Mother's Day 2022 : ಅಮ್ಮನನ್ನು ವಿಲನ್ ಎಂದ ಹರ್ಷಿಕಾ ಪೂಣಚ್ಚ! ಏಕೆ ಗೊತ್ತೆ ?

By Infoflick Correspondent

Updated:Sunday, May 8, 2022, 19:24[IST]

Mother's Day 2022 : ಅಮ್ಮನನ್ನು ವಿಲನ್ ಎಂದ ಹರ್ಷಿಕಾ ಪೂಣಚ್ಚ! ಏಕೆ ಗೊತ್ತೆ ?

ಈಗಗಾಲೇ ಕನ್ನಡ, ತೆಲುಗು, ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿರುವ ಪ್ರತಿಭೆ ಹರ್ಷಿಕಾ ಪೂಣಚ್ಚ. ಪಾತ್ರದಿಂದ ಪಾತ್ರಕ್ಕೆ ಭಿನ್ನತೆ ಕಾಯ್ದುಕೊಳ್ಳುತ್ತಿರುವ ಹರ್ಷಿಕಾ ತಾಯಂದಿರ ದಿನದಂದು ತನ್ನ ತಾಯಿಯ ಬಗ್ಗೆ ಮಾತನಾಡಿದ್ದಾರೆ. ಮೊದಲು ವಿಲನ್ ಅನ್ನಿಸಿದ ತಾಯಿ ನಂತರ ಯಾವ ಕಾರಣದಿಂದ ಹಿರೋ ಆಗಿ ಕಂಡರು ? ಎಂದು  ಹರ್ಷಿಕಾ ಅಮ್ಮನನ್ನು ಇಷ್ಟ ಪಟ್ಟರು ? ಹೇಗೆ ಅಮ್ಮ ಮಾರ್ಗದರ್ಶನ ಮಾಡಿದರೂ ಪ್ರತಿಯೊಂದನ್ನು ಸವಿಸ್ತಾರವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ.  

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅಪ್ಪ ಹೀರೋ, ಗಂಡು ಮಕ್ಕಳಿಗೆ ಅಮ್ಮನ ಪ್ರೀತಿ ಹೆಚ್ಚು. ನನಗೂ ಅದೇ ರೀತಿ. ಅಪ್ಪನ ಜತೆಗೇ ಹೆಚ್ಚು ಸ್ನೇಹ. ಅಮ್ಮ ನನಗೆ ವಿಲನ್‌! ಅಮ್ಮ ತುಂಬಾ ಕಠಿಣವಾಗಿದ್ದರು. ಒಂದು ಸಣ್ಣ ತಪ್ಪು ಮಾಡಿದರೂ ಕೋಲು ತೆಗೆದುಕೊಂಡು ಹೊಡೆಯುತ್ತಿದ್ದರು. ಚಿಕ್ಕವಳಿದ್ದಾಗ ವಿಲನ್‌ ಆಗಿ ಕಂಡಿದ್ದ ಅಮ್ಮ, ನನಗೆ ಈಗ ಹೀರೋ! ಎಂದು ಅಮ್ಮನನ್ನು ಮೆಚ್ಚಿಕೊಂಡಿದ್ದಾರೆ.  

ನನಗೆ ನನ್ನ ತಾಯಿ ಫ್ರೆಂಡ್‌ ಆಗಿದ್ದು ನನ್ನ ತಂದೆ ತೀರಿಕೊಂಡ ಮೇಲೆ. ಯಾಕೆಂದರೆ ನಾನು ಅವರಿಗೆ ಒಬ್ಬಳೇ ಮಗಳು. ಎಲ್ಲವನ್ನು ಅಪ್ಪನ ಜತೆ ಹೇಳಿಕೊಳ್ಳುತ್ತಿದ್ದೆ. ಅಪ್ಪ ಹೋದ ಮೇಲೆ ತಾಯಿಯೇ ಅಪ್ಪನಂತೆ ನನಗೆ ಫ್ರೆಂಡ್‌ ಆದರು. ಅಮ್ಮನ ಮೇಲಿನ ಆಗಿನ ಭಯ, ಈಗ ರೆಸ್ಪೆಕ್ಟ್ ಆಗಿ ಬದಲಾಗಿದೆ. ಅದು ಅಮ್ಮನ ಪ್ರೀತಿಗೆ ಇರುವ ಶಕ್ತಿ. ಎಂದು ಅಮ್ಮನ ಪ್ರೀತಿಯನ್ನು ವಿವರಿಸಿದ್ದಾರೆ. 

ಹಳೆಯ ದಿನಗಳ ನೆನಪನ್ನು ಮೆಲಕು ಹಾಕುತ್ತಾ ಹರ್ಷಿಕಾ ಒಂದು ಘಟನೆಯನ್ನು ಸ್ಮರಿಸಿದ್ದಾರೆ;
ಬಾಲಿವುಡ್‌ನಲ್ಲಿ ನಾನು ಒಂದು ಸಿನಿಮಾ ಮಾಡಬೇಕಿತ್ತು. ಫೋಟೋಶೂಟ್‌ ಕೂಡ ಆಗಿತ್ತು. ಮಾತುಕತೆ ಕೂಡ ಮುಗಿದಿತ್ತು. ಆ ಮೇಲೆ ಆ ಸಿನಿಮಾ ಕಡೆಯಿಂದ ಬೇರೆ ರೀತಿ ಒತ್ತಾಯಗಳು ಬರತೊಡಗಿದವು. 'ಕಮಿಟ್‌ಮೆಂಟ್‌' ಅನ್ನೋ ಪದ ಕೇಳಿ ಸಿಟ್ಟು ಬಂತು. ಸಿನಿಮಾ ರಿಜೆಕ್ಟ್ ಮಾಡಿದೆ. ನಾನು ಅಂಥ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ ಆಗಿದ್ದು ಅಮ್ಮನ ಸಲಹೆ. ಒಂದು ವೇಳೆ ಆಕೆ
ಅಮ್ಮ ನನಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡದೆ ಹೋಗಿದ್ದರೆ ಇಂದು ನನ್ನ ಪರಿಸ್ಥಿತಿ ಊಹಿಸಲು ಅಸಾಧ್ಯ! 

ಇಂದು ನಾನು ಕೆಟ್ಟಹೆಸರು ತಂದುಕೊಳ್ಳದೆ ಚಿತ್ರರಂಗದಲ್ಲಿ ಇದ್ದೇನೆ ಎಂದರೆ ಅದಕ್ಕೆ ಅಮ್ಮ ನನ್ನ ವಿಚಾರದಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು, ಅವರ ಮಾರ್ಗದರ್ಶನವೇ ಕಾರಣ. ಎಂದು ತಾಯಿಯನ್ನು ಕೊಂಡಾಡಿದ್ದಾರೆ.