Bigg Boss Kannada OTT : ಆರ್ಯವರ್ಧನ್ ಗುರೂಜಿಯವರ ಕುಟುಂದ ಆಸ್ತಿ ಎಷ್ಟು ಗೊತ್ತೆ ? ಕೇಳಿ ಬೆಚ್ಚಿಬಿದ್ದ ಜನತೆ

By Infoflick Correspondent

Updated:Tuesday, August 9, 2022, 19:44[IST]

Bigg Boss Kannada OTT : ಆರ್ಯವರ್ಧನ್ ಗುರೂಜಿಯವರ ಕುಟುಂದ ಆಸ್ತಿ ಎಷ್ಟು ಗೊತ್ತೆ ? ಕೇಳಿ ಬೆಚ್ಚಿಬಿದ್ದ ಜನತೆ

ಬಿಗ್​ಬಾಸ್​ ಮನೆಗೆ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್​ ಗುರೂಜಿ ಎಂಟ್ರಿ ಕೊಟ್ಟಿದ್ಧಾರೆ. ಅವರು ಬಿಗ್​ ಬಾಸ್​ ಮನೆಗೆ ಹೋಗುವುದಕ್ಕೂ ಮುನ್ನವೇ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು, ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ 'ನಾನು ಯಾರು' ಎಂಬ ಟಾಸ್ಕ್​ನಲ್ಲಿ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳು ತಮ್ಮ ಹಿನ್ನೆಲೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ಆರ್ಯವರ್ಧನ್​ ಗುರೂಜಿ ಅವರು ತಮ್ಮ ಆಸ್ತಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನಾನು ಚಿಕ್ಕ ವಯಸ್ಸಿಗೆ ಊರು ಬಿಟ್ಟು ಬಂದೆ. ನನಗೂ ಆಸ್ತಿ ಕೊಟ್ಟಿದ್ದಾರೆ. ನಾನು ಏನೂ ಕಷ್ಟಪಟ್ಟಿಲ್ಲ'. ಕೇಳಿದವರಿಗೆಲ್ಲ ನಾನು ದುಡ್ಡ ಕೊಟ್ಟಿದ್ದೇನೆ. ಅದು ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು. ಚಿತ್ರರಂಗದ ದೊಡ್ಡ ದೊಡ್ಡ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ದುಡ್ಡು ಕೊಟ್ಟಿದ್ದೇನೆ' ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದಾರೆ.

ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ. ಸುತ್ತಲೂ ಕಾಡು-ಬೆಟ್ಟ ಇದೆ. ಮೂರು ಕೆರೆ ಇದೆ. ಸುತ್ತ ಮುತ್ತ ಯಾವುದೇ ಮನೆ ಇಲ್ಲ. ಇಂದು ಎಲ್ಲರೂ ಸಿಟಿಯಲ್ಲಿ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ಸಾಕಷ್ಟು ಜಮೀನು ನಮಗೆ ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ' ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದಾರೆ.  

ಮೊದಲ ದಿನವೇ ಬಿಗ್​ಬಾಸ್​ ಮನೆಯೊಳಗೆ ಸ್ಪರ್ಧಿಗಳು ಕಣ್ಣೀರು ಸುರಿಸಿದ್ದಾರೆ. ತಮ್ಮ ಜೀವನದ ಕಹಿ ಘಟನೆಗಳನ್ನು ತೆರೆದಿಡುತ್ತಾ ಸ್ಪರ್ಧಿಗಳು ವೇದಿಕೆ ಮೇಲೆಯೇ ದುಃಖಿಸಿದ್ದಾರೆ. ಆದರೆ ಆರ್ಯವರ್ಧನ್ ಗುರೂಜಿ ಎಲ್ಲರ ಮನೆಯಲ್ಲೂ ಕಷ್ಟ ಇರುವುದೇ ಕಷ್ಟ ಹೇಳಿ ಕಣ್ಣೀರಿನಿಂದ ಸಿಂಪತಿ ಗಿಟ್ಟಿಸಿಕೊಳ್ಳಬಾರದು ಎಂದು ಸ್ಪರ್ಧಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.