Yash: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮೊದಲ ಪಡೆದ ಸಂಭಾವನೆ ಎಷ್ಟು ಗೊತ್ತೆ ?

By Infoflick Correspondent

Updated:Thursday, May 19, 2022, 10:05[IST]

Yash: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮೊದಲ ಪಡೆದ ಸಂಭಾವನೆ ಎಷ್ಟು ಗೊತ್ತೆ ?

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತರಾಗಿದ್ದ ಯಶ್ ಇಂದು ರಾಕಿಂಗ್ ಸ್ಟಾರ್ ಯಶ್ ಆಗಿ ಕೆಜಿಎಫ್ ಚಿತ್ರದ ಮೂಲಕ ದೇಶ-ವಿದೇಶದಲ್ಲಿ ತಮ್ಮದೇ ಆದ ಹವಾ ಕ್ರಿಯೆಟ್ ಮಾಡಿದ್ದಾರೆ. ಕೋಟಿಗಟ್ಟಲೆ ಸಂಭಾವನೆ ತೆಗೆದುಕೊಳ್ಳುವ ಯಶ್ ಅವರ ಮೊದಲ ಸಂಭಾವನೆ ಎಷ್ಟು ಗೊತ್ತೆ ಇಲ್ಲಿದೆ ನೋಡಿ 

ಯಶ್ 2004ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಉತ್ತರಾಯಣ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ಬಳಿಕ ಅದೇ ವರ್ಷದಲ್ಲಿ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದ ಗೋಕುಲ' ಧಾರಾವಾಹಿಯಲ್ಲಿ ನಟಿಸಿದ್ದರು. ಯಶ್ ಒಟ್ಟು 5 ಧಾರಾವಾಹಿಯಲ್ಲಿ ನಟಿಸಿದ್ದು, 'ನಂದ ಗೋಕುಲ' ಧಾರಾವಾಹಿ ಮೂಲಕವೇ ಬೆಳ್ಳಿತೆರಿಗೆ ಎಂಟ್ರಿ ನೀಡಿದ್ದರು.   

ಆದರೆ ಅದಕ್ಕೂ ಕೆಲವೇ ಸಮಯ ಮುಂಚೆ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಆ ಧಾರಾವಾಹಿಯಿಂದ ಯಶ್‌ಗೆ ಕರುನಾಡಿನಾದ್ಯಂತ ದೊಡ್ಡಮಟ್ಟದ ಖ್ಯಾತಿ ಸಿಕ್ಕಿತ್ತು.
ಪ್ರಿಯಾ ಹಾಸನ್ ನಿರ್ದೇಶನದ 'ಜಂಭದ ಹುಡುಗಿ' (2007) ಚಲನಚಿತ್ರದಲ್ಲಿ ಯಶ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದ ಪೋಷಕ ನಟನೆಗಾಗಿ ಫಿಲಂ ಫೇರ್ ಪ್ರಶಸ್ತಿ ಪಡೆದರು. ನಂತರ ಚಿತ್ರಗಳಲ್ಲಿ ರಾಕಿ ಕಳ್ಳರ ಸಂತೆ  ಗೋಕುಲ ನಲ್ಲಿ ನಾಯಕ ಪಾತ್ರಗಳಲ್ಲಿ ನಟಿಸಿದರು. 

ಜಂಭದ ಹುಡುಗಿ ಸಿನಿಮಾದಲ್ಲಿ ಯಶ್ ಪಡೆದ ಸಂಭಾವನೆ ಎಷ್ಟು ಗೊತ್ತೆ ? ಇದರ ಬಗ್ಗೆ ಮಾತನಾಡಿದ್ದಾರೆ ಪ್ರಿಯಾ ಹಾಸನ್ . ಆಗಿನ ಕಾಲಮಾನದಲ್ಲಿ ಹೆಸರು ಮಾಡಿದ ಹಿರೋಗಳನ್ನು ಮಾತ್ರ ಗುರುತಿಸುತ್ತಿದ್ದರು‌. ಪ್ರಸಿದ್ಧಿ ಪಡೆದ ಹಿರೋಗಳಿಗೆ ಮಾತ್ರ ಹಣ ಹುಡಿಕೆ ಮಾಡುತ್ತಿದ್ದರು. ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಲು ಹೆದರುತ್ತಿದ್ದರು.
ಆದರೆ ನಾವು ನಮ್ಮ ಬ್ಯಾನರ್ ನಲ್ಲಿ ಆಗ ಸಿನಿಮಾ ಕ್ಷೇತ್ರಕ್ಕೆ ಹೊಸಬರಾದ ಯಶ್ ಹಾಕಿಕೊಂಡು ಸಿನಿಮಾ ಮಾಡಿದೆವು. ಕಥೆಗೆ ಅವರು ಸೂಟ್ ಆಗುತ್ತಿದ್ದರು ಹಾಗಾಗಿ‌. ಆಗ ಹೊಸಮುಖವಾದ ಯಶ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿ ಅವರಿಗೆ ಆಗ 50 ಸಾವಿರ ರೂಪಾಯಿ ಸಂಭಾವನೆ ನೀಡಿದ್ದೇವು ಎಂದರು ಪ್ರಿಯಾ ಹಾಸನ್. 

ಯಶ್ ನನ್ನ ತಾಯಿಯಿಂದ ಹಣ ಪಡೆದು ಕಾಲಿಗೆ ನಮಸ್ಕರಿಸಿ ಇದು ಸಿನಿಮಾ ಕ್ಷೇತ್ರದಲ್ಲಿ ನನ್ನ ಮೊದಲ ಸಂಭಾವನೆ ಎಂದಿದ್ದರು ಎಂದು ಆ ದಿನವನ್ನು ಮೆಲಕು ಹಾಕಿದರು‌.