ಧ್ರುವಸರ್ಜಾ ಪತ್ನಿ ಪ್ರೇರಣಾ ಅದ್ದೂರಿ ಸೀಮಂತ ಹೇಗಿರಲಿದೆ ಗೊತ್ತಾ ?

By Infoflick Correspondent

Updated:Tuesday, September 6, 2022, 20:45[IST]

ಧ್ರುವಸರ್ಜಾ ಪತ್ನಿ ಪ್ರೇರಣಾ ಅದ್ದೂರಿ ಸೀಮಂತ ಹೇಗಿರಲಿದೆ ಗೊತ್ತಾ ?

ಸೋಷಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿ ಹಂಚಿಕೊಂಡ ಧ್ರುವ ಸರ್ಜಾ. ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮತ್ತು ಪ್ರೇರಣಾ ಸೆಪ್ಟೆಂಬರ್‌ ತಿಂಗಳಿನಲ್ಲಿ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿದ್ದಾರೆ.

2019ರಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಬಾಲ್ಯದಿಂದ ಸ್ನೇಹಿತರಾಗಿದ್ದು ಪ್ರೀತಿಯಲ್ಲಿ ಬಿದ್ದು ಫೋಷಕರ ಒಪ್ಪಿಗೆ ಪಡೆದುಕೊಂಡು ಮದುವೆಯಾದ್ದರು. ಅಣ್ಣನ ಮಗ ರಾಯನ್‌ ರಾಜ್‌ ಸರ್ಜಾನ ಮುದ್ದಾಡುತ್ತಿದ್ದ ಈ ಜೋಡಿಗೆ ಜನರು ಪದೇ ಪದೇ ಕಳುತ್ತಿದ್ದರು ಗುಡ್ ನ್ಯೂಸ್ ಯಾವಾಗ ಎಂದು. ಸ್ಪೆಷಲ್ ವಿಡಿಯೋ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ

ನಮ್ಮ ಜೀವನದ ಹೊಸ ಫೇಸ್‌ ಎಂಟರ್ ಆಗುತ್ತಿದ್ದೀವಿ. ಶೀಘ್ರದಲ್ಲಿ ಬರುತ್ತಿರುವ ಪುಟ್ಟ ಕಂದಮ್ಮನನ್ನು ಆಶೀರ್ವಾದಿಸಿ. ಜೈ ಹನುಮಾನ' ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ. ಎರಡು ಮೂರು ಕಾನ್ಸೆಪ್ಟ್‌ನಲ್ಲಿ ಧ್ರುವ ಸರ್ಜಾ ಫೋಟೋ ಶೂಟ್ ಮಾಡಿಸಿದ್ದಾರೆ. ಇದಕ್ಕೆ ಅಂಬಾರಿ ಸಿನಿಮಾದ 'ಪೆದ್ದು ಮುದ್ದು ಜೋಡಿ' ಹಾಡನ್ನು ಸೇರಿಸಿದ್ದಾರೆ. 
ನೀವಿಬ್ಬರೂ ಕೊಟ್ಟಿರುವ ಬ್ಯೂಟಿಫುಲ್ ನ್ಯೂಸ್‌ ಇದು. ದೇವರು ಒಳ್ಳೆಯದು ಮಾಡಲಿ. ಪುಟ್ಟ ಕಂದಮ್ಮನಿಗೆ ನನ್ನಿಂದು ಫುಲ್ ಪ್ರೀತಿ' ಎಂದು ಮೇಘನಾ ರಾಜ್ ಕಾಮೆಂಟ್ ಮಾಡಿದ್ದಾರೆ.

ಮೇಘನಾ ರಾಜ್ ಸೀಮಂತವನ್ನೇ ತುಂಬಾ ಅದ್ದೂರಿಯಾಗಿ ಮಾಡಿ ಬಂಗಾರದ ತೊಟ್ಟಿಲು ಉಡುಗೊರೆಯಾಗಿ ನೀಡಿದ ಧ್ರುವ ತನ್ನ ಹೆಂಡತಿಯ ಸೀಮಂತವನ್ನೂ  ಈ ತಿಂಗಳು ಇನ್ನೂ ಭರ್ಜರಿಯಾಗಿ ಮಾಡುತ್ತಾರೆ ಎಂದು ಅಭಿಮಾನಿಗಳ ಅಭಿಪ್ರಾಯವಾಗಿದೆ.