Ramya : ಈ ವಿಡಿಯೋ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಮೋಹಕ ತಾರೆ ರಮ್ಯಾ: ಚಿತ್ರರಂಗಕ್ಕೆ ಮರಳಿ ಬರುವ ಸೂಚನೆಯಾ ?

By Infoflick Correspondent

Updated:Monday, June 13, 2022, 14:43[IST]

Ramya :  ಈ ವಿಡಿಯೋ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಮೋಹಕ ತಾರೆ ರಮ್ಯಾ: ಚಿತ್ರರಂಗಕ್ಕೆ ಮರಳಿ ಬರುವ ಸೂಚನೆಯಾ ?

ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಇರುವ ರಮ್ಯಾ, ಇತ್ತಿಚೆಗೆ ಬಹಳ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈಗ ರಮ್ಯಾ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ಅವರು ಯಾವುದಾದರೂ ಚಿತ್ರವನ್ನು ಒಪ್ಪಿಕೊಂಡಿದ್ದಾರಾ ಎಂಬ ಅನುಮಾನ ಮೂಡಿದೆ. ರಮ್ಯಾ ನಟನೆಯಿಂದ ದೂರ ಉಳಿದು ಹಲವು ವರ್ಷಗಳು ಕಳೆದರೂ ಅವರ ಅಭಿಮಾನಿ ಬಳಗ ಕಿರಿದಾಗಿಲ್ಲ. ಅನೇಕರು ಈಗಲೂ ಅವರನ್ನು ಆರಾಧಿಸುತ್ತಾರೆ. ರಮ್ಯಾ ಮಾಡಿದ ಮೋಡಿ ಅಷ್ಟು ದೊಡ್ಡದು. ಅವರ ವಯಸ್ಸು 39. ಈಗಲೂ ಯುವತಿಯರನ್ನೂ ನಾಚಿಸುವಂತಿದೆ ಅವರ ಅಂದ. 

ಕಾರಿನಲ್ಲಿ ಮಾಡಿರುವ ಒಂದು ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ರಮ್ಯಾ ಮತ್ತು ಅವರ ಗೆಳತಿ 1 ಡೈಲಾಗ್​ ಅನ್ನು 1 ಟೇಕ್ 2 ಟೇಕ್ ಎಂದು ಟೇಕ್​ ತೆಗೆದುಕೊಂಡು ಹೇಳಿದ್ದು, ಆ ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ರಮ್ಯಾ ಏನಾದರು ಸುಳಿವು ಕೊಡುತ್ತಿದ್ದಾರಾ ಎಂಬ ಅನುಮಾನ ಹುಟ್ಟಿಸಿದೆ.  

ಬಹಳಷ್ಟು ದಿನಗಳಿಂದ ಅಭಿಮಾನಿಗಳು ರಮ್ಯಾ ಅವರಿಗೆ ಕಮ್​ ಬ್ಯಾಕ್​ ಮಾಡುವಂತೆ ಒತ್ತಾಯಿಸುತ್ತಿದ್ದರು. ನಾನು ಬೇಗ ಸಿನಿಮಾಗೆ ವಾಪಸ್ ಬರ್ತಿನಿ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಆದರೆ ಯಾವ ಚಿತ್ರ? ಹೀರೋ ಯಾರು? ಯಾವಾಗ ಶೂಟಿಂಗ್ ಸೇರಿದಂತೆ ಯಾವುದೇ ಮಾಹಿತಿಗಳನ್ನು ರಮ್ಯಾ ಬಿಟ್ಟುಕೊಟ್ಟಿಲ್ಲ.