KGF 3 : ಕೊನೆಗೂ ಹೊಂಬಾಳೆ ಸಂಸ್ಥೆಯಿಂದ ಹೊರಬಂತು ಕೆಜಿಎಫ್ ಭಾಗ-3 ರ ದೊಡ್ಡ ಸುದ್ದಿ..! ಸಿನಿಮಾ ಯಾವಾಗ ಬರುತ್ತೇ ಗೊತ್ತಾ ?

By Infoflick Correspondent

Updated:Tuesday, May 17, 2022, 11:13[IST]

KGF 3 : ಕೊನೆಗೂ ಹೊಂಬಾಳೆ ಸಂಸ್ಥೆಯಿಂದ ಹೊರಬಂತು ಕೆಜಿಎಫ್ ಭಾಗ-3 ರ ದೊಡ್ಡ ಸುದ್ದಿ..! ಸಿನಿಮಾ ಯಾವಾಗ  ಬರುತ್ತೇ ಗೊತ್ತಾ ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ-1 ಸಿನಿಮಾ ನಾಲ್ಕು ವರ್ಷದ ಹಿಂದೆ ಚಿತ್ರರಂಗದಲ್ಲಿ ದೊಡ್ಡ ಗಾಳಿಯನ್ನೇ ಎಬ್ಬಿಸಿ ಕೆಜಿಎಫ್ ಮೂಲಕ ಕನ್ನಡ ಇಂಡಸ್ಟ್ರಿ ಗತ್ತನ್ನು ಇಡೀ ವಿಶ್ವ ಮಟ್ಟಕ್ಕೆ ತಲುಪಿಸಿತ್ತು. ಇದೀಗ ಕೆಜಿಎಫ್ ಭಾಗ-2 ಕೂಡ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಿಡುಗಡೆಯಾದ ದಿನದಿಂದ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹೌದು 1200 ಕೋಟಿಗಿಂತಲೂ ಅಧಿಕವಾಗಿ ಕಲೆಕ್ಷನ್ ಮಾಡಿ ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಎನ್ನಬಹುದು. ಕೆಜಿಎಫ್ ಭಾಗ-1 ಮತ್ತು ಭಾಗ-2 ಬಿಡುಗಡೆಯಾಗಿ ಯಶಸ್ವಿ ಆಗುತ್ತಿದ್ದಂತೆಯೇ ಇದೀಗ ಭಾಗ-3 ಕೂಡ ಬಂದೇ ಬರುತ್ತದೆ ಎಂದು ಸಿನಿಮಾ ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಕೆಲವರು ಫ್ಯಾನ್ ಮೇಡ್ ಟ್ರೈಲರ್ ಟೀಸರ್ ಗಳನ್ನು ಯೂಟ್ಯೂಬ್ನಲ್ಲಿ ಬಿಡುತ್ತಿದ್ದಾರೆ.    

ಹಾಗೆ ಕೆಲವೊಂದಿಷ್ಟು ಪೋಸ್ಟರ್ ಗಳನ್ನು ಬಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಸಂದರ್ಶನದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಹೇಳಿದ ಹಾಗೆ, ಒಂದು ವೇಳೆ ಜನರು ಕೆಜಿಎಫ್ ಭಾಗ ಎರಡನ್ನೂ ನೋಡಿ ಇಷ್ಟ ಪಟ್ಟು, ಈ ಪ್ರಾಂಚೈಸಿ ಇಷ್ಟಪಟ್ಟರೆ, ಅವರಿಗೆ ಕ್ಯಾರೆಕ್ಟರ್ ಇಷ್ಟವಾದ್ರೆ, ಹಾಗೆ ಕೆಜಿಎಫ್ ಮೂರು ಬೇಕು ಎಂದರೆ ನಾನು ಖಂಡಿತ ಸಿನಿಮಾ ಮಾಡುತ್ತೇನೆ ಎಂದಿದ್ದರು. ಅದಕ್ಕೆ ತಕ್ಕಂತೆ ಈಗ ಕೆಜಿಎಫ್ ಭಾಗ-2 ಕ್ಲೈಮ್ಯಾಕ್ಸ್ ಮುಗಿದ ಬಳಿಕ ಕೆಜಿಎಫ್ ಮೂರು ಬರುವ ಸೂಚನೆ ನೀಡಿದ್ದ ಚಿತ್ರತಂಡ ಇದೀಗ ಎದ್ದಿರುವ ಕೆಜಿಎಫ್ 3 ರ ಚರ್ಚೆಗೆ ಕಾರಣಎನ್ನಬಹುದು. ಹೌದು ಕೆಜಿಎಫ್ ಭಾಗ-3 ಸಿನಿಮಾ ಬಗ್ಗೆ ಇದೀಗ ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಟ್ವಿಟರ್ ಮೂಲಕ ಒಂದು ವಿಚಾರ ಬಯಲು ಮಾಡಿದ್ದಾರೆ.

ಕೆಜಿಎಫ್ ಭಾಗ-3 ಸಿನಿಮಾವನ್ನು ನಾವು ಆರಂಭ ಮಾಡಿಲ್ಲ. ಸುಮ್ಮನೆ ಗಾಳಿಸುದ್ದಿಗೆ ನೀವೂ ತಲೆ ಕೊಡಬೇಡಿ,ತುಂಬಾನೇ ಪ್ರಾಜೆಕ್ಟ್ ನಡೆಯುತ್ತಿವೆ. ಒಂದು ವೇಳೆ ನಾವು ಕೆಜಿಎಫ್ ಭಾಗ-3 ಸಿನಿಮಾ ಮಾಡುವ ಹಂತಕ್ಕೆ ಬಂದು, ಸಿನಿಮಾವನ್ನ ಕೈಗೆತ್ತಿಕೊಂಡಾಗ ನಿಮ್ಮ ಮುಂದೆ ದೊಡ್ಡದಾಗಿಯೇ ನಾವು ಹೇಳುತ್ತೇವೆ ಎಂದಿದ್ದಾರೆ. ಹೌದು ಕೆಜಿಎಫ್ 3 ಸದ್ಯಕ್ಕೆ ಇಲ್ಲ ಎಂದು ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ...