ಅಪ್ಪನಿಗೆ ಹುಟ್ಟಿದವನು ನಾನು, ಓಡಿ ಹೋಗಲ್ಲ ಎಂದ ಜಗ್ಗೇಶ್..! ವಿಡೀಯೋದಲ್ಲಿ ಹೇಳಿದ್ದೇನು..?

Updated: Tuesday, February 23, 2021, 11:35 [IST]

ಹೌದು ನಿನ್ನೆಯಷ್ಟೇ ಮೈಸೂರಿನಲ್ಲಿ ನವರಸ ನಾಯಕ ಜಗ್ಗೇಶ್ ಅವರು, ತೋತಾಪುರಿ ಸಿನಿಮಾದ ಶೂಟಿಂಗ್ ನಲ್ಲಿ ಬಿಸಜಿಯಾಗಿದ್ದಾಗ, ಇದ್ದಕ್ಕಿದ್ದಂತೆ ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಆ ಸ್ಥಳಕ್ಕೆ ಬಂದು ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿದರು. ಬಳಿಕ ಈ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗಿದ್ದು, ವಿಡಿಯೋ ಸೆರೆಹಿಡಿದ ವೇಳೆ ಕಂಡುಬಂದಂತೆ, ಹಿರಿಯನಟ ಜಗ್ಗೇಶ್ ಅವರನ್ನು ತೀರಾ ಅತಿರೇಕವಾಗಿ ಮಾತನಾಡಿಸಲು ದರ್ಶನ್ ಕೆಲ ಫ್ಯಾನ್ಸ್  ಗಲಾಟೆ ಮಾಡಿದರು. 

ನೀವು ದರ್ಶನ್ ಅವರಿಗೆ ಯಾಕೆ ಆ ರೀತಿ ಮಾತನಾಡಿದ್ದೀರಿ, ದರ್ಶನ್ ಅವರ ಬಗ್ಗೆ ಆ ರೀತಿ ಅವಹೇಳನಕಾರಿ ಹೇಳಿಕೆಯನ್ನ ಯಾಕೆ ಕೊಟ್ಟಿದ್ದೀರಿ ಎಂದು ಮಾತನಾಡಿ ಉತ್ತರಿಸುವಂತೆ ಗಲಾಟೆ ಮಾಡಿ ನೀವು ತಪ್ಪು ಮಾಡಿದ್ದೀರಾ ಎನ್ನಲಾಗಿ ಜಗ್ಗೇಶ್ ಅವರಿಗೆ ಅರ್ಥೈಸುವ ಪ್ರಯತ್ನವನ್ನು ಮಾಡಿದರು. 

ಇದೇ ವಿಚಾರವಾಗಿ ಜಗ್ಗೇಶ್ ಅವರು ಇದೀಗ ಒಂದು ವಿಡಿಯೋ ಹಂಚಿಕೊಂಡಿದ್ದು, "ನಾನು ಅಪ್ಪನಿಗೆ ಹುಟ್ಟಿದವನು, ಓಡಿ ಹೋಗಲ್ಲ" ಎಂಬ ಹೇಳಿಕೆಯನ್ನು ಕೊಟ್ಟು ತುಂಬಾ ಆಕ್ರೋಶದಿಂದ ಮಾತನಾಡಿದ್ದಾರೆ. ಅಷ್ಟಕ್ಕೂ ನಟ ಜಗ್ಗೇಶ್ ಅವರು ಏನೆಲ್ಲ ಹೇಳಿದರು ಗೊತ್ತಾ.?  ಈ ವಿಡಿಯೋವನ್ನ ಒಮ್ಮೆ ನೋಡಿ ನಿಮಗೆ ತಿಳಿಯುತ್ತದೆ....