ಅಣ್ಣನ ಮದುವೆಯಲ್ಲಿ ಮುದ್ದಾಗಿ ಕಂಡ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ..! ವಿಡಿಯೋ ಇಲ್ಲಿದೆ

By Infoflick Correspondent

Updated:Monday, April 18, 2022, 15:54[IST]

ಅಣ್ಣನ ಮದುವೆಯಲ್ಲಿ ಮುದ್ದಾಗಿ ಕಂಡ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ..! ವಿಡಿಯೋ ಇಲ್ಲಿದೆ

ನಟಿ ಹರ್ಷಿಕಾ ಪೂಣಚ್ಚ ಅವರು 1 ಮೇ 1993 ರಂದು ಜನಿಸಿದ ಭಾರತೀಯ ನಟಿ, ಅವರು ಮುಖ್ಯವಾಗಿ ಕನ್ನಡ ಚಲನಚಿತ್ರಗಳಲ್ಲಿ ಮತ್ತು ಕೊಂಕಣಿ, ಕೊಡವ, ತೆಲುಗು, ಮಲಯಾಳಂ ಮತ್ತು ಈಗ ಭೋಜ್‌ಪುರಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ನಟಿ ಹರ್ಷಿಕಾ ಪೂಣಚ್ಚ ಅವರು 2008 ರಲ್ಲಿ ಕನ್ನಡ ಚಲನಚಿತ್ರ ಪಿಯುಸಿ ಮೂಲಕ ಖ್ಯಾತಿಯನ್ನು ಪಡೆದರು. ನಟಿ ಹರ್ಷಿಕಾ ಪೂಣಚ್ಚ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಒಂದು ಹಳ್ಳಿಯಲ್ಲಿ. ಹೌದು ಹುಟ್ಟಿದ್ದು ಕೊಡಗಿನಲ್ಲಾದರೂ, ಬೆಳೆದಿದ್ದು ಮಾತ್ರ  ಬೆಂಗಳೂರಿನಲ್ಲಿ ಎನ್ನಬಹುದು. ಹೌದು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಟಿ ಹರ್ಷಿಕಾ ಪೂಣಚ್ಚ ಅವರ 18ನೇ ವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ.

ಪಿಯುಸಿ ಎಂಬ ಸಿನಿಮಾ ಮೂಲಕ 2008ರಲ್ಲಿ ಹರ್ಷಿಕಾ ಪೂಣಚ್ಚ ಅವರು ಕನ್ನಡ ಸಿನಿಮಾರಂಗದಲ್ಲಿ ಕಾಣಿಸುತ್ತಾರೆ. ನೋಡಲು ತುಂಬಾ ಮುದ್ದಾಗಿರುವ ನಟಿ ಹರ್ಷಿಕಾ ಪೂಣಚ್ಚ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜಾಕಿ ಸಿನಿಮಾದಲ್ಲಿಯೂ ಕೂಡ ಸೈಡ್ ಪಾತ್ರ ಮಾಡಿದ್ದು ಈ ಸಹಾಯಕ ಪಾತ್ರಕ್ಕೆ ನಟಿ ಹರ್ಷಿಕಾ ಪೂಣಚ್ಚ ಅವರು ಬೆಸ್ಟ್ ಸೈಡ್ ಪಾತ್ರದ ಪ್ರಶಸ್ತಿಯನ್ನು ಕೂಡ ಗಳಿಸಿಕೊಳ್ಳುತ್ತಾರೆ. ಹರ್ಷಿಕಾ ಪೂಣಚ್ಚ ಅವರು ಸದಾ ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇರುವ ನಟಿಯಾಗಿದ್ದು, ಇದೀಗ ಅವರ ಅಣ್ಣನ ಮದುವೆಯಲ್ಲಿ ಕಾಣಿಸಿದ್ದಾರೆ. ಹರ್ಷಿಕಾ ಪೂಣಚ್ಚ ಅವರು ಅವರ ಅಣ್ಣನ ಮದುವೆಯಲ್ಲಿ ತುಂಬಾನೇ ಮುದ್ದಾಗಿ ಕಾಣಿಸಿದ್ದಾರೆ. 

ಕೊಡಗಿನ ಶೈಲಿಯಲ್ಲಿ ಸೀರೆ ತೊಟ್ಟಿರುವ ನಟಿ ಹರ್ಷಿಕಾ ಪೂಣಚ್ಚ ಅವರ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅವರ ಅಣ್ಣನ ಮದುವೆಯಲ್ಲಿ ಕಾಣಿಸಿದ ರೀತಿ ನೋಡಿ ಅಭಿಮಾನಿಗಳು ವಾವ್ ಎಂಬುದಾಗಿ ಕಮೆಂಟ್ ಮಾಡಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವು ಕೂಡ ಈ ವೀಡಿಯೋ ನೋಡಿದ ಬಳಿಕ, ಇಷ್ಟವಾದರೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು....(video credit : ma star kannada tv )