ತೆಳ್ಳಗಾಗಿದ್ದು ಏಕೆ ಮತ್ತು ಹೇಗೆ ಎಂದು ಸಿಕ್ರೆಟ್ ಬಿಟ್ಟು ಕೊಟ್ಟ  ನಿಧಿಸುಬ್ಬಯ್ಯ !

By Infoflick Correspondent

Updated:Friday, May 13, 2022, 11:49[IST]

ತೆಳ್ಳಗಾಗಿದ್ದು ಏಕೆ ಮತ್ತು ಹೇಗೆ ಎಂದು ಸಿಕ್ರೆಟ್ ಬಿಟ್ಟು ಕೊಟ್ಟ  ನಿಧಿಸುಬ್ಬಯ್ಯ !

ಬಿಗ್ ಬಾಸ್ ಕನ್ನಡ ಸೀಸನ್ 8 ಶೋನಲ್ಲಿ ನಿಧಿ ಸುಬ್ಬಯ್ಯ ಭಾಗವಹಿಸಿದ್ದರು. ಅದರಲ್ಲಿ ನಿಧಿ ಸ್ವಲ್ಪ ದಪ್ಪಗಾಗಿದ್ದರು. ಆದರೆ ಅವರು ಕೆಲ ತಿಂಗಳುಗಳಿಂದ ಡಯೆಟ್, ವರ್ಕೌಟ್ ಮಾಡಿ ತೂಕ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ನಿಧಿ 13 ಕೆಜಿ ಸಣ್ಣ ಆಗಿದ್ದಾರೆ. ನಿಧಿ ಈಗ ತಾನೇಕೆ ಸಣ್ಣಗಾಗಿದ್ದೇನೆ ಹಾಗು ಹೇಗೆ ಸಣ್ಣಗಾಗಿದ್ದೇನೆ ಎಂದು ಹೇಳಿದ್ದಾರೆ.

ನಿಧಿ ಮೂಲತಃ ಕೊಡಗಿನ ಬೆಡಗಿ‌. ನಿಧಿ ಜನನದ ನಂತರ ಕುಟುಂಬ ಮೈಸೂರಿಗೆ ವಲಸೆ ಬಂದಿದ್ದರಿಂದ ಇವರ ಬಾಲ್ಯ ವಿಧ್ಯಾಭ್ಯಾಸ ಎಲ್ಲ ಮೈಸೂರಿನಲ್ಲಿ ಕಳೆಯಿತು. ತಾವು ಪಿಯುಸಿಯಲ್ಲಿದ್ದಾಗ ಸೇಲಿಂಗ್ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನಂತರ ಒಂದೇ ವರ್ಷದಲ್ಲಿ ಸೇಲಿಂಗ್ ನಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಇತಿಹಾಸ ಹೊಂದಿದ್ದಾರೆ. ಶ್ರೀ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುವಾಗ ಮಾಡೆಲಿಂಗ್ ಗೊಸ್ಕರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು.

ನಾನು 13 ಕೆಜಿ ಸಣ್ಣ ಆಗಿದ್ದೀನಿ ಆದರೆ ಯಾವ ಸಿನಿಮಾಗೂ ಸಣ್ಣ ಆಗಿಲ್ಲ ನನ್ನ ಆರೋಗ್ಯ ದೃಷ್ಟಿಯಿಂದ ಸಣ್ಣಗಾಗಿದ್ದೇನೆ. ಸುಮಾರಷ್ಟು ಸಿನಿಮಾ ಆಫರ್ ಬಂತು ಆದರೆ ಎಲ್ಲವೂ ಒಂದೇ ರೀತಿ ಕಥೆ. ಇಷ್ಟವಾದ ಸ್ಕ್ರಿಪ್ಟ್‌ ಸಿಕ್ಕರೆ ಮಾತ್ರ ನಟಿಸುತ್ತೇನೆ'. ಈಗ ಇರುವ ಸಿನಿಮಾಗಳು ರಿಲೀಸ್ ಆಗಬೇಕು ಎಂದಿದ್ದಾರೆ ನಿಧಿ. ಅಭಿಮಾನಿ'ಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿಧಿ ಸುಬ್ಬಯ್ಯ ಈಗ 'ಅಬ ಜಬ ದಬ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತೂಕ ಹೇಗೆ ಇಳಿಸಿದಿರಿ ಎಂಬ ಪ್ರಶ್ನೆಗೆ ನನ್ನ ಆಹಾರದಲ್ಲಿ ಪೌಷ್ಟಿಕಾಂಶ ಇರುವಂತೆ ನೋಡಿಕೊಂಡೆ. ಮೊಟ್ಟೆ, ಮೀನು ಜಾಸ್ತಿ ಸೇವಿಸಿದೆ. ಮೊದಲಿನಿಂದಲೂ ಸೈಕ್ಲಿಂಗ್, ಟ್ರೆಕ್ಕಿಂಗ್ ಅಂದರೆ ತುಂಬಾ ಇಷ್ಟ.  ಮನಸ್ಸು ಮಾಡಿದರೆ ಎಲ್ಲರೂ ತೂಕ ಇಳಿಸಿಕೊಳ್ಳಬಹುದು ತೂಕ ಕಡಿಮೆ ಮಾಡಿಕೊಳ್ಳುವುದು ದೊಡ್ಡ ವಿಚಾರ ಅಲ್ಲ ಎಂದು ನಿಧಿ ಹೇಳಿದ್ದಾರೆ.