ಕೆಜಿಎಫ್ 2 ಚಿತ್ರದಲ್ಲಿಯ ಎಲ್ಲಾ ಕಲಾವಿದರಿಗೆ ಅದೆಷ್ಟು ಸಂಭಾವನೆ ನೀಡಿದ್ದಾರೆ ಗೊತ್ತಾ..? ಶಾಕ್ ಆಗ್ತೀರಾ..!

By Infoflick Correspondent

Updated:Monday, April 18, 2022, 17:46[IST]

ಕೆಜಿಎಫ್ 2 ಚಿತ್ರದಲ್ಲಿಯ ಎಲ್ಲಾ ಕಲಾವಿದರಿಗೆ ಅದೆಷ್ಟು  ಸಂಭಾವನೆ ನೀಡಿದ್ದಾರೆ ಗೊತ್ತಾ..? ಶಾಕ್ ಆಗ್ತೀರಾ..!

ಕನ್ನಡದ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಹೌದು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ಅತ್ಯದ್ಭುತವಾಗಿ ಅಭಿನಯ ಮಾಡಿದ್ದು ಇದೀಗ ಬಾಕ್ಸಾಫೀಸ್ ತೂಫಾನ್ ಆಗುತ್ತಿದೆ. ಕೇವಲ ಬಿಡುಗಡೆ ಆದ ನಾಲ್ಕು ದಿನದಲ್ಲೇ ಐದು ನೂರು ಕೋಟಿ ಕಲೆಕ್ಷನ್ ಮಾಡಿರುವುದಾಗಿ ತಿಳಿದುಬಂದಿದೆ. ಹೌದು ಕೆಜಿಎಫ್ ಕನ್ನಡದ ಸಿನಿಮಾ ಆಗಿದ್ದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಾದ್ಯಂತ 60 ದೇಶಗಳಲ್ಲಿ ಕೆಜಿಎಫ್ ಚಾಪ್ಟರ್ ಟು ಸಿನಿಮಾ ಗೆದ್ದಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಕೆಜಿಎಫ್ 2 ರಲ್ಲಿ ನಟಿಸಿದ ಎಲ್ಲಾ ಕಲಾವಿದರ ಸಂಭಾವನೆ ವಿಚಾರವಾಗಿ ಇದೀಗ ಕೆಲ ಮಾಹಿತಿ ಲಭ್ಯವಾಗಿದೆ.

ಮಾಧ್ಯಮದಲ್ಲಿ ವರದಿಯಾಗಿರುವ ಪ್ರಕಾರ ಬಾಲಿವುಡ್ ನ ಖ್ಯಾತ ನಟ ಕೆಜಿಎಫ್ ಚಾಪ್ಟರ್ 2 ನಲ್ಲಿ ಅದಿರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಅವರಿಗೆ ಕೆಜಿಎಫ್2 ಸಿನಿಮಾದಲ್ಲಿ ಅಭಿನಯ ಮಾಡಲಿಕ್ಕೆ 9ರಿಂದ 10 ಕೋಟಿ ನೀಡಲಾಗಿದೆಯಂತೆ. ಹಾಗೇನೆ ಪೊಲಿಟಿಷಿಯನ್ ರಮಿಕ ಸೆನ್ ಪಾತ್ರದಲ್ಲಿ ಕಾಣಿಸಿದ ನಟಿ ರವೀನಾ ಟಂಡನ್ ಅವರಿಗೆ ಮೂರರಿಂದ ನಾಲ್ಕು ಕೋಟಿ ಸಂಭಾವನೆ ನೀಡಿದ್ದಾರೆ  ಎನ್ನಲಾಗುತ್ತಿದೆ, ಮತ್ತು ನಾಯಕ ನಟ ಯಶ್ ಅವರ ಜೊತೆ ನಟಿಯಾಗಿ ಕಾಣಿಸಿಕೊಂಡಿರುವ ಶ್ರೀನಿಧಿ ಶೆಟ್ಟಿಯವರಿಗೆ ನಾಲ್ಕು ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಹಾಗೆ ಇನ್ನೋರ್ವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ 80 ಲಕ್ಷ, ಮಾಳವಿಕಾ ಅವರಿಗೆ 60 ಲಕ್ಷ ಎಂದು ತಿಳಿದುಬಂದಿದೆ.   

ಜೊತೆಗೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರಿಗೆ ಸುಮಾರು 15 ರಿಂದ 20 ಕೋಟಿ ಸಂಭಾವನೆ ನೀಡಲಾಗಿದ್ದು, ರಾಕಿ ಬಾಯ್ ಯಶ್ ಅವರು  25 ರಿಂದ 30 ಕೋಟಿ ಸಂಭಾವನೆಯ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ. ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...