ಚಪ್ಪಲಿ ಬಿಚ್ಚಮ್ಮ ಎಂದು ವೇದಿಕೆ ಮೇಲೆ ಅದಿತಿಗೆ ಕ್ವಾಟ್ಲೆ ಕೊಟ್ಟ ಜಗ್ಗೇಶ್..! ಆಗಿದ್ದೇನು ನೋಡಿ

By Infoflick Correspondent

Updated:Friday, April 22, 2022, 21:29[IST]

ಚಪ್ಪಲಿ ಬಿಚ್ಚಮ್ಮ ಎಂದು ವೇದಿಕೆ ಮೇಲೆ ಅದಿತಿಗೆ ಕ್ವಾಟ್ಲೆ ಕೊಟ್ಟ ಜಗ್ಗೇಶ್..! ಆಗಿದ್ದೇನು ನೋಡಿ

ಕನ್ನಡದ ಬಹು ನಿರೀಕ್ಷಿತ ಚಿತ್ರ ನಟ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾದ ಒಂದು ಭರ್ಜರಿ ಹಾಡು ಈ ಮುಂಚೆ ಬಿಡುಗಡೆಯಾಗಿತ್ತು. ಬಾಗಿಲು ತೆರಿ ಮೇರಿ ಜಾನ್ ಎನ್ನುವ ಹಾಡು 20 ಮಿಲಿಯನ್ ವೀಕ್ಷಣೆ ಪಡೆದಿದೆ. ಹೆಚ್ಚು ನಿರೀಕ್ಷೆ ಇಟ್ಟಿದ್ದ ಈ ಸಿನಿಮಾ ಮೇಲೆ ನಿನ್ನೆ ಭರ್ಜರಿಯಾಗಿ ಸಿನಿಮಾ ಟ್ರೈಲರ್ ಕೂಡ ಲಾಂಚ್ ಮಾಡಲಾಗಿದೆ. ಹೌದು ತೋತಾಪುರಿ ಸಿನಿಮಾ ಟೈಲರ್ ಇದೀಗ ಯೂಟ್ಯೂಬ್ನಲ್ಲಿ ಸಕ್ಕತ್ ಧೂಳ್ ಎಬ್ಬಿಸುತ್ತಿದ್ದು ಈಗಾಗಲೇ ಎಂಟು ಲಕ್ಷಕ್ಕಿಂತ ಅಧಿಕ ಮಂದಿ ಟ್ರೈಲರ್ ಅನ್ನು ವೀಕ್ಷಿಸಿ ಅವರ ಅಭಿಪ್ರಾಯ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಟ್ರೈಲರ್ ಸಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಹಾಸ್ಯಬರಿತವಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಹೌದು ಟ್ರೈಲರ್ ಲಾಂಚ್ ಕಾರ್ಯಕ್ರಮ ಆಯೋಜಿಸಿದ್ದ ತೋತಾಪುರಿ ಚಿತ್ರತಂಡ ಕನ್ನಡದ ಕಿಚ್ಚ ಸುದೀಪ್ ಅವರನ್ನು ಕಾರ್ಯಕ್ರಮಕ್ಕೆ ಕರೆತಂದಿದ್ದರು. ತೋತಾಪುರಿ ಸಿನಿಮಾದಲ್ಲಿ ನಟ ಜಗ್ಗೇಶ್, ಧನಂಜಯ್, ಅದಿತಿ ಪ್ರಭುದೇವ್ ಇನ್ನು ಸಾಕಷ್ಟು ಹಿರಿಯ ಕಲಾವಿದರು ಸಿನಿಮಾದಲ್ಲಿ ನಟಿಸಿದವರು ಬಂದಿದ್ದರು. ಟ್ರೈಲರ್ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು ವೇದಿಕೆ ಮೇಲೆ ಸುದೀಪ್, ಜಗ್ಗಣ್ಣ ಹಾಗೂ ಧನಂಜಯ್ ಈ ಸಿನಿಮಾ ಬಗ್ಗೆ ಮಾತನಾಡಿದರು. ವೇದಿಕೆ ಮೇಲೆ ಸುದೀಪ್ ಹಾಗು ಧನಂಜಯ್ ಒಂದುಕಡೆ ಸಿನಿಮಾ ವಿಚಾರವಾಗಿ ಮಾತನಾಡುತ್ತಿದ್ದಾರೆ. ಇನ್ನೊಂದು ಕಡೆ ಜಗ್ಗೇಶ್ ಅವರು ಅದಿತಿ ಪ್ರಭುದೇವ್ ರನ್ನ ನೋಡಿ ಬೆರಗಾಗಿದ್ದರು.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಕಾರಣ ಅಧಿತಿ ಪ್ರಭುದೇವ್ ತುಂಬಾ ದೊಡ್ಡ ಹಿಲ್ಸ್ ಹಾಕಿ ವೇದಿಕೆ ಮೇಲೆ ಏರಿದ್ದರು. ಅದನ್ನೇ ಗುರುತಿಸಿದ ಜಗ್ಗಣ್ಣ ಚಪ್ಪಲಿ ಬಿಚ್ಚಮ್ಮ ಎಷ್ಟು ದೊಡ್ಡ ಹಿಲ್ಸ್ ಹಾಕಿ ಬಂದಿದ್ದೀಯಾ ಎಂದು ಕ್ವಾಟ್ಲೆ ತೆಗೆದಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ನೀವು ಒಂದು ಬಾರಿ ಈ ವಿಡಿಯೋ ನೋಡಿ. ಹಾಗೆ ಜಗ್ಗಣ್ಣ ಅವರ ಕ್ವಾಟ್ಲೆ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದಗಳು...( video credit : kanlish media )