ಕನ್ನಡ ತೆಲುಗು ಬಿಟ್ಟು ತಮಿಳು ಹುಡಗನ್ನ ಮದುವೆ ಆಗಲು ಹೊರಟ್ರಾ ರಶ್ಮಿಕಾ..? ಹೇಳಿದ್ದಿಷ್ಟು ನೋಡಿ

By Infoflick Correspondent

Updated:Tuesday, April 5, 2022, 15:39[IST]

ಕನ್ನಡ ತೆಲುಗು ಬಿಟ್ಟು ತಮಿಳು ಹುಡಗನ್ನ ಮದುವೆ ಆಗಲು ಹೊರಟ್ರಾ ರಶ್ಮಿಕಾ..? ಹೇಳಿದ್ದಿಷ್ಟು ನೋಡಿ

  

ಕನ್ನಡದ ಕ್ರಶ್ ಆಗಿ ಆರಂಭದಲ್ಲಿ ಹೊರಹೊಮ್ಮಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಲ್ಲಿಯೇ ಮೊದಲು ತಮ್ಮನ್ನು ತಾವು ಗುರುತಿಸಿಕೊಂಡಿದ್ದು ನಮ್ಮ ಹೆಮ್ಮೆಯ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ನಟಿ ರಶ್ಮಿಕಾ ಮಂದಣ್ಣ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಕನ್ನಡ ಜನತೆಯ ಮನಸ್ಸು ಗೆಲ್ಲುವಲ್ಲಿ ಮೊದಲ ಚಿತ್ರದಲ್ಲಿಯೇ ಗೆದ್ದು ಬೀಗಿದರು. ಆದ್ರೆ ನಂತರ ಆಗಿದ್ದು ದೊಡ್ಡ ದೊಡ್ಡ ಎಡವಟ್ಟು ಎಂದು ಹೇಳಬಹುದು. ರಶ್ಮಿಕಾ ಅವರು ಬೇರೆ ಭಾಷೆಯ ಸಿನಿಮಾ ಮಾಡಲಿ ತಪ್ಪೇನಿಲ್ಲ. ಆದ್ರೆ ಕನ್ನಡದ ಭಾಷೆ ಹಾಗೂ ಕನ್ನಡ ಚಿತ್ರರಂಗದ ಕುರಿತು ಆಡುತ್ತಿದ್ದ ಮಾತು ತುಂಬಾ ಬೇಡವಾದಂತಿದ್ದವು. ಏನೇ ಮಾಡಿದರು ಅಂದಿನಿಂದ ಇಂದಿಗೂ ದೊಡ್ಡದಾಗಿ ಸದ್ದು ಮಾಡುತ್ತಿದ್ದಾರೆ.

ಕೆಲವೊಂದಿಷ್ಟು ವಿಚಾರಗಳಿಗೆ ಸುದ್ದಿಯಾಗುವ ನಟಿ ರಶ್ಮಿಕ ಮಂದಣ್ಣ ಕನ್ನಡ ಮತ್ತು ಕನ್ನಡ ಸಿನಿಮಾಗಳ ವಿಚಾರಕ್ಕೆನೆ ಹೆಚ್ಚು ಟ್ರೋಲ್ ಆಗಿದ್ದಾರೆ. ಕನ್ನಡ ಭಾಷೆ ಬಳಕೆ ಹೆಚ್ಚಾಗಿ ಮಾಡದ ಕಾರಣಕ್ಕೆ ರಶ್ಮಿಕ ಮಂದಣ್ಣ ಅವರನ್ನು ನೆಟ್ಟಿಗರು ಆಗಾಗ ಟ್ರೋಲ್ ಮಾಡುತ್ತಲೆ ಇರುತ್ತಾರೆ. ಜೊತೆಗೆ ನಟಿಯ ಮದುವೆ ವಿಚಾರ ಕೂಡ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಸದ್ದು ಮಾಡಿದೆ. ಆರಂಭದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ನಾಯಕ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಎಂಗೇಜ್ಮೆಂಟ್ ಆಗಿದ್ದು ಎಲ್ಲರಿಗೂ ಗೊತ್ತು. ನಂತರ ಇವರ ಮದುವೆ ಮುರಿದು ಬಿದ್ದಿದ್ದು, ಬಳಿಕ ತೆಲುಗು ನಟ ವಿಜಯ್ ದೇವರಕೊಂಡ ಅವರ ಜೊತೆಯೂ ಕೂಡ ಪ್ರೀತಿ ಮಾತು ಗುಸುಗುಸು ಕೇಳಿ ಬಂದಿತ್ತು. ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಹೊಸ ವರ್ಷದ ಆಚರಣೆಗೆಂದು ಆಗಾಗ ಗೋವಾದಲ್ಲಿ ಕಾಣಿಸಿಕೊಂಡಿದ್ದು, ಹೀಗೆ ಸಾಕಷ್ಟು ಬಾರಿ ನಟಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದಾರೆ.

ರಶ್ಮಿಕ ಅವರು ನಮ್ಮ ಕನ್ನಡ ಬಿಟ್ಟು ತೆಲುಗು ಹಿಂದಿ ಚಿತ್ರದಲ್ಲಿ ಇದೀಗ ತುಂಬಾ ಬಿಜಿಯಾಗಿದ್ದಾರೆ ಎನ್ನಬಹುದು. ಈಗ ಸಂದರ್ಶನದಲ್ಲಿ ರಶ್ಮಿಕ ಮಂದಣ್ಣ ನಾನು ತಮಿಳುನಾಡಿನ ಸಂಸ್ಕೃತಿಯನ್ನ ಇಷ್ಟ ಪಡುತ್ತೇನೆ. ಅಲ್ಲಿಯ ಬಾರಿ ಊಟ, ಆಚಾರ-ವಿಚಾರಗಳನ್ನು ಇಷ್ಟಪಡುತ್ತೇನೆ, ಮದುವೆಯಾದರೆ ತಮಿಳುನಾಡಿನ ಹುಡುಗನ ಜೊತೆಗೆ ಆಗಬೇಕು ಎಂದಿದ್ದಾರೆ. ಮದುವೆ ಆದ್ರೆ ಮಾತ್ರ ನಾನು ತಮಿಳುನಾಡು ಹುಡುಗನ ಜೊತೆಗೆ ಅಗುತ್ತೆನೆ. ಆಗ ಮಾತ್ರ ಅಲ್ಲಿಯ ಸಂಸ್ಕೃತಿಯನ್ನು ನಾನು ಜೀವನದುದ್ದಕ್ಕೂ ಅವನ್ನೆಲ್ಲ ಅನುಭವಿಸಲು ಸಾಧ್ಯ ಎನ್ನುವ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿದ ಕನ್ನಡಿಗರು ಶಾಕ್ ಆಗಿದ್ದು, ಇನ್ನೊಂದು ಕಡೆ ನೆಟ್ಟಿಗರು ಕೋಪಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ..