ಇಂದ್ರಜಿತ್ ಲಂಕೇಶ್‌ಗೆ ವರ‍್ನಿಂಗ್ ಕೊಟ್ಟ ರಾಕಿಂಗ್ ಸ್ಟಾರ್: ಯಶ್ ಹೇಳಿದ್ದೇನು ಅಂತ ಒಮ್ಮೆ ನೀವೂ ಕೇಳಿ..

Updated: Thursday, July 22, 2021, 14:40 [IST]

    

ಬ್ಯಾಂಕಿನಿಂದ ಸಾಲ ಕೊಡಿಸುವ ವಿಚಾರದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ ೨೫ ಕೋಟಿ ರೂಪಾಯಿ ವಂಚನೆ ಮಾಡಲು ಯತ್ನಿಸಿದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಟ ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ದೂರು ನೀಡಿದ್ದರು. ಈ ಮೂಲಕ ಮಹಿಳೆ ಅರುಣಾ ಕುಮಾರಿ ಪರವಾಗಿ ಪರೋಕ್ಷವಾಗಿ ನಿಂತಿದ್ದು, ನಟ ದರ್ಶನ್ ಮತ್ತು ಅವರ ಮೈಸೂರಿನ ಸ್ನೇಹಿತರಾದ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೆಲಂಟಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅರುಣ ಕುಮಾರಿ ಪ್ರಕರಣ ಆಗುವ ಸ್ವಲ್ಪ ದಿನಗಳ ಮೊದಲು ಸಂದೇಶ್ ನಾಗರಾಜ್ ಅವರ ದಿ ಪ್ರಿನ್ಸ್ ಹೊಟೇಲ್ ನಲ್ಲಿ ದಲಿತ ಸಪ್ಲೈಯರ್ ಮೇಲೆ ಹೊಡೆದ ಘಟನೆಯ ಸಾಕ್ಷ್ಯಗಳು ನನ್ನ ಬಳಿ ಇವೆ, ಅದನ್ನು ಗೃಹ ಸಚಿವರಿಗೆ ನೀಡಿದ್ದೇನೆ, ಮರುದಿನ ಆತನ ಪತ್ನಿ ಪೊರಕೆ ಹಿಡಿದುಕೊಂಡು ಹೊಡೆಯಲು ಬಂದಿರುತ್ತಾರೆ, ಆಗ ದರ್ಶನ್ ಮತ್ತು ಗ್ಯಾಂಗ್ ಸೆಟ್ಲ್ ಮೆಂಟ್ ಮಾಡಿಸುತ್ತಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. 

ಇಲ್ಲಿಂದ ಶುರುವಾದ ವಿವಾದ ನಿತ್ಯ ಒಂದೊಂದು ತಿರುವು ಪಡೆದುಕೊಳ್ತಿದೆ. ಇಂದ್ರಜಿತ್ ಲಂಕೇಶ್ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ದರ್ಶನ್ ಅವರು ಆಡಿದ ಮಾತು ವಿಚಾರದ ದಿಕ್ಕನ್ನೇ ಬದಲಿಸಿತ್ತು. ಕಳೆದ ವಾರ ಮಾಧ್ಯಮಗಳ ಮುಂದೆ ದರ್ಶನ್  ಮಾತನಾಡುವಾಗ,  ಪ್ರೇಮ್ ಏನು ಪುಡಂಗಾ, ಎರಡು ಕೊಂಬೈತಾ? ಎಂದೆಲ್ಲಾ ಮಾತನಾಡಿದ್ದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ನಿರ್ದೇಶಕ ಜೋಗಿ ಪ್ರೇಮ್ ಕೂಡಾ ದರ್ಶನ್ ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ರಕ್ಷಿತಾ ಪ್ರೇಮ್ ಕೂಡ ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ.    

ಇದರ ಬೆನ್ನಲ್ಲೇ, ದರ್ಶನ್ ಅವರ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಿ ದರ್ಶನ್ ಅವರನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡುವಂತೆ ಒತ್ತಾಯಿಸಲಾಗಿದೆ. ಇದರಿಂದ ದರ್ಶನ್ ಅಭಿಮಾನಿಗಳು ಕೆಂಡಾಮAಡಲವಾಗಿದ್ದು, ಯಾರೇ ಬಂದರು ದರ್ಶನ್ ಜೊತೆ ನಾವಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಈ ವಿಚಾರ ತಿಳಿದ ದರ್ಶನ್ ಪ್ರತಿಕ್ರಿಯೆ ನೀಡಿ, ನನ್ನನ್ನು ಚಿತ್ರರಂಗದ ಚಟುವಟಿಕೆಗಳಿಂದ ಐದು ರ‍್ಷಗಳ ಕಾಲ ಬ್ಯಾನ್ ಮಾಡುವಂತಹ ಮಹಾ ತಪ್ಪು ನಾನೇನು ಮಾಡಿಲ್ಲ. ಯಾರದೋ ತಪ್ಪಿಗೆ ನನ್ನನ್ನು ಗುರಿ ಮಾಡುವುದು ಸರಿಯಲ್ಲ. ನನ್ನ ಬಗ್ಗೆ ಅಭಿಮಾನಿಗಳಿಗೆ ಗೊತ್ತಿದೆ. ನನ್ನ ಜೊತೆ ಅಭಿಮಾನಿಗಳು ಇದ್ದಾರೆ ಎಂದು ಹೇಳಿದ್ದಾರೆ. 

ಇದೀಗ ರಾಕಿಂಗ್ ಸ್ಟಾರ್ ಯಶ್ ಮಾತನಾಡಿರುವ ವೀಡಿಯೋ ಒಂದು ಸಿಕ್ಕಾಬಟ್ಟೆ ವೈರಲ್ ಆಗಿದೆ. ಇದಕ್ಕೆ ಕಾರಣ ಇಂದ್ರಜಿತ್ ಲಂಖೇಶ್, ದರ್ಶನ್ ಹಾಗೂ ಪವಿತ್ರಾ ಗೌಡ ಹೋಟೆಲ್ ಒಂದರ ರೂಮಿನಲ್ಲಿ ತಂಗಿದ್ದರು ಎಂದು ಆರೋಪಿಸಿದ್ದರು. ಅಲ್ಲದೇ, ದರ್ಶನ್ ಒಬ್ಬ ಗಾಂಡುಗಿರಿ ಎಂದು ಹೇಳಿದ್ದರು. ಈ ವಿಚಾರ ಕೇಳಿದ ಯಶ್, ಇಂದ್ರಜಿತ್ ಲಂಕೇಶ್‌ಗೆ ವರ‍್ನಿಂಗ್ ಕೊಟ್ಟಿದ್ದಾರೆ. ನಿಮ್ಮ ಕೆಲಸ ನೋಡಿಕೊಂಡು, ನಿಮ್ಮ ಪಾಡಿಗೆ ನೀವಿರಿ ಎಂದು ಹೇಳಿದ್ದಾರೆ. ದರ್ಶನ್ ಅವರ ಬಗ್ಗೆ ಯೋಗ್ಯತೆ ಅವರಿಗಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ನೀವು ಸರಿ ಇದ್ದೀರಾ ಎಂಬುದನ್ನು ನೋಡಿಕೊಳ್ಳಿ. ಇಲ್ಲ ಸಲ್ಲದ ಆರೋಪ ಮಾಡುವುದ್ನು ಬಿಡಿ. ಎಲ್ಲವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.