ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಎಷ್ಟು ಕೋಟಿ ಸಾಲ ತೀರಿಸಬೇಕು ಅಂತ ವೇದಿಕೆಯಲ್ಲಿ ಹೇಳಿದರು !!

By Infoflick Correspondent

Updated:Monday, June 20, 2022, 08:46[IST]

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಎಷ್ಟು ಕೋಟಿ ಸಾಲ ತೀರಿಸಬೇಕು ಅಂತ  ವೇದಿಕೆಯಲ್ಲಿ ಹೇಳಿದರು !!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳು ಇಂದಿಗೂ ಯುವಕರ ಬೆಸ್ಟ್ ಚಿತ್ರಗಳು. ಅವರ ಚಿತ್ರಗಳಲ್ಲಿ ತಾಯಿ ಸೆಂಟಿಮೆಂಟ್ ಜೊತೆಗೆ ಪ್ರೀತಿಯ ರಸದೌತಣವೂ ಇರುತ್ತದೆ. ಅವರ ಪ್ರೇಮಲೋಕ ಸಿನಿಮಾವನ್ನು ಇಂದಿಗೂ ಹುಡುಗರಿಂದ ಹಿಡಿದು ಮುದುಕರು ಕೂಡ ಇಷ್ಟ ಪಟ್ಟು ನೋಡುತ್ತಾರೆ. ಇನ್ನು ರವಿಚಂದ್ರನ್ ಅವರು ಮಾಡಿದ ಸಿನಿಮಾಗಳೆಲ್ಲವೂ ಹಿಟ್. ಕೆಲವೊಂದು ಚಿತ್ರಗಳು ಕ್ರೇಜಿಸ್ಟಾರ್ ಕೈಕೊಟ್ಟಿದ್ದೂ ಉಂಟು. ಪ್ರತಿಯೊಂದು ಸಿನಿಮಾಗೂ ಅದ್ಧೂರಿ ಸೆಟ್ ಹಾಕಿ ಗ್ರಾಂಡ್ ಆಗಿ ಶೂಟ್ ಮಾಡುತ್ತಿದ್ದರು ರವಿ ಮಾಮ.   

ಚಿತ್ರಗಳ ನಿರ್ಮಾಣಕ್ಕಾಗಿ ರವಿ ಮಾಮ ಕೋಟಿ ಕೋಟಿ ಹಣ ಸುರಿದಿದ್ದೂ ಉಂಟು. ಆಗಿನ ಕಾಲದಲ್ಲೇ ಕೋಟಿಗಟ್ಟಲೆ ಹಣ ಹೂಡಿ ಸಿನಿಮಾ ಮಾಡುತ್ತಿದ್ದದ್ದೇ ರವಿಚಂದ್ರನ್. ಹೀಗಾಗಿ ರವಿಚಮದ್ರನ್ ಅವರು ಸಾಲ ಮಾಡಿಕೊಂಡಿದ್ದು ಉಂಟು. ಸಿನಿಮಾ ಮಾಡಿದ ಮೇಲೆ ಅದಕ್ಕೆ ಹೂಡಿದ ಹಣ ಬಂದರೆ ಸಾಕು ಎನ್ನುತ್ತಿದ್ದ ಕಾಲದಲ್ಲಿ ರವಿಚಂದ್ರನ್ ಅವರು, ತಾವುಂದುಕೊಂಡಂತೆ ಸಿನಿಮಾ ಮೂಡಿ ಬಂದರೆ ಸಾಕು ಎನ್ನುತ್ತಿದ್ದರು. ಸಾಲದ ಮೇಲೆ ಸಾಲ ಮಾಡಿದಾಗಲೂ ಎಂದೂ ಬೇಸರಿಸಿಕೊಂಡವರಲ್ಲ. ಸಾಲ ತೀರಿಸಲಾಗದೇ, ತಮ್ಮ ಆಸ್ತಿಯನ್ನು ಸಹ ಮಾರಿದ್ದುಂಟು. 

ಈಗಲೂ ರವಿಚಂದ್ರನ್ ಅವರು ಸಾಕಷ್ಟು ಸಾಲಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಗುರು ಶಿಷ್ಯ ಸಿನಿಮಾದ ಕಾರ್ಯಕ್ರಮದಲ್ಲೂ ರವಿಚಂದ್ರನ್ ಅವರು ಸ್ವಲ್ಪವೂ ಮುಚ್ಚುಮರೆ ಇಲ್ಲದೆ ತಮ್ಮ ಸಾಲದ ಬಗ್ಗೆ ಮಾತನಾಡಿದ್ದಾರೆ. ರವಿಚಂದ್ರನ್ ಅವರು ಸಾಲದ ಚಕ್ರಕ್ಕೆ ಸಿಲುಕಿದ್ದಾರೆ. ಆದರೂ ಧೃತಿಗೆಡದೆ ಬೇರೆ ಸಿನಿಮಾ, ಅಲ್ಲಿ ನಟಿಸುತ್ತಾ ಸಾಲವನ್ನು ತಮ್ಮ ಕೈಲಾದಷ್ಟು ತೀರಿಸುತ್ತಿದ್ದಾರೆ. ಒಳ್ಳೊಳ್ಳೆ ಸಿನಿಮಾ ಮಾಡಿದ ರವಿಚಂದ್ರನ್ ಅವರು ಜಮ್ ಅಂತ ಜೀವನ ನಡೆಸಬೇಕಿತ್ತು. ಆದರೆ, ಕೆಲ ಸಿನಿಮಾಗಳು ಫ್ಲಾಪ್ ಆಗಿದ್ದರಿಂದ ಈಗ ಕಷ್ಟಪಡುತ್ತಿದ್ದಾರೆ. ಇನ್ನು ಇದೀಗ ರವಿ ಬೋಪಣ್ಣ ಸಿನಿಮಾ ನಿರ್ಮಾಣ ಮಾಡಿದ್ದು, ಈ ಚಿತ್ರ ಹಿಟ್ ಆಗಲಿ ಎಮದು ಹಾರೈಸೋಣ ಗೆಳೆಯರೆ.

VIDEO CREDIT : SUDDI MANE