ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೆ

By Infoflick Correspondent

Updated:Wednesday, August 24, 2022, 20:06[IST]

ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೆ

ನಟ ಅನಿರುದ್ಧ್ ಕಿರುತೆರೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ ಅರೂರು ಜಗದೀಶ್ ಬಹಿರಂಗ ಪಡಿಸಿದ್ದರು. ಆರೂರು ಹೇಳಿದ ಬಳಿಕ ಅನಿರುದ್ಧ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಹೆಚ್ಚಾಗಿತ್ತು. 

ಸಂಭಾವನೆ ವಿಚಾರದಲ್ಲಿ ‘ಜೊತೆ ಜೊತೆಯಲಿ’ ಸೀರಿಯಲ್​ ನಿರ್ಮಾಪಕರು ಮತ್ತು ಅನಿರುದ್ಧ್​ ನಡುವೆ ಅನೇಕ ಬಾರಿ ಮಾತುಕತೆ ಆಗಿತ್ತು.  ಜೀ ವಾಹಿನಿಯಲ್ಲೇ ಇವರು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಲಾವಿದ ಎನ್ನುವ ಸುದ್ದಿಯೂ ಹೊರ ಬಿದ್ದಿದೆ. ಜೊತೆ ಜೊತೆಯಲಿ ಧಾರಾವಾಹಿ ಶುರುವಾದಾಗ ಒಂದು ಸಂಭಾವನೆ ಪಡೆಯುತ್ತಿದ್ದ ಅನಿರುದ್ಧ, ಕೋವಿಡ್ ವೇಳೆಯಲ್ಲಿ ಆ ಸಂಭಾವನೆಯನ್ನು ಹೆಚ್ಚಿಸಿಕೊಂಡರು ಎನ್ನುತ್ತವೆ ಆಪ್ತ ಮೂಲಗಳು.  

ಜೊತೆ ಜೊತೆಯಲಿ ಧಾರಾವಾಹಿ ಶುರುವಾಗುವಾಗ ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡಿದ್ದು ದಿನಕ್ಕೆ 25 ಸಾವಿರ ರೂಪಾಯಿ ಸಂಭಾವನೆಯಂತೆ. ಕೋವಿಡ್ ವೇಳೆಯಲ್ಲಿ 38 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ನಟ ಅನಿರುದ್ಧ್ ಒಂದು ದಿನಕ್ಕೆ 38 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ! 


ಈ ಧಾರಾವಾಹಿಯಲ್ಲಿ ನಟಿಸಿದ್ದಕ್ಕಾಗಿ ತಮಗೆ ಸಿಕ್ಕ ಸಂಭಾವನೆಯೇ ಕಡಿಮೆ ಎಂದು ಅನಿರುದ್ಧ್​ ಹೇಳಿದ್ದಾರೆ. ಸಂಬಳದ ವಿಚಾರಕ್ಕೆ ಏನೆಲ್ಲ ಮಾತುಕತೆಗಳು ನಡೆದಿದ್ದವು ಎಂಬುದನ್ನು ಅವರು ಈಗ ವಿವರಿಸಿದ್ದರು. ‘ಸೂಕ್ತ ಸಂಬಳ ಕೇಳುವ ಅಧಿಕಾರ ನನಗೆ ಇಲ್ಲವೇ’ ಎಂದು ಅನಿರುದ್ಧ್​ ಪ್ರಶ್ನಿಸಿದ್ದರು. ಹಾಗಾಗಿ ಬಲ್ಲಮೂಲಗಳ ಪ್ರಕಾರ ತಿಳಿದ 38 ಸಾವಿರ ಸತ್ಯವೇ ? !