ಅಪ್ಪು ಜರ್ನಿಯನ್ನು ಹಾಗೆ ಮುಂದುವರೆಸೋಣ ಎಂದ ಹೊಂಬಾಳೆ ಫಿಲ್ಮ್ಸ್..! ಯುವಗೆ ಹೊಸ ಸಿನಿಮಾ..!

By Infoflick Correspondent

Updated:Wednesday, April 27, 2022, 11:15[IST]

ಅಪ್ಪು ಜರ್ನಿಯನ್ನು ಹಾಗೆ ಮುಂದುವರೆಸೋಣ ಎಂದ ಹೊಂಬಾಳೆ ಫಿಲ್ಮ್ಸ್..! ಯುವಗೆ ಹೊಸ ಸಿನಿಮಾ..!

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆಗೆ ಇಲ್ಲ ಆದರೂ ಕೂಡ ಅಪ್ಪು ನೆನಪು ಪ್ರತಿದಿನ ಹೆಚ್ಚು ಕಾಡುತ್ತದೆ. ಅವರು ದೈಹಿಕವಾಗಿ ಇದೀಗ ನಮ್ಮ ಜೊತೆಗೆ ಇಲ್ಲದಿರಬಹುದು. ಆದರೆ ಅಪ್ಪು ನೆನಪು ಸದಾ ಕನ್ನಡಿಗರ ಹೃದಯದಲ್ಲಿ ಇದ್ದೇಇರುತ್ತದೆ. ಕನ್ನಡಿಗರ ಪ್ರೀತಿ ಪಾತ್ರವಾಗಿ ಇದ್ದಷ್ಟು ದಿನ ರಾಜನಂತೆ ಮೆರೆದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಜ ಜೀವನದಲ್ಲಿ ದೊಡ್ಡ ಪಾತ್ರವಹಿಸಿದ್ದರು. ಕೇವಲ ತೆರೆಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಸಾಕಷ್ಟು ಜನರ ಕಷ್ಟಗಳಿಗೆ ಸ್ಪಂದಿಸಿ ಹೃದಯವಂತ ಆಗಿ ದೇವರಾಗಿಯೇ ಹೋದರು. ಹೌದು ಪುನೀತ್ ರಾಜಕುಮಾರ್ ಅವರ ಸಿನಿಮಾಗಳಿಗೆ ಹೊಂಬಾಳೆ ಫಿಲಂಸ್ ಸಂಸ್ಥೆ ಚಿತ್ರಗಳನ್ನು ಈ ಮುಂಚೆಯೇ ನಿರ್ಮಾಣ ಮಾಡುತ್ತಿತ್ತು. 

ಆದರೆ ಇದೀಗ ಅಪ್ಪು ಅವರಿಲ್ಲ. ಅವರ ನೆನಪಿನಲ್ಲೇ ಅದೇ ಪ್ರೀತಿಯನ್ನು ನಟ ರಾಘಣ್ಣನ ಕಿರಿಯ ಪುತ್ರ ಯುವ ರಾಜ್ ಕುಮಾರ ಮೂಲಕ ಮುಂದುವರಿಸಿಕೊಂಡು ಹೋಗೋಣ ಎಂದು ಇಂದು ಬೆಳಿಗ್ಗೆ ಅವರ ಫೇಸ್ ಬುಕ್ ಖಾತೆಯಲ್ಲಿ ಈ ಖುಷಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಯುವರಾಜ್ ಕುಮಾರ್ ಅವರ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಹೊಂಬಾಳೆ ಫಿಲಂಸ್ ಅವರು ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ, ಇರಲಿ ನಿಮ್ಮ ಅಪ್ಪುಗೆ ಲೆಜಿಸಿ ಕಂಟಿನ್ಯೂ ಎಂದಿದ್ದಾರೆ. ಇವರ ನಿರ್ಮಾಣದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ನಟ ಯುವ ರಾಜ್ ಕುಮಾರ್ ಅವರ ಮುಂದಿನ ಸಿನಿಮಾಗೆ ಹೊಂಬಾಳೆ ಫಿಲಂಸ್ ಸಂಸ್ಥೆಯ ನಿರ್ಮಾಣ ಮಾಡುತ್ತಿದ್ದಾರೆ.ಈ ಖುಷಿ ವಿಚಾರ ತಿಳಿದ ಅಪ್ಪು ಹಾಗೂ ಯುವರಾಜ್ ಕುಮಾರ್ ಅವರ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.

ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಯಾವ ರೀತಿ ದೊಡ್ಡ ಮಟ್ಟಕ್ಕೆ ಬೆಳೆದರೋ, ಅದೇ ರೀತಿ ರಾಘಣ್ಣ ಅವರ ಕಿರಿಯ ಪುತ್ರ ಯುವರಾಜಕುಮಾರ್ ಅವರು ದೊಡ್ಡದಾಗಿ ಸಾಧನೆ ಮಾಡಲಿ, ಹಾಗೆ ಈ ನಿಜ ಜೀವನದಲ್ಲಿ ಹೆಚ್ಚು ಹೀರೋ ಆಗಲಿ ಎಂದು ನಾವು ಕೂಡ ಆಶಿಸೋಣ. ಯುವರಣ ಧೀರ ಕಂಠೀರವ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಯುವರಾಜ ಕುಮಾರ್ ಅವರು ದೊಡ್ಡದಾಗಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಅತ್ತ ಪ್ಯಾನ್ ಇಂಡಿಯಾ ಸಿನಿಮಾದಲ್ಲಿಯೂ ಯಶಸ್ವಿ ಆಗಲಿ ಎಂದು ಬೇಡಿಕೊಳ್ಳೋಣ ಧನ್ಯವಾದ...