ಕಮಲಿ ಧಾರಾವಾಹಿಯ ಅನಿಕಾ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

By Infoflick Correspondent

Updated:Friday, April 15, 2022, 10:35[IST]

ಕಮಲಿ ಧಾರಾವಾಹಿಯ ಅನಿಕಾ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಜೀಕನ್ನಡ ವಾಹಿನಿಗಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿ ಶುರುವಾಗಿ ಮೂರರಿಂದ ನಾಲ್ಕು ವರ್ಷ ಆಗಿದೆ. ಕಮಲಿ ಧಾರಾವಾಹಿಯಲ್ಲಿ ನೆಗಟಿವ್ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿರುವುದು ಅನಿಕಾ ಪಾತ್ರ. ಇವರ ಏಯ್ ಕೆಸರಿನ ಕಮಲಿ ಎಂದು ಇವರು ಹೇಳುವ ಡೈಲಾಗ್ ತುಂಬಾನೆ ಫೇಮಸ್.  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕಮಲಿ'ಯ ಬ್ಯೂಟಿಫುಲ್ ವಿಲನ್ ಅನಿಕಾ ಜೀಕುಟುಂಬ ಅವಾರ್ಡ್ಸ್ ನಲ್ಲಿ ಬೆಸ್ಟ್ ವಿಲನ್ ಅವಾರ್ಡ್ ಪಡೆದುಕೊಂಡಿದ್ದಾರೆ.  

ಇವರ ನಿಜವಾದ ಹೆಸರು ರಚನಾ.ರಚನಾ ಸ್ಮಿತ್ ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 9 ವರ್ಷಗಳು ಕಳೆದಿದೆ.10ನೇ ತರಗತಿ ಪಾಸ್ ಆದ ಬಳಿಕ ಎರಡು ವರ್ಷ ಮಾಡೆಲಿಂಗ್ ಮಾಡಿದ ರಚನಾ, ರಚನಾ ಅವರು ಜೀಕನ್ನಡ ವಾಹಿನಿಯ ಲೈಫ್ ಸೂಪರ್ ಗುರು ರಿಯಾಲಿಟಿ ಶೋನಲ್ಲಿ ಸಹ ಕಾಣಿಸಿಕೊಂಡಿದ್ದರು. ಹಿಂದಿಯ ಜೂಮ್ ವಾಹಿನಿ ಆಯೋಜಿಸಿದ್ದ ಫ್ಯಾಶನ್ ಸ್ಪರ್ಧೆಗೆ ಬೆಂಗಳೂರಿನ ಸೆಲೆಕ್ಟ್ ಆದ ಇಬ್ಬರು ಹುಡುಗಿಯರಲ್ಲಿ ರಚನಾ ಕೂಡ ಒಬ್ಬರು.  

ಸಿನಿಮಾಗಳಲ್ಲಿ ನಟಿಸಬೇಕೆಂದು 'ವರದನಾಯಕ' ಸಿನಿಮಾಕ್ಕೆ ಆಡಿಶನ್ ನೀಡಿ ಆಯ್ಕೆ ಆದರು. ಅದೇ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ 'ವಿಕ್ಟರಿ' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಈಗ ಮುರುಗ ಆಲಿಯಾಸ್ ಮುನಿಕೃಷ್ಣ ಅಭಿನಯದ 'ಕೊಡೆಮುರುಗ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಪೋಸ್ಟರ್ ಅನ್ನು ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿದ್ದರು‌.