ನನ್ನ ಶಾಲೆಯ ಗೆಳೆಯರು ಅಪ್ಪು ಸರ್ ಜೊತೆ ಸೆಲ್ಫಿ ಕೇಳಲು ಬಂದಿದ್ರು..! ಅಪ್ಪು ಮಾಡಿದ್ದೇನು..? ಹರ್ಷ ಹೇಳಿದ್ದಿಷ್ಟು

By Infoflick Correspondent

Updated:Monday, March 7, 2022, 18:01[IST]

ನನ್ನ ಶಾಲೆಯ ಗೆಳೆಯರು ಅಪ್ಪು ಸರ್ ಜೊತೆ ಸೆಲ್ಫಿ ಕೇಳಲು ಬಂದಿದ್ರು..! ಅಪ್ಪು ಮಾಡಿದ್ದೇನು..? ಹರ್ಷ ಹೇಳಿದ್ದಿಷ್ಟು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  (Puneeth Rajkumar)  ಅವರ ಅಗಲಿಕೆ ಇಂದಿಗೂ ಕೂಡ ಅರಗಿಸಿಕೊಳ್ಳಲಾಗದ ವಿಷಯ. ಪುನೀತ್ ಅವರು ಎಲ್ಲರೊಟ್ಟಿಗೆ ಹೆಚ್ಚು ನಂಟು ಹೊಂದಿದ್ದಂತವರು. ಕೆಲವರು ಅವರದ್ದೇ ಆದ ನಂಟನ್ನು ಪುನೀತ್ ಅವರ ಜೊತೆ ಹೆಚ್ಚು ಸಮಯ ಕಳೆದಿದ್ದರೆ. ಅದೇ ರೀತಿ ನಂಟನ್ನು ಸಹ ಇಟ್ಟುಕೊಂಡಿದ್ದವರು. ಪುನೀತ್ ಅವರ ಜೊತೆಗೆ ಕೆಲವರದ್ದು ಒಂದೊಂದು ನಂಟು ಇದೆ. ಅದೇ ರೀತಿ ರಾಜಾಹುಲಿ ಖ್ಯಾತಿ ನಟ ಹರ್ಷ ಅವರಿಗೂ ಇತ್ತಂತೆ. ಜೇಮ್ಸ್ ನಲ್ಲಿ ಒಂದು ಪಾತ್ರ ಮಾಡಿದ ನಟ ಹರ್ಷ ಅವರು ನಿನ್ನೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಅಪ್ಪು ಅವರ ಒಂದು ಘಟನೆ ಬಗ್ಗೆ ನೆನೆದು ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಹೌದು ಹರ್ಷ ಅವರು ಜೇಮ್ಸ್ ನಲ್ಲಿ ಅಭಿನಯ ಮಾಡುತ್ತಿರುವಾಗ ಶೂಟಿಂಗ್ ಸೆಟ್ಟಿಗೆ ಅವರ ಸ್ಕೂಲ್ ಮೇಟ್ಸ್ ಗೆಳೆಯರು ಬಂದಿದ್ದರು.

ಅಪ್ಪು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕಾಗಿ ಹರ್ಷ  (Harsha) ಜೊತೆ ಮಾತನಾಡಿದ್ದಾರಂತೆ. ಅದರ ಪ್ರಕಾರ ನಟ ಹರ್ಷ ಅವರು ಲಂಚ್ ಟೈಮ್ ನಲ್ಲಿ ನೀವು ಬಂದರೆ ಕೇವಲ ಸೆಲ್ಫಿ ಮಾತ್ರ ಸಿಗುತ್ತೆ, ಸಾಯಂಕಾಲದವರೆಗೂ ಇದ್ದರೆ ಅವರ ಜೊತೆ ಐದು ನಿಮಿಷ ನೀವೂ ಮಾತಾನಾಡಬಹುದು ಎಂದು ಹೇಳಿ ಸಮಯ ಕಳೆಯಬಹುದು ಎಂದಿದ್ದರಂತೆ. ಆದ್ರೆ ಅಂದು ಸಾಯಂಕಾಲ ಆರು ಗಂಟೆಗೆ ಮಳೆ ಬರಲು ಆರಂಭಿಸಿತು. ಪುನೀತ್ ಸರ್ ಹೊರಟುಹೋದರು. ಆಗ ನನ್ನ ಗೆಳೆಯರು ನನ್ನನ್ನು ಬೈದುಕೊಂಡಿದ್ದು, ಮತ್ತೆ ನಾನು ಪುನೀತ್ ಸರ್ ಅವರಿಗೆ ಕಾಲ್ ಮಾಡಿ, ಸರ್ ಎಲ್ಲಿದ್ದೀರಾ ಎಂದಾಗ, ಹೇಳು ಹರ್ಷ ಏನಾಯ್ತು ಹೇಳು ಎಂದರು. ನಾನು ನೆಲಮಂಗಲದ ಟೋಲ್ ಗೇಟ್ ಬಳಿ ಇದ್ದೇನೆ ಎಂದರು. ನಾನು ಸರ್ ನನ್ನ ಗೆಳೆಯರು ಬಂದಿದ್ದರು, ನಿಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದರು.   

ಆಗ ನಾನು ಸಾಯಂಕಾಲದವರೆಗೂ ಕಾಯಿರಿ ಎಂದು ನನ್ನ ಕಡೆಯಿಂದ ತಪ್ಪಾಗಿದೆ ಎಂದೇ. ಆ ಒಂದೇ ಮಾತಿಗೆ ಅಪ್ಪು ಸರ್ ಅವರು ಮಳೆಯಲ್ಲಿ ಮತ್ತೆ ಕಾರನ್ನು ತೆಗೆದುಕೊಂಡು ಮರಳಿ ಶೂಟಿಂಗ್ ಸ್ಪಾಟಿಗೆ ಬಂದು ಪುಟ್ಟ ಮಗುವಿನಂತೆ  ಎಲ್ಲರೊಟ್ಟಿಗೆ ಮಾತನಾಡಿ ಸೆಲ್ಫಿ ಕೊಟ್ಟಿದ್ದರು. ಅಂತಹ ಸ್ಟಾರ್ ನಟ ಈ ರೀತಿ ಇರುತ್ತಾರ ಅಂದುಕೊಂಡೇ ಮನುಷ್ಯ ಇದೀಗ ನಮ್ಮ ಜೊತೆಗಿಲ್ಲ ಎಂದರೆ ತುಂಬಾ ನೋವಾಗುತ್ತದೆ ಎಂದು ಹರ್ಷ ಅವರು ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿಯನ್ನು ಶೇರ್ ಮಾಡಿ....(video credit : news first kannada )