Harish Rai : ಹರೀಶ್ ರಾಯ್ ಗೆ ಸ್ಟಾರ್ ನಟರಿಂದ ಹರಿದು ಬಂತು ಸಹಾಯ..! ಯಾರು? ಎಷ್ಟು ಕೊಟ್ಟಿದ್ದಾರೆ ನೋಡಿ

By Infoflick Correspondent

Updated:Friday, August 26, 2022, 14:45[IST]

Harish Rai : ಹರೀಶ್ ರಾಯ್ ಗೆ ಸ್ಟಾರ್ ನಟರಿಂದ ಹರಿದು ಬಂತು ಸಹಾಯ..! ಯಾರು? ಎಷ್ಟು ಕೊಟ್ಟಿದ್ದಾರೆ ನೋಡಿ

ಉಗ್ರಂ ಚಿತ್ರದ ಮೂಲಕ ನಿರ್ದೇಶಕ ಆಗಿ ಹೊರ ಹೊಮ್ಮಿದ್ದ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಭಾಗ-1 ಭಾಗ-2 ಸಿನಿಮಾದಲ್ಲಿ ಹರೀಶ್ ರಾಯ್ ಅವರು ಖಾಸಿಮ್ ಚಾಚಾ ಪಾತ್ರದಲ್ಲಿ ಮಿಂಚಿದ್ದಾರೆ. ಹಾಗೇನೇ ಕೆಜಿಎಫ್ ಮೂಲಕ ಇಡಿ ದೇಶಕ್ಕೆ ಮಾತ್ರ ಅಲ್ಲದೆ ಹೊರದೇಶಕ್ಕೂ ಕೂಡ ಚಾಚಾ ಅವರ ಪಾತ್ರ ಕೂಡ ತುಂಬಾ ಗಟ್ಟಿಯಾಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಹೌದು, ಚಾಚಾ ಪಾತ್ರ ಮಾಡಿದ ನಟ ಹರಿಶ್ ರಾಯ್ ಅವರು ಇದೀಗ ಕ್ಯಾನ್ಸರ್ ಸಮಸ್ಯೆಗೆ ಒಳಗಾಗಿದ್ದಾರೆ.. ಅವರೇ ಹೇಳಿಕೊಂಡಂತೆ ನಾನು ಕೆಜಿಎಫ್ ಸಿನಿಮಾದ ಶೂಟಿಂಗ್ ವೇಳೆ ಈ ಸಮಸ್ಯೆ ಎದುರಿಸಿದೆ. ಅಂದು ನನಗೆ ಗಂಟಲು ಒಳಗೆ ಕ್ಯಾನ್ಸರ್ ಗಡ್ಡೆ ಇರುವುದು ಗೊತ್ತಾಗಿತ್ತು. ಆದರೆ ಇದನ್ನು ನಾನು ಹೊರಗಡೆ ಹೇಳಲಿಲ್ಲ. ಒಂದು ವೇಳೆ ಆಗಲೇ ನಾನು ಹೇಳಿದರೆ ನನಗೆ ಸಿನಿಮಾ ಆಫರ್ಗಳು ಕಡಿಮೆಯಾಗಬಹುದು ಎಂದು ಹೇಳಿಕೊಳ್ಳಲಿಲ್ಲ.  

ಈ ಸಿನಿಮಾ ಗೆದ್ದ ಮೇಲೆ ಇನ್ನಷ್ಟು ಆಫರ್ ಗಳು ಬರುತ್ತವೆ ಆಗ ಹಣ ಬರುತ್ತದೆ. ಮನೆಯಲ್ಲಿ ಸಮಸ್ಯೆ ಬೇರೆ ಮಕ್ಕಳು ಚಿಕ್ಕವರು ಎಂದು ತುಂಬಾ ಹೆದರಿದೆ. ಹಣ ಬಂದ ಬಳಿಕ ನಾನು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಇಲ್ಲಿಯವರೆಗೆ ಸುಮ್ಮನೆ ಇದ್ದೆ ಎಂದು ತಮ್ಮ ನೋವನ್ನ ಹಂಚಿಕೊಂಡಿದ್ದಾರೆ. ಹೌದು. ಕ್ಯಾನ್ಸರ್ ಹರೀಶ್ ರಾಯ್ ಗೆ ಇದೀಗ ನಾಲ್ಕನೇ ಸ್ಟೇಜಿನಲ್ಲಿ ಇದೆಯಂತೆ. ಹರಿಶ್ ರಾಯ್ ಅವರು ಕೆಲವರ ಕಡೆಯಿಂದ ಆರಂಭದಲ್ಲಿ ಖುದ್ದಾಗಿ ಸಂಬಂಧಿಕರ ಬಳಿ ಸಹಾಯ ಬೇಡಿದ್ದು ಯಾರು ಸಹಾಯ ಮಾಡಿಲ್ಲವಂತೆ. ಆದ್ರೆ ಇದೀಗ ಸಮಾಜಕ ಜಾಲತಾಣದಲ್ಲಿ ಈ ಸುದ್ದಿ ಹೊರ ಬರತ್ತಿದ್ದಂತೆ ಅವರಿಗೆ ಸಾಕಷ್ಟು ಜನರು ಫೋನ್ ಮಾಡಿ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ತಿಂಗಳಿಗೆ 3-4 ಲಕ್ಷ ಮೆಡಿಸಿನ್ಗೆ ಖರ್ಚಾಗುತ್ತಿದ್ದು, 8 ರಿಂದ 10 ತಿಂಗಳು ಚಿಕಿತ್ಸೆ ಅವಶ್ಯಕತೆ ಹರಿಶ್ ರಾಯ್ ಅವರಿಗೆ ಇದೆ ಎಂದು ಹೇಳಲಾಗುತ್ತಿದೆ.

ಹೌದು ನಟ ಹರೀಶ್ ರಾಯ್ ಅವರು ಹೇಳುವ ಹಾಗೆ ನಾನು ಮೊದಲೇ ಒಂದು ವಿಡಿಯೋ ಮಾಡಿಟ್ಟು ನನ್ನ ಪತ್ನಿಗೆ ಆ ವಿಡಿಯೋವನ್ನು ತೋರಿಸಿದ್ದೆ. ನನಗೆ ಒಂದು ವೇಳೆ ಹೆಚ್ಚು ಕಡಿಮೆ ಏನಾದರೂ ಆದರೆ, ಅಭಿಮಾನಿಗಳ ಬಳಿ ಇದನ್ನ ತೋರಿಸು ಸಹಾಯ ಮಾಡುತ್ತಾರೆಂದು ಹೇಳಿಕೊಂಡಿದ್ದೆ. ಆದರೆ ಇದೀಗ ಪರಿಸ್ಥಿತಿ ತುಂಬಾ ಮುಂದುವರೆದ ಕಾರಣಕ್ಕೆ ನನಗೆ ಕ್ಯಾನ್ಸರ್ ಇರುವ ವಿಷಯವನ್ನು ಹೇಳುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ಜೊತೆಗೆ ಬೇರೆ ಬೇರೆ ಸಿನಿಮಾ ಕ್ಷೇತ್ರದಲ್ಲಿ ನಾನು ಮೊದಲೂ ಕೆಲಸ ಮಾಡಿದ್ದೇನೆ. ಆದರೂ ಯಾರು ಅಷ್ಟು ಗೌರವ ನೀಡಲಿಲ್ಲ ಅವಮಾನಿಸಿದ್ದರು. ಆದರೆ ಇದೀಗ ಕನ್ನಡದ ಕೆಜಿಎಫ್ ಸಿನಿಮಾ ಮೂಲಕ ದುಬೈ ನಿಂದ ನನಗೆ ಕಾಲ್ ಮಾಡಿ ವಿಚಾರಿಸುತ್ತಾರೆ. ಹಾಗೆ ಸ್ಟಾರ್ ನಟರೊಬ್ಬರು ಈ ಸುದ್ದಿ ತಿಳಿದು ನಿಮ್ಮ ಆರೋಗ್ಯಕ್ಕೆ ಏನು ಬೇಕು ಅದೆಲ್ಲವನ್ನು ನಾನು ಕೊಡುತ್ತೇನೆ, ನಾನು ಸಹಾಯ ಮಾಡುತ್ತೇನೆ, ಅದೆಷ್ಟು ಹಣ ಖರ್ಚು ಆದ್ರೂ ಆಗಲಿ ಕೇಳಿ ನಾವು ಕೊಡುತ್ತೇವೆ. ಆದರೆ ಈ ಸುದ್ದಿಯನ್ನು ಎಲ್ಲಿಯೂ ಹೇಳಬೇಡಿ..ನಾವು ಕೊಟ್ಟಿದ್ದೇವೆ ಎಂದು ಹೇಳಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿ ಹರೀಶ್ ಅವರು ಇದೀಗ ಎಲ್ಲ ವಿಷಯವನ್ನು ಬಿಚ್ಚಿಟ್ಟಿದ್ದಾರೆ..

ಹಾಗೆ ಸಾಕಷ್ಟು ಜನರು ಈ ವಿಷಯ ಹೊರ ಬರುತ್ತಿದ್ದಂತೆ ನನಗೆ ಫೋನ್ ಮಾಡಿ ಧೈರ್ಯ ಹೇಳಿ ನನಗೆ ಧೈರ್ಯದಿಂದ ಇರುವಂತೆ ಹೇಳುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ನಾನು ಜನರನ್ನು ಗಳಿಸಿದ್ದೇನೆ ಎಂದೇನಿಸುತ್ತದೆ ಎಂದು ಹರೀಶ್ ರಾಯ್ ಅವರು ನೋವನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ಕೂಡ ಇವರ ಅಕೌಂಟಿಗೆ ಈಗಾಗಲೆ ಹಣವನ್ನ ಕಳಿಸುವ ಕೆಲಸ ಮಾಡುತ್ತಿದ್ದು, ಎಲ್ಲರೂ ಹರೀಶ್ ರಾಯ್ ಅವರ ಆರೋಗ್ಯ ಸಮಸ್ಯೆ ಬೇಗ ಬಗೆಹರಿಯಲಿ ಎಂದು ಧಾವಿಸುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನೀವು ಅವರ ಆರೋಗ್ಯದ ಸಮಸ್ಯೆಗೆ ಸಹಾಯ ಮಾಡುವಲ್ಲಿ ಕೈಜೋಡಿಸಿ ಧನ್ಯವಾದಗಳು...