Rashmi Mandanna : ಪುಷ್ಪ ವೇಳೆ ಬೆಂಗಳೂರಿನಲ್ಲಿ ಅಂದು ರಶ್ಮಿಕಾ ಕಂಡಿದ್ದು ಹೀಗೆ..! ಮತ್ತದೇ ವಿಡಿಯೋ ಈಗ ಬಾರಿ ವೈರಲ್..!

By Infoflick Correspondent

Updated:Wednesday, May 4, 2022, 20:27[IST]

Rashmi Mandanna : ಪುಷ್ಪ ವೇಳೆ ಬೆಂಗಳೂರಿನಲ್ಲಿ ಅಂದು ರಶ್ಮಿಕಾ ಕಂಡಿದ್ದು ಹೀಗೆ..! ಮತ್ತದೇ ವಿಡಿಯೋ ಈಗ ಬಾರಿ ವೈರಲ್..!

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ನೀಡಿದ ನಟಿ ರಶ್ಮಿಕಾ ಮಂದಣ್ಣ ಇದೀಗ ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು. ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾರಂಗದಲ್ಲಿ ಬೆಳೆಯುತ್ತಿದ್ದಂತೆ, ಹೆಚ್ಚು ಅಭಿಮಾನಿ ಬಳಗ ಗಿಟ್ಟಿಸಿಕೊಳ್ಳುತ್ತಿದ್ದಂತೆ ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡುವುದನ್ನೆ ಕಡಿಮೆ ಮಾಡಿ ಅತ್ತ ಬೇಡಿಕೆ ಹೆಚ್ಚಾದ ಬೆನ್ನಲ್ಲೆ ತೆಲುಗು, ತಮಿಳು, ಹಿಂದಿ ಹೀಗೆ ಬೇರೆಬೇರೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಹೌದು ತೆಲುಗು ಸಿನಿಮಾಗಳಲ್ಲಿ ಹೆಚ್ಚು ಅಭಿನಯ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ಜೊತೆ ಅಭಿನಯ ಮಾಡಿ ಆರಂಭದ ಒಂದು ಸಿನಿಮಾದಲ್ಲಿ ಲಿಪ್ ಲಾಕ್ ಮಾಡಿ ತುಂಬಾನೇ ಸುದ್ದಿಯಾಗಿದ್ದರು.  

ಅದರ ವಿಡಿಯೋ ತುಣುಕು ಫೋಟೋಗಳು ಬಾರಿ ವೈರಲ್ ಆಗಿದ್ದ ನೀವು ನೋಡಿದ್ದೀರಿ. ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಸಂದರ್ಭಗಳಲ್ಲಿ ಸಂದರ್ಶನವ ನೀಡುವ ವೇಳೆ ಕನ್ನಡದ ಬಗ್ಗೆ ಹೇಗೆ ಬೇಕೋ ಹಾಗೆ ಮಾತನಾಡಿ ಹಾಗೆ ಕನ್ನಡ ನನಗೆ ಹೆಚ್ಚು ಬರುವುದಿಲ್ಲ ಎಂಬಂತೆ ಮಾತನಾಡಿ ಟ್ರೋಲಿಗರ ಕೈಗೆ ಸಿಕ್ಕು ಟ್ರೋಲ್ ಕೂಡ ಆಗಿದ್ದಾರೆ. ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಅಭಿನಯವ ಮಾಡಿ ಸೈ ಕೂಡ ಎನಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾದ ಫ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ಅಂದು ಬೆಂಗಳೂರಿನಲ್ಲಿ ಜರುಗಿತ್ತು. ಈ ಪುಷ್ಪ ಸಿನಿಮಾದ ಪ್ರಚಾರ ನಡೆದಿದ್ದ ವೇಳೆ ಒಂದು ವಿಡಿಯೋ ಸಹ ಬಾರಿ ವೈರಲ್ ಆಗಿತ್ತು.

ಆಗ ರಶ್ಮಿಕ ಮಂದಣ್ಣ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಹೀಗೆ. ಅದೇ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ನೀವು ಕೂಡ ಈ ವಿಡಿಯೋ ನೋಡಿಲ್ಲ ಎಂದಾದರೆ ತಪ್ಪದೇ ಈ ಲೇಖನದ ಕೊನೆಯಲ್ಲಿದೆ ಒಮ್ಮೆ ನೋಡಿ. ಹಾಗೇನೇ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.