ಅಪ್ಪು ಮೇಲಿನ ಅಭಿಮಾನಕ್ಕೆ ಹುಟ್ದಬ್ಬದ ದಿವಸಕ್ಕೆ ಮಹತ್ತರ ನಿರ್ಧಾರ ಕೈಗೊಂಡ ಜಗ್ಗೇಶ್..!

By Infoflick Correspondent

Updated:Friday, March 11, 2022, 11:33[IST]

ಅಪ್ಪು ಮೇಲಿನ ಅಭಿಮಾನಕ್ಕೆ ಹುಟ್ದಬ್ಬದ ದಿವಸಕ್ಕೆ ಮಹತ್ತರ ನಿರ್ಧಾರ ಕೈಗೊಂಡ ಜಗ್ಗೇಶ್..!

ನವರಸ ನಾಯಕ ಜಗ್ಗೇಶ್  (Jaggesh)  ಅವರು ರಾಯರ ಭಕ್ತರು. ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಗಲಿ ನಾಲ್ಕು ತಿಂಗಳು ಕಳೆದಿದೆ. ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪು ಮಾತ್ರ ನಿಂತಿಲ್ಲ. ಪ್ರತಿದಿನ ಒಂದಲ್ಲ ಒಂದು ರೂಪದಲ್ಲಿ ಪುನೀತ್ ಅವರ ವಿಡಿಯೋಗಳು ಫೋಟೋಗಳು ಹೆಚ್ಚು ಕಾಣುತ್ತಿವೆ. ಅವರ ಸಾಮಾಜಿಕ ಕಾರ್ಯ ನೋಡಿದರೆ ಆ ದೇವರು ನಮ್ಮ ನಟ ಪುನೀತ್ ಅವರ ವಿಚಾರದಲ್ಲಿ ಎಂತಹ ತಪ್ಪು ಮಾಡಿಬಿಟ್ಟ ಎಂದೆನಿಸುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಜಗ್ಗೇಶ್ ಅವರ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಇಬ್ಬರೂ ಸಾಕಷ್ಟು ಬಾರಿ ಹೆಚ್ಚು ಮಂತ್ರಾಲಯಕ್ಕೆ ಜೊತೆಗೆನೆ ಹೋಗಿ ಬಂದಿದ್ದಾರೆ. ಅದರ ನೆನಪುಗಳು ಈಗಲೂ ಕೂಡ ಜಗ್ಗೇಶ್ ಅವರಿಗೂ ಕಾಡುತ್ತಿವೆ ಎನ್ನಲಾಗಿದೆ.

ಪುನೀತ್ ರಾಜ್ ಕುಮಾರ್ (Puneeth Rajkumar)  ಅಭಿಮಾನಿಗಳಿಗೂ ಹಾಗೇನೇ ಅಪ್ಪು ಅವರ ಕುಟುಂಬದವರಿಗೂ ಇಂದಿಗೂ ಸಹ ಹೆಚ್ಚು ಅರಗಿಸಿಕೊಳ್ಳಲಾಗದ ನೋವು ಇದೆ. ದಿನವೂ ಕಣ್ಣೀರು ಇಡುವಂತೆ ಆಗಿದೆ. ಪುನೀತ್ ಇನ್ನೂ ನಮ್ಮ ಜೊತೆಗೆ ಇದ್ದಾರೆ ಎಂದೆನಿಸುತ್ತಿದೆ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಜೇಮ್ಸ್ ಚಿತ್ರವನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಎಲ್ಲಾ ಸರಿ ಇದ್ದಿದ್ದರೆ ಅಪ್ಪು ಅವರು ಅಭಿಮಾನಿಗಳ ಜೊತೆ ಕುಳಿತುಕೊಂಡು ಹುಟ್ಟುಹಬ್ಬದ ಜೊತೆಗೆ ಸಿನಿಮಾವನ್ನು ಸಹ ನೋಡಬಹುದಿತ್ತು. ಆದ್ರೆ ವಿಧಿ ಏನು ಮಾಡೋದು. ಇದೀಗ ಜಗ್ಗೇಶ್ ಅವರು ಟ್ವೀಟ್ ಮಾಡುತ್ತಾ ಅಪ್ಪು ಅವರ ಅಗಲಿಕೆ ಹಿನ್ನೆಲೆಯಲ್ಲಿ ಒಂದು ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ.. 

ಪುನೀತ್​ ಜೊತೆಗಿರುವ ಕೊನೆಯ ಫೋಟೋ ಎಂದು ನಟ ಜಗ್ಗೇಶ್ ಹೀಗೆ ಬರೆದುಕೊಂಡಿದ್ದಾರೆ. 'ಈ ಬಾರಿ ನನ್ನ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ..ಆಚರಿಸುವ ಮನಸ್ಸು ಕೂಡ ಇಲ್ಲ. ಕಾರಣ, ಪ್ರತಿ ಮಾರ್ಚ್​ 17ಕ್ಕೆ ತಪ್ಪದೇ ಪುನೀತ್ ಕರೆ ಮಾಡುತ್ತಿದ್ದ. ಅಣ್ಣಾ happy birthday ಎಂದು ಹೇಳುತ್ತಿದ್ದ ಕರೆ ಮತ್ತೆ ಎಂದೂ ಬರದಂತಾಯಿತು. ಪುನೀತ್​ ಜೊತೆ ಕೊನೆಯ ಚಿತ್ರ' ಎಂದು ಹೆಚ್ಚು ನೋವಿನ ಮೂಲಕ ಈ ಹೀಗೆ ನಿರ್ಧಾರ ಮಾಡಿದ್ದಾರೆ ಎಂದು ಈಗ ತಿಳಿದುಬಂದಿದೆ...