ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಅನಿರುದ್ಧ್ ಏನೆಲ್ಲಾ ಮಾಡಬೇಕಲಾಯ್ತು ಗೊತ್ತಾ..?

By Infoflick Correspondent

Updated:Wednesday, August 24, 2022, 10:40[IST]

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಅನಿರುದ್ಧ್ ಏನೆಲ್ಲಾ ಮಾಡಬೇಕಲಾಯ್ತು ಗೊತ್ತಾ..?

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಏನೆಲ್ಲಾ ಆಗುತ್ತಿದೆ ಎಂದು ಮೊದಲಿನಿಂದ ಹೇಳುವ ಅಗತ್ಯವಿಲ್ಲ. ಅನಿರುದ್ಧ್ ಅವರನ್ನು ತಂಡದಿಂದ ಹೊರಗೆ ಹಾಕಿದ್ದು, ಇದಕ್ಕೆ ವಿರೋಧಗಳೂ ಶುರುವಾಗಿದೆ. ಇನ್ನು ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರವನ್ನು ಮುಂದುವರಿಸುವುದಾಗಿಯೂ ಹೇಳಿದ್ದಾಳೆ. ಆದರೆ, ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರವನ್ನು ನಿರ್ವಹಿಸುವ ಸಲುವಾಗಿ ಏನೆಲ್ಲಾ ಮಾಡಿದ್ದಾರೆ ಗೊತ್ತಾ..?  


ಮೂಲತಃ ಧಾರವಾಡದವರಾಗಿರುವ ಅನಿರುದ್ಧ್ ಜತ್ಕರ್ ಅವರು ಚಿಟ್ಟೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಅಭಿನಯಿಸಿದ ಅನುಭವವಿದೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿರುದ್ಧ್ ಅವರಿಗೆ ಒಳ್ಳೆಯ ಬ್ರೇಕ್ ಸಿಕ್ಕಿರಲಿಲ್ಲ. ಆದರೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯನ ಪಾತ್ರ ಅನಿರುದ್ಧ್ ಜತ್ಕರ್ ಅವರಿಗೆ ಹೆಸರನ್ನು ತಂದುಕೊಟ್ಟಿತು. ಹಳ್ಳಿ ಹಳ್ಳಿಗಳಲ್ಲೂ ಆರ್ಯವರ್ಧನ್ ಎಂದೇ ಅನಿರುದ್ಧ್ ಅವರನ್ನು ಗುರುತಿಸುತ್ತಾರೆ.   


ಆದರೆ ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇನ್ನು ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಈ ಸೀರಿಯಲ್ ಗಾಗಿ ಗಡ್ಡ ಬಿಟ್ಟಿದ್ದಾರೆ. ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ಒಂದು ಯಂಗ್ ಲುಕ್ ಇದ್ದರೆ ಮತ್ತೊಂದು ಮಧ್ಯವಯಸ್ಕನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೆರಡು ಲುಕ್ ಗಾಗಿ ಹಲವು ರೀತಿ ವರ್ಕೌಟ್ ಮಾಡಿದ್ದಾರೆ. ಯಂಗ್ ಆಗಿ ಕಾಣಲು ಸಣ್ಣಗಾಗಿ ಚಿಕ್ಕ ಹುಡುಗನಂತೆ ತಯಾರಾಗಿದ್ದರು. ಬಳಿಕ ಆರ್ಯ ವರ್ಧನ್ ಲುಕ್ ಗಾಗಿ ಮತ್ತೆ ಬಾಡಿ ಶೇಪ್ ಬದಲಾಯಿಸಿಕೊಂಡಿದ್ದಾರೆ. ಇದಕ್ಕಾಗಿ ಅನಿರುದ್ಧ್ ವರ್ಕೌಟ್ ಮಾಡಿದ ವೀಡಿಯೋ ಇದೀಗ ವೈರಲ್ ಆಗಿದೆ.