ಹನಿಮೂನ್ ಕ್ಯಾನ್ಸಲ್ ಮಾಡಿ ರಾಜ ರಾಣಿಗೆ ಬಂದ ಹೊಸ ಜೋಡಿ..! ಕ್ಯೂಟ್ ವಿಡೀಯೋ ನೋಡಿ

By Infoflick Correspondent

Updated:Tuesday, June 14, 2022, 07:54[IST]

ಹನಿಮೂನ್ ಕ್ಯಾನ್ಸಲ್ ಮಾಡಿ ರಾಜ ರಾಣಿಗೆ ಬಂದ ಹೊಸ ಜೋಡಿ..! ಕ್ಯೂಟ್ ವಿಡೀಯೋ ನೋಡಿ

ಕಳೆದ ಎರಡು ವರ್ಷದಿಂದ ಸಾಕಷ್ಟು ಕಿರುತೆರೆಯ ಮತ್ತು ಬೆಳ್ಳಿತೆರೆಯ ಕಲಾವಿದರು ಮದುವೆಯಾಗಿದ್ದಾರೆ. ಕೆಲವರು ಸರಳವಾಗಿ ಮದುವೆಯಾಗಿದ್ದು, ಇನ್ನು ಕೆಲವರು ತುಂಬಾ ಆಡಂಬರವಾಗಿ ಮದುವೆಯಾಗಿರುವ ವಿಷಯಗಳು ನಮ್ಮ ಸುತ್ತಮುತ್ತ ನಡೆದಿವೆ. ಚಿತ್ರರಂಗದಲ್ಲಿ ಮದುವೆ ಎಂದ ತಕ್ಷಣ ಅವರದೇ ಆದ ಸಂಭ್ರಮ-ಸಡಗರವೂ ಹೆಚ್ಚು ಮುಗಿಲು ಮುಟ್ಟಿರುತ್ತದೆ. ಎರಡು ಮನೆ ಕಡೆಯವರು ಅವರ ಪ್ರೀತಿಗೆ ಒಪ್ಪಿಗೆ ನೀಡಿ, ಪರಸ್ಪರ ಪ್ರೀತಿ ಮಾಡಿ ಮದುವೆ ಆಗುವ ಜೋಡಿಗಳಿಗಂತೂ ಎಷ್ಟರಮಟ್ಟಿಗೆ ಸಂತಸ ಆಗಿರುತ್ತದೆ ಎಂದು ನಾವು ನಿಮಗೆ ಹೇಳಬೇಕಿಲ್ಲ. ಪ್ರೀತಿ ವಿಷಯದಲ್ಲಿ ಎಲ್ಲರೂ ಸಹ ಅಷ್ಟೇ, ತಾವು ಇಷ್ಟಪಟ್ಟ ಹುಡುಗಿಯ ಜೊತೆ ಮದುವೆಯಾಗುವಾಗ ಆಗುವ ಸಂತೋಷ ಹೆಚ್ಚಾಗಿರುತ್ತದೆ.

ಆ ಗಳಿಗೆಯನ್ನು ಮತ್ತೆ ನಾವು ಎಂದು ಮರೆಯುವುದಕ್ಕೆ ಕೂಡ ಆಗುವುದೆ ಇಲ್ಲ. ಹೌದು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರು ಅವರದೇ ಆದ ಸಕತ್ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ. ಹಾಗೆ ಅಂತಹವರ ಸಾಲಿಗೆ ಸೇರುವರಲ್ಲಿ ನಟಿ ಐಶ್ವರ್ಯ ಹಾಗೂ ವಿನಯ್ ಕೂಡ ಇಬ್ಬರು ಎಂದು ಹೇಳಬಹುದು. ನಟಿ ಐಶ್ವರ್ಯ ಅವರು ಕೆಲವೊಂದಿಷ್ಟು ಸೀರಿಯಲ್ ಗಳಲ್ಲಿ ಅಭಿನಯ ಮಾಡಿದ್ದಾರೆ. ಹಾಗೆ ನಟ ವಿನಯ್ ಕೂಡ ಕೆಲ ಸೀರಿಯಲ್ಗಳಲ್ಲಿ ಅಭಿನಯ ಮಾಡಿ ಯಶಸ್ವಿಯಾಗಿದ್ದಾರೆ. ಉತ್ತರ ಕರ್ನಾಟಕದ ಈ ಮುದ್ದಾದ ಜೋಡಿ ವಿವಾಹವಾಗಿ ಕೇವಲ ಹತ್ತು ದಿನಗಳು ಆಗಿತ್ತು. ನಂತರ ಹನಿಮೂನಿಗೆಂದು ಮಾಲ್ಡಿವ್ಸ್ ಗೆ ತೆರಳಲು ಸಜ್ಜಾಗಿತ್ತು, ಆದರೆ ರಾಜ ರಾಣಿ ಸೀಸನ್-2 ಕಾರ್ಯಕ್ರಮಕ್ಕೆ ಅಲ್ಲಿಗೆ ಟಿಕೆಟ್ ಕ್ಯಾನ್ಸಲ್ ಮಾಡಿ ಈ ರಾಜ ರಾಣಿ 2 ಶೋಗೆ ಬಂದಿದೆ. 

ಅಸಲಿಗೆ ಇವರ ಮದುವೆಯ ಕ್ಷಣಗಳು ಹೇಗಿದ್ದವು.? ಈ ವೇದಿಕೆ ಮೇಲೆ ಮತ್ತೊಮ್ಮೆ ಅಕ್ಷತೆಕಾಳು ಹಾಕಿಸಿಕೊಂಡ ಈ ಜೋಡಿ ಮನಬಿಚ್ಚಿ ಮಾತನಾಡಿದ್ದೇನು ಎಂಬುದಾಗಿ ತಿಳಿಯಲು ಇಲ್ಲಿದೆ ನೋಡಿ ವಿಡಿಯೋ. ವಿಡಿಯೋವನ್ನು ಪೂರ್ತಿ ನೋಡಿ, ಇಷ್ಟವಾದಲ್ಲಿ ಶೇರ್ ಮಾಡಿ. ಹಾಗೆ ನವ ಜೋಡಿಗೆ ಶುಭಕೋರಿ ಧನ್ಯವಾದಗಳು... ವಿಡಿಯೋ  ನೋಡಲು watch on facebook  ಮೇಲೆ ಕ್ಲಿಕ್ ಮಾಡಿ 

<