ಬಿಗ್ ಬಾಸ್ ಮನೆಯಲ್ಲಿ ಇರಲು ಅಗ್ನಿಸಾಕ್ಷಿ ವೈಷ್ಣವಿಗೆ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Updated: Sunday, March 7, 2021, 12:04 [IST]

ಬಿಗ್ ಬಾಸ್ ಕನ್ನಡ ಸೀಸನ್ 8 ಶುರುವಾಗಿ ಅದಾಗಲೇ ಒಂದು ವಾರ ಯಶಸ್ವಿಯಾಗಿ ಪೂರೈಸಿ ಇಂದು ಮನೆಯಿಂದ ಒಬ್ಬ ಸದಸ್ಯರೂ ಕೂಡ ಎಲಿಮಿನೇಟ್ ಆಗಿ ಹೊರ ಬರಲಿದ್ದಾರೆ.. ಈ ಬಾರಿ ಸ್ಪರ್ಧಿಗಳ ಆಯ್ಕೆಯ ವಿಚಾರದಲ್ಲಿಯೂ ಸಹ ಜನರು ಮೆಚ್ಚುಗೆ ವ್ಯಕ್ತ ಪಡಿಸಿರುವುದು ವಿಶೇಷ.. ಇನ್ನು ಸಾಮಾಜಿಕ ಜಾಲತಾಣದ ಸೆಲಿಬ್ರೆಟಿಗಳು ಹಿರಿತೆರೆ ಹಾಗೂ ಕಿರುತೆರೆಯ ಕಲಾವಿದರು‌ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸೇರಿದಂತೆ ಇನ್ನಿತರರು ಈ ಬಾರಿ ಬಿಗ್ ಬಾಸ್ ಮನೆಯ ಭಾಗವಾಗಿದ್ದಾರೆ.. 

ಇನ್ನು ಈ ಸದಸ್ಯರಿಗೆ ಕೊಡುವ ಸಂಭಾವನೆ ಎಷ್ಟು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.. ಹೌದು ಬಿಗ್ ಬಾಸ್ ಮನೆಯಲ್ಲಿ ಒಟ್ಟು ಹದಿನೇಳು ಸದಸ್ಯರಿದ್ದು ಎಲ್ಲರಿಗೂ ವಾರದ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತದೆ.. ವಾರಕ್ಕೆ ಇಂತಿಷ್ಟು ಎಂದು ಸದಸ್ಯರುಗಳು ಇರುವಷ್ಟು ವಾರಗಳಿಗೆ ಸಂಭಾವನೆ ನೀಡಲಾಗುತ್ತದೆ.. ಅದನ್ನು ಹೊರತು ಪಡಿಸಿ ಕೆಲವರಿಗೆ ವರ್ಷದ ಅಗ್ರಿಮೆಂಟ್ ಕೂಡ ಮಾಡಿಕೊಳ್ಳಲಾಗುವುದು.. ಕಳೆದ ಸೀಸನ್ ಗಳಲ್ಲಿ ರೆಹಮಾನ್ ಹಾಗೂ ಇನ್ನಿತರ ಕೆಲ ಸದಸ್ಯರಿಗೆ ಸಂಪೂರ್ಣ ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡು ವಾಹಿನಿಯ ಇನ್ನಿತರ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿಸಿಕೊಳ್ಳಲಾಗುತಿತ್ತು.. ಆದರೆ ಸದ್ಯ ಈಗ ಇರುವ ಸ್ಪರ್ಧಿಗಳು ಎಲ್ಲರಿಗೂ ವಾರದ ಸಂಭಾವನೆಯಷ್ಟೇ ನೀಡಲಾಗುತ್ತಿದೆ.. 

ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಚೆಂದದ ಚೆಲುವೆಯರಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಶ್ಣವಿ ಕೂಡ ಒಬ್ಬರು.. ಹೌದು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನಮನಗೆದ್ದಿದ್ದ ನಟಿ ವೈಶ್ಣವಿ ಧಾರಾವಾಹಿ ಮುಗಿದ ಬಳಿಕ ಬೇರೆ ಯಾವುದೇ ಧಾರಾವಾಹಿಯಲ್ಲಿಯೂ ಕಾಣಿಸಿಕೊಳ್ಳಲಿಲ್ಲ.. ಕೆಲವೊಂದು ಜಾಹಿರಾತುಗಳಲ್ಲಿ ಅಭಿನಯಿಸುತ್ತ ವರ್ಷ ಕಳೆದ ವೈಷ್ಣವಿಗೆ ಬಿಗ್ ಬಾಸ್ ಮನೆಯೊಳಗೆ ಹೋಗುವ ಅವಕಾಶ ಬಂದಿತು.. 

ಅತ್ತ ವೈಶ್ಣವಿ ಅವರ ತಾಯಿ ಬಿಗ್ ಬಾಸ್ ಮನೆಗೆ ಹೋಗುವುದು ಬೇಡವೆಂದೇ ಹೇಳಿದ್ದರು.. ಕೊನೆಗೆ ಅಮ್ಮನ ಮನವೊಲಿಸಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿರುವ ಸನ್ನಿಧಿ ಅಲಿಯಾಸ್ ವೈಶ್ಣವಿ ಅವರಿಗೆ ದೊಡ್ಡ ಮಟ್ಟದಲ್ಲಿಯೇ ಸಂಭಾವನೆ ಸಿಗುತ್ತಿದೆ..

ಹೌದು ವೈಷ್ಣವಿ ಅವರಿಗೆ ಒಂದು ವಾರಕ್ಕೆ ಅರವತ್ತು ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.. ವೈಶ್ಣವಿ ಎಷ್ಟು ವಾರಗಳು ಮನೆಯಲ್ಲಿ ಇರುವರೋ ಆ ಲೆಕ್ಕಾಚಾರದಲ್ಲಿ ವಾರಕ್ಕೆ ಅರವತ್ತು ಸಾವಿರದಂತೆ ಸಂಭಾವನೆ ನೀಡಲಾಗುವುದು.. ಇದರ ಜೊತೆಗೆ ಬಿಗ್ ಬಾಸ್ ಪಟ್ಟ ಗೆಲ್ಲುವವರಿಗೆ ಎಂದಿನಂತೆ ಐವತ್ತು ಲಕ್ಷ ರೂಪಾಯಿಗಳನ್ನು ಟ್ಯಾಕ್ಸ್ ಕಡಿತಗೊಳಿಸಿ ನೀಡಲಾಗುವುದು‌‌.. ಸಂಭಾವನೆಯಲ್ಲಿ ಯಾವುದೇ ಟ್ಯಾಕ್ಸ್ ಕಡಿತಗೊಳ್ಳುವುದಿಲ್ಲ.. ಬಹುಮಾನದ ಮೊತ್ತದಲ್ಲಷ್ಟೇ ಟ್ಯಾಕ್ಸ್ ರೀತಿಯಲ್ಲಿ ಬರೋಬ್ಬರಿ ಹದಿನಾರು ಲಕ್ಷ ರೂಪಾಯಿ ಕಡಿತಗೊಂಡು ಮಿಕ್ಕ ಹಣ ವಿಜೇತ ಸ್ಪರ್ಧಿಯ ಕೈ ಸೇರುವುದು..