ತುಂಬಾ ಬಡತನದಿಂದ ಬಂದ ರಾಧಿಕಾ ಕುಮಾರಸ್ವಾಮಿ ಇದು ಕೋಟಿ ಕೋಟಿ ಒಡತಿ..! ಎಷ್ಟಿದೆ ನೋಡಿ ಆಸ್ತಿ

By Infoflick Correspondent

Updated:Friday, September 23, 2022, 08:54[IST]

ತುಂಬಾ ಬಡತನದಿಂದ ಬಂದ ರಾಧಿಕಾ ಕುಮಾರಸ್ವಾಮಿ ಇದು ಕೋಟಿ ಕೋಟಿ ಒಡತಿ..! ಎಷ್ಟಿದೆ ನೋಡಿ ಆಸ್ತಿ

ರಾಧಿಕಾ ಕುಮಾರಸ್ವಾಮಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು ರಾಧಿಕಾ ಆರಂಭದಲ್ಲಿಯೇ ನಟಿಯಾಗಿ ಮಿಂಚಿದವರು. ನಿನಗಾಗಿ ಸಿನಿಮಾ ಮೂಲಕ ಸಿನಿಮಾದಲ್ಲಿ ಎಂಟ್ರಿ ಪಡೆದರು. ಸಿನೆಮಾರಂಗಕ್ಕೂ ಬರುವ ಮುನ್ನ ತುಂಬಾನೇ ಕಷ್ಟ ಪಟ್ಟವರು ರಾಧಿಕಾ ಕುಮಾರಸ್ವಾಮಿ. ಶಿವಣ್ಣ ಅವರ ಜೊತೆ ಅಣ್ಣ ತಂಗಿ, ತವರಿಗೆ ಬಾ ತಂಗಿ ಸಿನಿಮಾ ಮೂಲಕ ರಾಧಿಕಾ ಮನೆ ಮನೆಗೂ ತಲುಪಿದರು. ಸಿನಿಮಾರಂಗಕ್ಕೆ ಬರಬೇಕು ಅಂದರೆ ಆರಂಭದಲ್ಲಿ ಕೆಲವರ ಸಹಾಯ ಪಡೆದೆ ಬಂದಿದ್ದಾರೆ ರಾಧಿಕಾ ಎನ್ನಲಾಗಿದೆ. ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದ ನಟಿ ರಾಧಿಕಾ ಕುಮಾರಸ್ವಾಮಿ ಆರಂಭದಿಂದಲೂ ತುಂಬಾ ಶ್ರೀಮಂತ ಏನು ಅಲ್ಲ. ಹಾಗೆ ಅವರ ಕುಟುಂಬ ಕೂಡ ಬಡತನದ ಕುಟುಂಬ ಆಗಿತ್ತು. ರಾಧಿಕಾ ಅವರಿಗೆ 2000 ಇಸ್ವಿಯಲ್ಲಿ ರತ್ತನ್ ಎಂಬುವವರ ಜೊತೆ ವಿವಾಹ ಮಾಡಲಾಗಿತ್ತು.

ಅದು ತುಂಬಾ ಸಣ್ಣ ವಯಸ್ಸಿನ ವೇಳೆ ಎನ್ನಲಾಗಿದೆ.ಅವರಿಗೆ ಬಾಲ್ಯ ವಿವಾಹ ಆಯಿತು ಎಂದು ಕೆಲವು ಕಡೆ ಸುದ್ದಿ ಕೂಡ ಆಯಿತು. ಹೌದು ಸಿನಿಮಾ ರಂಗಕ್ಕೆ ಬರಲು ಇದೇ ರತ್ತನ್ ಎನ್ನುವವರ ತಾಯಿಯೇ ಕಾರಣವಂತೆ. ಆದರೆ ಇವರಿಬ್ಬರ ದಾಂಪತ್ಯ ಜೀವನ ಅಷ್ಟಾಗಿ ಚೆನ್ನಾಗಿರಲಿಲ್ಲವಂತೆ. ಇದಾದ ಬಳಿಕ 2002 ರಲ್ಲಿ ರತನ್ ಅವರು ಸಾವನ್ನಪ್ಪುತ್ತಾರೆ. ಹೌದು ರಾಧಿಕಾ ಅವರು ಅಲ್ಲಿಯವರೆಗೆ ಸಿನಿಮಾರಂಗದಲ್ಲಿ ಹಂತ ಹಂತವಾಗಿ ಬೆಳೆಯಲು ಪ್ರಾರಂಭ ಮಾಡಿದ್ದರು...ಆಗ 2006ರಲ್ಲಿ ಕುಮಾರಸ್ವಾಮಿಯವರನ್ನು ವಿವಾಹವಾಗುವ ಮೂಲಕ ಮತ್ತೆ ಸುದ್ದಿ ಆಗಿದ್ದು ಇದೆ ರಾಧಿಕಾ. ಹೌದು ಈ ವಿಚಾರವನ್ನು ರಾಧಿಕಾ ಆಗಲಿ ಅಥವಾ ಕುಮಾರಸ್ವಾಮಿ ಆಗಲಿ 2010ರ ವರೆಗೆ ಬಹಿರಂಗವಾಗಿ ಎಲ್ಲಿಯೂ ಕೂಡ ಹೇಳಿಕೊಳ್ಳಲಿಲ್ಲ. ಬಳಿಕ ಇವರಿಬ್ಬರಿಗೆ ಒಂದು ಮಗು ಇರುವುದು ಕೂಡ ಖಚಿತ ಆಗಿದ್ದು ಆಕೆಯ ಹೆಸರು ಶಮಿಕ ಎಂದು ತಿಳಿದುಬಂದಿತು.

ನಂತರ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ರಾಧಿಕಾ ಕುಮಾರಸ್ವಾಮಿ ಕುಮಾರಸ್ವಾಮಿ ಅವರಿಂದಲೂ ಸಹ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ. ಈ ಹಂತದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಮತ್ತೊಂದು ಮದುವೆ ಆಗಲಿದ್ದಾರೆ ಎನ್ನುವ ಗಾಳಿ ಸುದ್ದಿ ಕೂಡ ಎದ್ದಿದ್ದು ಅದಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ಫುಲ್ ಸ್ಟಾಪ್ ಇಟ್ಟೆ ಬಿಟ್ಟರು. ಇಷ್ಟೆಲ್ಲಾ ಏಳು ಬೀಳುಗಳನ್ನು ಕಂಡಿರುವ ರಾಧಿಕಾ ಅವರು ಎಷ್ಟೆಲ್ಲಾ ಆಸ್ತಿ ಮಾಡಿದ್ದಾರೆ, ಸಿನಿಮಾ ರಂಗದಿಂದ ಮತ್ತು ಬೇರೆ ಬೇರೆ ಕ್ಷೇತ್ರದಿಂದ ಎಷ್ಟು ಹಣ ಮಾಡಿದ್ದಾರೆ ಗೊತ್ತಾ..? ನಿಜಕ್ಕೂ ನೀವು ಕೂಡ ಬೆರಗಾಗುತ್ತೀರಿ. ರಾಧಿಕಾ ಕುಮಾರಸ್ವಾಮಿ ಅವರ ಸ್ವಂತ ಊರಾದ ದಕ್ಷಿಣ ಕನ್ನಡದ ಸಾಲೆತ್ತೂರು ಎಂಬ ಊರಿನಲ್ಲಿ ಒಂದು ಮನೆಯನ್ನು ಕಟ್ಟಿಸಿದ್ದಾರೆ ರಾಧಿಕಾ. ಆ ಮನೆ ಬೆಲೆ ಮೂರು ಕೋಟಿ. ಹಾಗೆ ಮಂಗಳೂರಿನ ದೇವಸ್ಯ ಬಳಿ ಒಂದು ಮನೆಯನ್ನು ಕೂಡ ಕಟ್ಟಲಾಗಿದೆ. ಆದರ ಬೆಲೆ 70ಲಕ್ಷ ಅಂತೆ..ಕಲ್ಲಡ್ಕದಲ್ಲಿ ನಾಲ್ಕು ಕೋಟಿ ಮನೆಯನ್ನು ರಾಧಿಕಾ ಹೊಂದಿದ್ದಾರೆ. ಹಾಗೆ ಬೆಂಗಳೂರಿನ ಸಂಜಯ್ ನಗರದಲ್ಲಿರುವ ದೊಡ್ಡ ಬಂಗಲೇ ಹೊಂದಿದ್ದು ಆ ಮನೆಯ ನಿಗದಿತ ಬೆಲೆ ತಿಳಿದು ಬಂದಿಲ್ಲ.

ಇಷ್ಟೆಲ್ಲಾ ಆಸ್ತಿ ಮಾಡಿರುವ ರಾಧಿಕಾ ಕುಮಾರಸ್ವಾಮಿ ಅವರು ಹುಟ್ಟಿ ಬಂದಿದ್ದು ಬಡತನದಲ್ಲೇ ಎಂಬುದು ಗಮನ ಇಟ್ಟುಕೊಳ್ಳಿ. ನಂತರ ಸಿನಿಮಾರಂಗದಿಂದ ಮತ್ತು ಬೇರೆ ಬೇರೆ ಕ್ಷೇತ್ರದಿಂದ ಸಾಕಷ್ಟು ಹಣ ಮಾಡಿದ್ದಾರೆ. ನಾಲ್ಕು ಮನೆ ಜೊತೆ ಕೆಲವು ಸೈಟ್ಗಳನ್ನು ಕೂಡ ರಾಧಿಕಾ ಕುಮಾರಸ್ವಾಮಿ ಮಾಡಿಕೊಂಡಿದ್ದಾರಂತೆ. ಕೆಲವೊಂದಿಷ್ಟು ಕಂಪನಿಗಳಲ್ಲಿ ಶೇರು ಹಾಕಿದ್ದಾರಂತೆ. ಶಮಿಕ ಹೆಸರಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯೂ ಇದೆ. ಮೊದಲಿಗೆ ಲಕ್ಕಿ ಸಿನಿಮಾವನ್ನ ನಿರ್ಮಾಣ ಮಾಡಿದ ರಾಧಿಕಾ ಕುಮಾರಸ್ವಾಮಿ ಅವರದ್ದೆಯಾದ ಸ್ವೀಟ್ ಚಿತ್ರವನ್ನು ಸಹ ನಿರ್ಮಾಣ ಮಾಡಿದರು. ಇದೀಗ ಬಿಡುಗಡೆ ಹಂತಕ್ಕೆ ಬಂದು ನಿಂತಿರುವ ರಾಧಿಕಾ ಅಭಿನಯದ ಬೈರಾ ದೇವಿ ಚಿತ್ರವನ್ನು ಕೂಡ ಇವರೇ ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಹಣ ಆಸ್ತಿ ಅಂತಸ್ತು ಮಾಡಿರುವ ರಾಧಿಕಾ ಕುಮಾರಸ್ವಾಮಿ ಅವರ ಮೇಲೆ ಒಮ್ಮೆ ಸಿಸಿಬಿ ಅಧಿಕಾರಿಗಳು ನೋಟಿಸ್ ಕೊಟ್ಟು ವಿಚಾರಣೆಗೆ ಕರೆ ತಂದಿದ್ದರಂತೆ. ಆದರೆ ಎಲ್ಲ ದಾಖಲೆ ಸರಿ ಇದ್ದ ಕಾರಣಕ್ಕೆ ಇವರ ಮೇಲೆ ಅವರ ಆಸ್ತಿಯ ಮೇಲೆ ಯಾವ ಪರಿಣಾಮ ಬೀಳಲಿಲ್ಲ ಎಂದು ತಿಳಿದುಬಂದಿದೆ. ರಾಧಿಕಾ ಹುಟ್ಟಿದ್ದು ಬಡತನದಲ್ಲಿ, ಈಗ ಕೋಟಿ ಕೋಟಿ ಒಡತಿ, ದೊಡ್ಡ ಶ್ರೀಮಂತೇಯಾಗಿ ಮೆರೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಜೀವನದಲ್ಲಿ ಯಾವಾಗ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇವರು ಕೂಡ ಉದಾಹರಣೆ ಆಗಿದ್ದಾರೆ. ಶ್ರಮ ಇರಬೇಕು ಅಷ್ಟೇ. ಈ ಮಾಹಿತಿಯನ್ನು ಶೇರ್ ಮಾಡಿ ತಪ್ಪದೆ ಮಾಹಿತಿಗೊಂದು ಮೆಚ್ಚುಗೆ ತಿಳಿಸಿ ಧನ್ಯವಾದಗಳು....