ನಟಿ ರಾಗಿಣಿ,ಸಂಜನಾರನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಇಡುವುದಾಗಿ ಬೆದರಿಕೆ ಪತ್ರ

Updated: Tuesday, October 20, 2020, 09:57 [IST]

ನಟಿ ರಾಗಿಣಿ,ಸಂಜನಾರನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಇಡುವುದಾಗಿ ಬೆದರಿಕೆ ಪತ್ರ

 

Advertisement

ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯರಾದ ರಾಗಿಣಿ ಮತ್ತು ಸಂಜನಾರನ್ನು ಬಿಡುಗಡೆ ಮಾಡಬೇಕು. ಮಾಡದಿದ್ದರೆ ಬಾಂಬ್ ಹಾಕುವುದಾಗಿ ಬೆದರಿಕೆ ಪತ್ರ ಬಂದಿದೆ.

ಡಿಜೆ ಹಳ್ಳಿ ಗಲಭೆ ಆರೋಪಿಗಳನ್ನೂ ಬಿಡುಗಡೆ ಮಾಡಬೇಕಾಗಿ ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಡ್ರಗ್ಸ್ ಪ್ರಕರಣದ ಆರೋಪಿಗಳು ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳು ಅಮಾಯಕರು ಅವರನ್ನು ಬಿಡುಗಡೆ ಮಾಡಿ, ಇಲ್ಲದಿದ್ದರೆ ಬಾಂಬ್ ಇಡುವುದಾಗಿ ಸಿಸಿಎಚ್ ನ್ಯಾಯಾಲಯಕ್ಕೆ ಬೆದರಿಕೆ ಪತ್ರ ಬಂದಿದೆ.

 

Advertisement

ಈ ಬಗ್ಗೆ ಹುಣಸೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೂ ಅಲ್ಲದೇ ಕಮಿಷನರ್ ಕಚೇರಿಯನ್ನು ಕೂಡ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಪತ್ರ ಕಮಿಷನರ್ ಆಫಿಸ್ ಗೆ ಬಂದಿದೆ. ಈ ಬಗ್ಗೆ ಕಮಿಷನರ್ ಸಂದೀಪ್ ಪಾಟಿಲ್ ಸುಮ್ಮನಿದ್ದರೆ ಒಳ್ಳೆಯದು ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಪತ್ರವು ತುಮಕೂರೊನಿಂದ ಬಂದಿದೆ ಎಂದು ಪೋಲಿಸರು ತಿಳಿಸಿದ್ದಾರೆ. ತಕ್ಷಣ ಶ್ವಾನದಳ ಹಾಗೂ ಪೊಲೀಸರು ನಡೆಸಿ ಸ್ಥಳದ ತಪಾಸಣೆ ನಡೆಸಿದ್ದಾರೆ. ಪತ್ರದಲ್ಲಿ ಬಾಂಬ್ ಸಿಡಿಸಲು ಬಳಸುವ ಡೆಟೊನೇಟರ್ ಇದ್ದುದಾಗಿ ಪೊಲೀಸರು ತಿಳಿಸಿದ್ದಾರೆ.


ವಂಶಪಾರಂಪರಿತ ಜ್ಯೋತಿಷ್ಯ ಪ್ರವೀಣಾ   ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪಂಡಿತ್ ಸಮಸ್ಯೆಗಳೇನಿದ್ದರೂ ಸವಾಲಾಗಿ ಸ್ವೀಕಾರ, ದಿಟ್ಟಉತ್ತರ ನೇರ ಪರಿಹಾರ, ಪಂಚಭೂತ-ದೈವದೇವರುಗಳ ಸಾಕ್ಷಿಯಾಗಿ ಕೇವಲ ಮೂರು ದಿನಗಳಲ್ಲಿ 100%ಚಾಲೆಂಜ್ನೊಂದಿಗೆ ಶಾಶ್ವತ ಪರಿಹಾರ ನೀಡಲಾಗುವುದು ಪೋನ್ ನಂ:- 8548998564