Meghana Raj : ಚಿರು ಹಾಗೂ ಅವರ ತಂದೆಯ ಬಾಂಡಿಂಗ್ ಹೇಗಿತ್ತು ಗೊತ್ತಾ..? ಮೇಘನಾ ರಾಜ್ ಬಿಚ್ಚಿಟ್ಟ ಸತ್ಯ

By Infoflick Correspondent

Updated:Sunday, August 28, 2022, 10:16[IST]

Meghana Raj : ಚಿರು ಹಾಗೂ ಅವರ ತಂದೆಯ ಬಾಂಡಿಂಗ್ ಹೇಗಿತ್ತು ಗೊತ್ತಾ..? ಮೇಘನಾ ರಾಜ್ ಬಿಚ್ಚಿಟ್ಟ ಸತ್ಯ

ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಆಗಿದ್ದು ನಿಮಗೂ ಕೂಡ ಗೊತ್ತು. ಸ್ಯಾಂಡಲ್ ವುಡ್ಗೆ ಇದು ತುಂಬಾ ತುಂಬಲಾರದ ನಷ್ಟವಾಗಿ ಹೊರಹೊಮ್ಮಿದೆ..ಹೌದು ನಟ ಚಿರಂಜೀವಿ ಸರ್ಜಾ ಅವರು ಇನ್ನಿಲ್ಲ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಕನ್ನಡಿಗರು ಕಣ್ಣೀರು ಹಾಕಿದ್ದರು. ಜೊತೆಗೆ ಅವರ ಕುಟುಂಬದ ಬಗ್ಗೆ ಚಿಂತನೆ ನಡೆಸಿ ಅವರ ಪತ್ನಿ ಮೇಘನಾ ರಾಜ್ ಅವರ ಬಗ್ಗೆ ಎಲ್ಲರೂ ಕಣ್ಣೀರು ಹಾಕಿ ಇದು ಎಂಥಾ ನೋವಿನ ವಿಚಾರ ದೇವರೇ ಎಂದು ನೋವ ವ್ಯಕ್ತಪಡಿಸಿದ್ದರು. ಕೇವಲ ಮದುವೆಯಾದ ಎರಡು ವರ್ಷಕ್ಕೆ  ಚಿರು ಅವರು ಇಲ್ಲವಾದರಲ್ಲ ಎಂದು ಸಾಕಷ್ಟು ಮರುಗಿದ್ದು ಸಹ ಇದೆ. ಹೌದು ಇದೆಲ್ಲದರ ನಡುವೆ ನಟಿ ಮೇಘನ ರಾಜ್ ವಾಸ್ತವ ಅರಿತು ಜೀವನ ನಡೆಸುತ್ತಿದ್ದಾರೆ..ತುಂಬಾ ಸ್ಟ್ರಂತ್ ಇಟ್ಟುಕೊಂಡು ಜೀವನದಲ್ಲಿ ಇವೆಲ್ಲ ಮಾಮೂಲಿ ಬರುವ ನೋವನ್ನು ನಾವೇ ಅನುಭವಿಸಬೇಕು ಎಂಬುದಾಗಿ ಅರಿತು ನೋವನ್ನು ಒಳಗೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. 

ಚಿರು ಅವರ ಪುತ್ರನಾಗಿ ರಾಯನ್ ರಾಜ್ ಸರ್ಜಾ ಈಗಾಗ್ಲೇ ಆಗಮಿಸಿದ್ದು, ಮಗನ ಲಾಲನೆ ಪಾಲನೆಯಲ್ಲಿ ಇಷ್ಟು ದಿವಸ ಮೇಘನಾ ರಾಜ್ ಅವರು ಬಿಜಿಯಾಗಿದ್ದರು. ಹೌದು ಚಿರು ನೆನಪಿನಲ್ಲಿ ಇನ್ನಷ್ಟು ನೋವು ಇವರಿಗೆ ಆಗಬಹುದು ಎಂದು ಕಿರುತೆರೆಯಿಂದ ಇವರಿಗೆ ಜಡ್ಜ್ ಆಗಿ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಹೋಯಿತು. ಅದರಂತೆ ಡಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಮೇಘನಾ ಅವರು ಜಡ್ಜ್ ಆಗಿ ಬಂದಿದ್ದನ್ನ ನೀವು ನೋಡಿದ್ದೀರಿ. ಹೌದು ನಟ ಚಿರಂಜೀವಿ ಸರ್ಜಾ ಮತ್ತು ಚಿರು ತಂದೆ ವಿಜಯ ಕುಮಾರ ಅವರ ಬಾಂಡಿಂಗ್ ಹೇಗಿತ್ತು ಎಂಬುದಾಗಿ ಈಗ ನಟಿ ಮೇಘನಾ ರಾಜ್ ಅವರು ಹೇಳಿಕೊಂಡಿದ್ದಾರೆ. ನನ್ನ ಹಾಗೂ ನನ್ನ ತಂದೆಯ ನಡುವೆ ಸ್ಪೋಕನ್ ಬಾಂಡಿಂಗ್ ಇದೆ. ಆದರೆ ಚಿರು ಮತ್ತು ಅವರ ತಂದೆಯ ನಡುವೆ ಸ್ಪೋಕನ್ ಇಲ್ಲದೇನೆ ಒಬ್ಬರನ್ನೊಬ್ಬರು ಹೆಚ್ಚು ಪ್ರೀತಿ ಮಾಡುತ್ತಿದ್ದರು. 

ನನ್ನ ಮಗ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದಾನೆ ಮನೆಯನ್ನು ಕಟ್ಟುತ್ತಿದ್ದಾನೆ ಎಂದರೆ ಚಿರು ತಂದೆಗೆ ಹೆಚ್ಚು ಖುಷಿಯಾಗುತ್ತಿತ್ತು. ಹೆಮ್ಮೆ ಪಡುತ್ತಿದ್ದರು ಮಗನ ಬಗ್ಗೆ ಹೇಳಿ ಎಂದಿದ್ದಾರೆ ಮೇಘನಾ ರಾಜ್. ಚಿರು ನನ್ನ ಬಳಿ ಬಂದು ಅಪ್ಪನಿಗೆ ಅಡುಗೆ ಮಾಡುತ್ತೀಯಾ, ಅಪ್ಪನಿಗೆ ಚಿಕನ್ ಅಂತೆ ಮಾಡುತ್ತೀಯ ಎಂದು ಸಾಕಷ್ಟು ಬಾರಿ ಹೇಳಿಕೊಳ್ಳುತ್ತಿದ್ದರು. ಚಿರು ಅಷ್ಟು ಪ್ರೀತಿಯಿಂದ ಅವರ ತಂದೆಯನ್ನ ಹಚ್ಚಿ ಕೊಂಡಿದ್ದರು. ಅವರಿಬ್ಬರ ಆ ಒಡನಾಟವೇ ಹಾಗೇನೇ ಬಿಡಿ ಎಂದು ಇದೀಗ ಎಂದು ಮೇಘನಾ ರಾಜ್ ಅವರು ಈ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..