Mohan Juneja : ಮೋಹನ್ ಜುನೆಜಾ ಕುಟುಂಬಕ್ಕೆ ನೆರವಾದ ಹೊಂಬಾಳೆ ಸಂಸ್ಥೆ..! ನಿಜವಾಗಿಯೂ ಕೊಟ್ಟ ಹಣವೆಷ್ಟು..?

By Infoflick Correspondent

Updated:Monday, May 9, 2022, 18:06[IST]

Mohan Juneja :  ಮೋಹನ್ ಜುನೆಜಾ ಕುಟುಂಬಕ್ಕೆ ನೆರವಾದ ಹೊಂಬಾಳೆ ಸಂಸ್ಥೆ..! ನಿಜವಾಗಿಯೂ ಕೊಟ್ಟ ಹಣವೆಷ್ಟು..?

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ಪೋಷಕ ನಟ ಹಾಸ್ಯ ಕಲಾವಿದ ಮೋಹನ್ ಜುನೇಜ ಅವರು ಮೊನ್ನೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಇತ್ತೀಚಿಗೆ ಬಿಡುಗಡೆ ಆದ ಕೆಜಿಎಫ್ ಭಾಗ-2 ದೊಡ್ಡಮಟ್ಟದಲ್ಲಿ ಹಿಟ್ ಆಗಿದೆ. ಈ ಸಿನಿಮಾದಲ್ಲಿ ನಟ ಮೋಹನ್ ಜುನೇಜ ಅವರು ಕೂಡ ಒಂದು ಪಾತ್ರದಲ್ಲಿ ಕಾಣಿಸಿದ್ದು ಇಡೀ ವಿಶ್ವಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಭಾಗ ಒಂದರಿಂದ ಹಿಡಿದು ಭಾಗ2 ಸಿನಿಮಾದಲ್ಲಿ ರಾಕಿ ಬಾಯ್ ಆರ್ಭಟವ ಪರಿಚಯ ಮಾಡಿಕೊಟ್ಟಿದ್ದರು ಮೋಹನ್ ಜುನೆಜಾ ಅವರು.  ಬ್ರಾಂಡ್ ಪದ, ಮಾನ್ಸ್ಟಾರ್, ಹಾಗೇನೇ ಗ್ಯಾಂಗ್ ಸ್ಟಾರ್ ಗ್ರಾವಿಟೇಷನಲ್ ಪವರ್ ಹೀಗೆ ರಾಕಿ ಬಾಯ್ ಅವರಿಗೆ ನಾನಾರೀತಿಯ ಹೆಸರನ್ನು ಇಟ್ಟು ಅವರ ವೈಭವವನ್ನು ಪತ್ರಕರ್ತ ಆನಂದ್ ಇಂಗಳಗಿಯ ಎದುರು ಬಿಚ್ಚಿಟ್ಟಿದ್ದರು.

ಹೌದು ಮೋಹನ್ ಜುನೇಜ ಅವರು ಮಾಡಿದ್ದ ಮದುಮಗ ಪಾತ್ರ ಇಂದಿಗೂ ಎಲ್ಲರಿಗೂ ಅಚ್ಚುಮೆಚ್ಚು. ಈ ಕಲಾವಿದರ ಜೀವನ ಕೆಲವೊಂದು ಬಾರಿ ಯಾವ ರೀತಿ ಹತ್ತಿರವಾಗುತ್ತದೆ ಎಂದರೆ, ಜನರ ಮನಸ್ಸಿಗೆ ಹಟ್ಟಿರವಾಗುವ ಒಂದು ಪಾತ್ರ ಎಂದಿಗೂ ಕೂಡ ಮರೆಯಲಾಗದಂತೆ ಅವರನ್ನು ಎದ್ದು ತೋರಿಸುತ್ತದೆ. ಮೋಹನ್ ಜುನೇಜ ಅವರು ಕೆಜಿಎಫ್ ಚಿತ್ರದಲ್ಲಿ ಅಭಿನಯ ಮಾಡಿದ್ದು, ಇದೀಗ ಅವರ ಅಕಾಲಿಕ ಮರಣದಿಂದ ಅವರ ಕುಟುಂಬ ಕಣ್ಣೀರಿಡುವಂತೆ ಆಗಿದೆ. ಆ ಕುಟುಂಬದ ನೆರವಿಗೆ ನಿಂತಿರುವ ಹೊಂಬಾಳೆ ಫಿಲಂಸ್ 50 ಸಾವಿರ ಹಣ ನೀಡಿದೆ ಎಂದು ತಿಳಿದುಬಂದಿದೆ. ಈ ಧನ ಸಹಾಯ ವಿಷಯ ಹೊರಬರುತ್ತಿದ್ದಂತೆ ನೆಟ್ಟಿಗರು ಮತ್ತು ಮೋಹನ್ ಜುನೇಜ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ರೋಶ ಹೊರ ಹಾಕುತ್ತಿದ್ದಾರೆ ಎನ್ನಲಾಗಿದೆ.   

ಅದಕ್ಕೆ ಕಾರಣ ಕೆಜಿಎಫ್ ಭಾಗ-2 ಸಿನಿಮಾ ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಅವರ ಕುಟುಂಬ ಇದೀಗ ಕಣ್ಣೀರಿನಲ್ಲಿದೆ ಹೀಗಿರುವಾಗ ಕೇವಲ 50 ಸಾವಿರ ಹಣ ನೀಡಿದ್ದೀರಾ, ನಿಮ್ಮ ಮನಸ್ಥಿತಿಗೆ ಏನನ್ನಬೇಕು, ಸಿನಿಮಾದಿಂದ ಸಾವಿರ ಸಾವಿರ ಕೋಟಿ ಹಣ ಲಾಭ ಮಾಡಿಕೊಂಡಿರಿ. ಮೋಹನ್ ಜುನೇಜ  ಅವರ ಕುಟುಂಬಕ್ಕೆ,  ಹತ್ತು ಲಕ್ಷ ಹಣವನ್ನಾದರೂ ನೀವು ಕೊಡಬಹುದಿತ್ತು ಎಂದು ಹೊಂಬಾಳೆ ಫಿಲಂಸ್ ಸಂಸ್ಥೆಯನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆ ಅವರ ಆಕ್ರೋಶವನ್ನು ಹೀಗೆ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹೊಂಬಾಳೆ ಸಂಸ್ಥೆ ನೀಡಿರುವ 50 ಸಾವಿರ ಹಣ ದೊಡ್ಡದಾ, ಅಥವಾ ಚಿಕ್ಕದಾ ಎಂದು ಕಮೆಂಟ್ ಮಾಡಿ. ಅಥವಾ ಸಹಾಯ ಸಹಾಯವೇ ಎಂದೆನಿಸಿದರೆ ಈ ಮಾಹಿತಿಯನ್ನು ಶೇರ್ ಮಾಡಿ..