Jacqueline Fernandez : ರಾ ರಾ ರಕ್ಕಮ್ಮ ಜಾಕ್ವೆಲಿನ್ ಕೊರಳಿಗೆ 200 ಕೋಟಿ ಪ್ರಕರಣದ ಉರುಳು..!!

By Infoflick Correspondent

Updated:Wednesday, August 17, 2022, 14:09[IST]

Jacqueline Fernandez : ರಾ ರಾ ರಕ್ಕಮ್ಮ ಜಾಕ್ವೆಲಿನ್ ಕೊರಳಿಗೆ 200 ಕೋಟಿ ಪ್ರಕರಣದ ಉರುಳು..!!


ರಾಜಕಾರಣಿಯೊಬ್ಬರ ಬಂಧು, ಅಧಿಕಾರಿ ಎಂದೆಲ್ಲಾ ಹೇಳಿಕೊಂಡು ಕೋಟಿ ಕೋಟಿ ವಂಚನೆ ಮಾಡಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್  ಈಗ ಜೈಲು ಪಾಲಾಗಿರೋದು ಗೊತ್ತಿರುವ ವಿಷಯವೇ. ಆತನ ಹೆಸರಿನ ಜೊತೆಗೆ ಶ್ರೀಲಂಕಾ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಇದರ ಚಾರ್ಜ್ ಶೀಟ್ ಅನ್ನು ಸಲ್ಲಿಸಲಾಗಿದ್ದು, ಇದರಲ್ಲಿ ಜಾಕ್ವೆಲಿನ್ ಹೆಸರು ಕೂಡ ಉಲ್ಲೇಖವಾಗಿದೆ. ಪ್ರಕರಣ ಸಂಬಂಧ ವಿಚಾರಣೆಯನ್ನು ಎದುರಿಸಿದ್ದ ಜಾಕ್ವೆಲಿನ್ ಕೇಳಿದ್ದಕ್ಕೆಲ್ಲಾ ನನಗೆ ಗೊತ್ತಿಲ್ಲ ಎಂದು ಮಾತ್ರ ಉತ್ತರಿಸಿದ್ದರು. 

ಸುಕೇಶ್ ಹಾಗೂ ಜಾಕ್ವೆಲಿನ್ ಇಬ್ಬರು ಡೇಟಿಂಗ್ ಮಾಡಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಈ ಸಂಬಂಧ ವಿಚಾರಣೆ ವೇಳೆ ಸುಕೇಶ್ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದ. ಆಕೆ ಜೊತೆಗೆ ಡೇಟಿಂಗ್ ಮಾಡಿದ್ದು, ಆಕೆ ಕೇಳಿದ್ದೆಲ್ಲವನ್ನು ಕೊಡಿಸಿದ್ದು, ಪ್ರತಿಯೊಂದನ್ನು ಹೇಳಿದ್ದ. ಆಕೆಗಾಗಿ ನಾನು ಐನೂರು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇನೆ. ಆಕೆಗೆ ಕಿವಿಯೋಲೆ, ಬ್ಯಾಗ್, ನೆಕ್ಲೇಸ್, 1.80 ಲಕ್ಷ ಹಣ ಮತ್ತು ಬಿಎಂಡಬ್ಲ್ಯೂ ಎಕ್ಸ್5  ಹಾಗೂ ಸಹೋದರಿಗೆ 1.50 ಲಕ್ಷ ಸಾಲ ಎಲ್ಲವನ್ನೂ ಕೊಡಿಸಿದ್ದೇನೆ. ಆಕೆ ನನಗೆ ತುಂಬಾ ಚೆನ್ನಾಗಿ ಗೊತ್ತು ಎಂದೆಲ್ಲಾ ಹೇಳಿದ್ದ. ಇನ್ನು ಸುಕೇಶ್ ಹೇಳಿಕೆ ಕೇಳಿದ ಅಧಿಕಾರಿಗಳೇ ದಂಗಾಗಿ ಹೋಗಿದ್ದರು.

ಇನ್ನು ಜಾಕ್ವೆಲಿನ್ ತನಗೆ ಬೇಕಾದ ವಸ್ತುಗಳಾಗಲೀ, ಅಥವಾ ಏನೇ ಆಗಲಿ, ಅದರ ಲಿಸ್ಟ್ ಮಾಡಿ ಕಳಿಸಿದ್ದರೆ ಸಾಕಿತ್ತಂತೆ. ಸುಕೇಶ್ ಅದೆಲ್ಲವನ್ನೂ ಖರೀದಿಸಿ ಜಾಕ್ವೆಲಿನ್ ಮನೆ ಬಾಗಿಲಲ್ಲಿ ತಂದು ಇರಿಸುತ್ತಿದ್ದನಂತೆ. ಆದರೆ, ವಿಚಚಾರಣೆ ವೇಳೆ ಜಾಕ್ವೆಲಿನ್ ಇದೆಲ್ಲಾ ಸುಳ್ಳು ಆತ ನನಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಪರಿಚಯವಾಗಿದ್ದ. ಸಿನಿಮಾ ನಿರ್ಮಿಸೋದಾಗಿ ಹೇಳಿ ನನಗೆ ಆಫರ್ ಕೊಟ್ಟಿದ್ದ. ಅದು ಬಿಟ್ಟರೆ ಸಾಲದ ರೂಪದಲ್ಲಿ ನನ್ನ ಮನೆಯವರಿಗೆ ಸಾಲ ಕೊಟ್ಟಿದ್ದಾನೆ ಎಂದು ಜಾಕ್ವೆಲಿನ್ ಹೇಳಿದ್ದರು. ಈ ವೇಳೆ ಸುಕೇಶ್ ಚಂದ್ರಶೇಖರ್  ಅವರ ಮೇಲಿನ  200 ಕೋಟಿ ರೂಪಾಯಿ ಸುಲಿಗೆ ಪ್ರಕರಣ ಸಂಬಂಧ ಇಡಿ ಜಾಕ್ವೆಲಿನ್‌ ಅವರ ಆಸ್ತಿಯನ್ನು ಕೂಡ ಜಪ್ತಿ ಮಾಡಿದ್ದರು