Drama Juniors Season 4 : ರಚಿತಾ ರಾಮ್ ಅವರು ಡ್ರಾಮಾ ಜೂನಿಯರ್ಸ್ ನಲ್ಲಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?
Updated:Thursday, May 26, 2022, 12:45[IST]

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಸಿನಿಮಾ ರಂಗಕ್ಕೆ ಬಂದು 9 ವರ್ಷವಾಗಿದೆ. ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಚಿತಾ ರಾಮ್, ಅವರ ಕೈಯಲ್ಲಿ ಸದ್ಯ ಸಾಲು ಸಾಲು ಚಿತ್ರಗಳಿವೆ. ನಟ ಡಾಲಿ ಧನಂಜಯ್ ಜೊತೆಗೆ ನಟಿಸಿರುವ ಮಾನ್ಸೂನ್ ರಾಗ ಚಿತ್ರ ಆ.12ರಂದು ರಿಲೀಸ್ ಆಗಲಿದೆ. ನಟ ನೀನಾಸಂ ಸತೀಶ್ ಜೊತೆಗಿನ ಚಿತ್ರ ಮ್ಯಾಟ್ನಿ, ಶಬರಿ, ಲವ್ ಮಿ ಆರ್ ಹೇಟ್ ಮಿ, ಕ್ರಾಂತಿ ಸೇರಿದಂತೆ 6ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಬೇಕಿದೆ.
ಇನ್ನು ತೆಲುಗು ಚಿತ್ರರಂಗದಲ್ಲೂ ಮಿಂಚಿರುವ ರಚಿತಾ ರಾಮ್ ಅವರು ಕಲ್ಯಾಣ್ ದೇವ್ ಅವರ ಜೊತೆಗೆ ಸೂಪರ್ ಮಚ್ಚಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಇನ್ನು ಕನ್ನಡದಲ್ಲಿ ಕೆಲ ದಿನಗಳ ಹಿಂದಷ್ಟೇ ರೈಡರ್, ಏಕ್ ಲವ್ ಯಾ, 100, ಲವ್ ಯೂ ರಚ್ಚು ಸೇರಿದಂತೆ ಅವರ ನಟನೆಯ ಹಲವು ಚಿತ್ರಗಳು ರಿಲೀಸ್ ಆಗಿವೆ. ಏಕ್ ಲವ್ ಯಾ ಹಾಗೂ ಲವ್ ಯೂ ರಚ್ಚು ಸಿನಿಮಾಗಳಲ್ಲಿ ರಚಿತಾ ರಾಮ್ ಅವರು ಕೊಂಚ ಬೋಲ್ಡ್ ಆಗಿ ನಟಿಸಿದ್ದರು.
ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಸಕ್ರಿಯವಾಗಿರುವ ರಚತಾ ರಾಮ್ ಅವರು, ಹಲವು ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಚಿತಾ ರಾಮ್ ಮಕ್ಕಳ ಕಾರ್ಯಕ್ರಮಕ್ಕೆ ತೀಪುಗಾರರಾಗಿದ್ದಾರೆ. ಈ ಹಿಂದೆ ಕಾಮಿಡಿ ಶೋ ನಲ್ಲೂ ಜಡ್ಜ್ ಆಗಿದ್ದರು. ಇನ್ನು ಒಂದು ಸಿನಿಮಾಗಾಗಿ ರಚಿತಾ ರಾಮ್ ಅವರು 50 ರಿಂದ 60 ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ. ಇದೀಗ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋಗಾಗಿ 5 ತಿಂಗಳಿಗೆ 10 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ.