Yash : ಗಾಂಧಿನಗರದಲ್ಲಿ ಕಟೌಟ್ ಕನಸು ಕಂಡಿದ್ದ ಯಶ್ ಇದೀಗ ಎಂಥಾ ಸಾಧನೆ ಮಾಡಿದ್ದಾರೆ ನೋಡಿ..!

By Infoflick Correspondent

Updated:Sunday, May 1, 2022, 11:07[IST]

Yash : ಗಾಂಧಿನಗರದಲ್ಲಿ ಕಟೌಟ್ ಕನಸು ಕಂಡಿದ್ದ ಯಶ್ ಇದೀಗ ಎಂಥಾ ಸಾಧನೆ ಮಾಡಿದ್ದಾರೆ ನೋಡಿ..!

ಕನ್ನಡ ಸಿನಿಮಾರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಜಿಎಫ್ ಭಾಗ ಒಂದರ ಮೂಲಕ ಇಡೀ ಭಾರತಕ್ಕೆ ಪರಿಚಯ ಆಗಿದ್ದ ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಭಾಗ ಎರಡರಲ್ಲಿ ಸಕತ್ತಾಗಿ ದೂಳೆಬ್ಬಿಸಿದ್ದಾರೆ. ರಾಕಿ ಬಾಯ್ ಕಣ್ತುಂಬಿಕೊಂಡ ಅಭಿಮಾನಿಗಳು ಈಗಲೂ ಹುಚ್ಚೆದ್ದು ಚಿತ್ರಮಂದಿರಗಳಲ್ಲಿ ಕುಣಿದಿದ್ದಾರೆ ಎಂದರೆ ನೀವೇ ಅರ್ತೈಸಿಕೊಳ್ಳಿ ಈ ಸಿನಿಮಾ ಎಷ್ಟರ ಮಟ್ಟಿಗೆ ಸಕತ್ ಆಗಿರಬಹುದು ಎಂದು. ಹೌದು ಈ ಸಿನಿಮಾವನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಕೆಜಿಎಫ್ ಭಾಗ-2 ಸಿನಿಮಾ ಒಂದು ವಿಭಿನ್ನವಾದ ಸಿನಿಮಾ,, ಯಾರೂ ಕೂಡ ಈ ರೀತಿ ಸಿನಿಮಾ ಮಾಡಲಿಕ್ಕೆ ಆಗುವುದಿಲ್ಲ. ಇಂತಹ ಸಿನಿಮಾ ಮತ್ತೆ ಬರುವುದಿಲ್ಲ ಎಂದು ಕನ್ನಡ ಸಿನಿಮಾವನ್ನು ಹಾಗೂ ಕನ್ನಡ ಇಂಡಸ್ಟ್ರಿ ತಾಕತ್ ಅನ್ನು ಹಾಡಿ, ಚಪ್ಪಾಳೆ ಹೊಡೆದು ಹೊಗಳುತ್ತಿದ್ದಾರೆ. 

ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಇಡೀ ಪ್ರಪಂಚವೇ ಫಿದಾ ಆಗಿದ್ದು, ಕೆಜಿಎಫ್ ಭಾಗ-2 ಸಿನಿಮಾ ಅದ್ಭುತವಾಗಿ ನಿರ್ದೇಶನ ಮಾಡಿದ ಪ್ರಶಾಂತ್ ನೀಲ್ ಅವರು ಕೂಡ ಸೈ ಎನಿಸಿಕೊಳ್ಳುತ್ತಿದ್ದಾರೆ. ಯಶ್ ಅವರು ಕೆಜಿಎಫ್ ಸಿನಿಮಾ ಬರುವ ಮುನ್ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವರ ಸಿನಿಮಾ ಜರ್ನಿ ಕುರಿತು, ಅವರ ಯಶಸ್ಸಿನ ಮೂಲಕ ಗಾಂಧಿನಗರದಲ್ಲಿ ನನ್ನದೊಂದು ಕಟೌಟ್ ನಿಲ್ಲಬೇಕು ಎಂದು ಕನಸು ಕಂಡಿದ್ದೆ, ಅದು ಆಯ್ತು ಎಂದಿದ್ದರು. ಬಳಿಕ ಅವರ ರಾಮಾಚಾರಿ ಸಿನಿಮಾ ಯಶಸ್ಸಿನ ಬಳಿಕ ವೇದಿಕೆ ಮೇಲೆ ನಮ್ಮ ಕನ್ನಡ ಸಿನಿಮಾ ದೊಡ್ಡ ಲೆವೆಲ್ಲಿಗೆ ಹೋಗುತ್ತೆ, ಇಡೀ ಭಾರತೀಯ ಚಿತ್ರರಂಗದವರು ಕನ್ನಡ ಸಿನಿಮಾ ನೋಡಿ, ಶಿಳ್ಳೆ ಹೊಡೆದು ಚಪ್ಪಾಳೆ ಹೊಡೆಯಬೇಕು ಅದೇ ನನ್ನ ಗುರಿ ಎಂದಿದ್ದರು. 

  

ಅದು ಕೂಡ ಕೆಜಿಎಫ್2 ಮೂಲಕ ಯಶಸ್ವಿಯಾಗಿದೆ ಎಂದು ಹೇಳಬಹುದು. ಹೌದು ಇದಕ್ಕೆಲ್ಲ ಕಾರಣ ಅವರಲ್ಲಿರುವ ಆತ್ಮವಿಶ್ವಾಸ, ಆ ಒಂದು ಹಠ, ಸಾಧನೆ ಮಾಡಬೇಕೆನ್ನುವ ಕನಸು, ಹಾಗೆ ಈ ಕೆಜಿಎಫ್ ಚಿತ್ರತಂಡದಲ್ಲಿ ಶ್ರಮಿಸಿದ ಪ್ರತಿಯೊಬ್ಬರು ಕೂಡ ಕಂಡಿದ್ದ ಕನಸು, ಅದಕ್ಕೆ ಬೇಕಾದ ಕೆಲಸ, ಕಷ್ಟ ಇದ್ದರೂ ಕೂಡ ಅದನ್ನು ಎದುರಿಸಿ ಕನಸನ್ನು ನನಸು ಮಾಡಿದ್ದಾರೆ ಇದೇ ಅಲ್ವಾ ನಿಜವಾದ ಸಾಧನೆ. ಇನ್ನೂ ಕೂಡ ಯಶ್ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ಹಾಗೆ ಕೆಜಿಎಫ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಕೆಜಿಎಫ್ ಚಿತ್ರತಂಡಕ್ಕೆ ಒಳ್ಳೆದಾಗಲಿ ಧನ್ಯವಾದಗಳು....