ಮತ್ತು ಸಿನಿಮಾ ವಿಚಾರಗಳ ಕುರಿತು ಮಾತನಾಡುವ ಉದ್ದೇಶದಿಂದ ಈ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಣುತ್ತಲೇ ಇರುತ್ತಾರೆ ಹರಿಪ್ರಿಯಾ ಅವರು. ಹೌದು ಹರಿಪ್ರಿಯಾ ಅವರು ಅವರದೇ ಆದ ಅಪಾರ ಅಭಿಮಾನಿ ಬಳಗ ಕೂಡ ಗಿಟ್ಟಿಸಿಕೊಂಡಿದ್ದಾರೆ ಎನ್ನಬಹುದು. ಕನ್ನಡದ ಮೋಸ್ಟ್ ಬ್ಯೂಟಿಫುಲ್ ನಟಿ ಹರಿಪ್ರಿಯಾ ಅವರು ಇತ್ತೀಚಿಗೆ ಇಂಟರ್ನ್ಯಾಷನಲ್ ಯೋಗ ಡೇ ದಿನ ಮತ್ತೆ ಬಹಳ ದಿನಗಳ ಬಳಿಕ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡೀಯೋ ಮೂಲಕ ತಮ್ಮ ಮಾತನ್ನು ಆರಂಭಿಸಿ ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಹರಿಪ್ರಿಯಾ, ಹಾಗೆ ಎಲ್ಲರಿಗೂ ಹ್ಯಾಪಿ ಇಂಟರ್ನ್ಯಾಶನಲ್ ಯೋಗ ಡೆ ಎಂದರು. 

ನಂತರ ನನ್ನ ಫೆವರೇಟ್ ಆಸನವನ್ನು ನಿಮಗೆ ಇಂದು ನಾನು ತೋರಿಸುತ್ತೇನೆ ಎಂದು ನಟಿ ಹರಿಪ್ರಿಯಾ ಹೇಳಿಕೊಂಡರು. ನಂತರ ಸೀದಾ ಹೋಗಿ ಚಾಪೆ ಹಾಸಿ ಅದರ ಮೇಲೆ ಕುಳಿತು ಒಂದು ಬಿಗಿಯಾದ ಉಸಿರನ್ನು ತೆಗೆದುಕೊಳ್ಳಿರಿ ಎನ್ನುತ್ತಾ ಉಸಿರು ಮೇಲೆ-ಕೆಳಗೆ ಮಾಡಿ ಎಂದು ಹೇಳಿದ್ದು, ತದನಂತರ ನನ್ನ ಫೇವರೆಟ್ ಆಸನವನ್ನು ನೋಡಿಕೊಳ್ಳಿ ಎಂದ ನಟಿ ಹರಿಪ್ರಿಯಾ ಚಾಪೆ ಮೇಲೆ ಸೀದಾ ಮಲಗೆ ಬಿಟ್ಟರು. ಹಾಗೆ ಇದೇ ನನ್ನ ಫೆವರೇಟ್ ಆಸನ ಎಂದು ಎಲ್ಲರನ್ನೂ ನಗೆಯಲ್ಲಿ ತೇಲಾಡುವಂತೆ ಮಾಡಿದರು ಹರಿಪ್ರಿಯಾ. ಇವರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಕೆಲವರು ನಾನು ತುಂಬಾ ಸೀರಿಯಸ್ಸಾಗಿ ನಿಮ್ಮ ವಿಡೀಯೋ ನೋಡುತ್ತಿದ್ದೇ. ನಿಮ್ಮ ಫೇವರೆಟ್ ಯೋಗದ ಆಸನ ಯಾವುದಿರಬಹುದು ಎಂದು ಕಾಯುತ್ತಿದ್ದೆ, ಆದರೆ ನೀವು ಈ ರೀತಿ ಮಾಡಿದಿರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಾವು ಕೂಡ ಇದನ್ನೇ ಪಾಲು ಮಾಡುತ್ತೇವೆ ಹೆಚ್ಚಾಗಿ ಎಂದು ನಗುತ್ತಲೇ ಸಂತೋಷದಿಂದ ಬರೆದುಕೊಂಡಿದ್ದಾರೆ. ಅಸಲಿಗೆ ನಟಿ ಹರಿಪ್ರಿಯಾ ಅವರ ಈ ವಿಡಿಯೋ ಹೇಗಿದೆ ಗೊತ್ತಾ..? ಇಲ್ಲಿ ನೋಡಿ ಹರಿಪ್ರಿಯ ಅವರ ಅವತಾರವ, ಮತ್ತು ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ನಮ್ಮ ಕಮೆಂಟ್ ಸೆಕ್ಷನಲ್ಲಿ ತಿಳಿಸಿ ಧನ್ಯವಾದಗಳು...

 
 
 
 
 
 
 
 
 
 
 
 
 
 
 

A post shared by Hariprriya (@iamhariprriya)