Jaggesh : ನಟ ಜಗ್ಗೇಶ್ ಮನೆಯಲ್ಲಿ ಹೊಳೆಯ ರೀತಿ ನಿಂತ ಮಳೆ ನೀರು..! ಆಕ್ರೋಶ ಹೊರ ಹಾಕಿದ ಜಗ್ಗೇಶ್

By Infoflick Correspondent

Updated:Monday, August 29, 2022, 21:40[IST]

Jaggesh : ನಟ ಜಗ್ಗೇಶ್ ಮನೆಯಲ್ಲಿ ಹೊಳೆಯ ರೀತಿ ನಿಂತ ಮಳೆ ನೀರು..! ಆಕ್ರೋಶ ಹೊರ ಹಾಕಿದ ಜಗ್ಗೇಶ್

ಹೌದು ರಾಜ್ಯದಲ್ಲಿ ನಿಮಗೆ ಈಗಾಗಲೇ ಗೊತ್ತಿರುವಂತೆ ಕಳೆದ ಒಂದು ವಾರದಿಂದ ಭಾರಿ ಮಳೆ ಆಗುತ್ತಿದೆ. ಎಲ್ಲಿ ನೋಡಿದರೂ ಜಲಾವೃತ ಆಗಿರುವ ಪ್ರದೇಶಗಳು ಹೆಚ್ಚು ಕಾಣಸಿಗುತ್ತವೆ. ಹೀಗಾಗಿ ಜಲ ಮಂಡಳಿಯವರು ಕೆಲವು ಮುನ್ಸೂಚನೆ ನೀಡಿದ್ದು, ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗುತ್ತದೆ ಯಾವ ಪ್ರದೇಶಗಳು ಎಚ್ಚರಿಕೆಯಿಂದ ಇರಬೇಕು ಎಂದೇಲ್ಲಾ ಆದೇಶ ಹೊರಡಿಸಿದ್ದು ಹೀಗಿರುವಾಗ ಕೆಲ ಪ್ರದೇಶಗಳಲ್ಲಿ ಮಳೆ ಹೇಳಿಕೆಗಿಂತ ಹೆಚ್ಚಾಗಿ ಬರುತ್ತಿದ್ದು ಬೆಂಗಳೂರಿನಲ್ಲಿ ಜಗ್ಗೇಶ್ ಅವರ ಮನೆ ಪೂರ ನೀರಿನಿಂದ ತುಂಬಿದೆ ಎಂದು ವರದಿಯಾಗಿದೆ. ನಟ ಜಗ್ಗೇಶ್ ಅವರು ಟ್ವಿಟರ್ ಖಾತೆ ಮೂಲಕ ಅದನ್ನು ಹೇಳಿಕೊಂಡಿದ್ದಾರೆ. ಈ ಟ್ವಿಟರ್ ಖಾತೆಯ ಮೂಲಕವೇ ಆಕ್ರೋಶ ಹೊರಹಾಕಿ ಆ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ತೋರಿಸಿದ್ದಾರೆ.  

ನಟ ಜಗ್ಗೇಶ್ ಅವರ ಬೆಂಗಳೂರಿನ ಮನೆಗೆ ಮಳೆಯಿಂದಾಗಿ ಹೆಚ್ಚು ನೀರು ಮನೆಯೊಳಗೆ ಎಂಟ್ರಿ ಪಡೆದಿದ್ದು ಕಾಲಿಟ್ಟ ಕಡೆಯಲ್ಲ ಮಳೆಯಿಂದಾಗಿ ನೀರು ನಿಂತಿರುವ ಫೋಟೋಸ್  ಕಂಡು ಬಂದಿವೆ. ಹಾಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿವೆ ಎನ್ನಬಹುದು. ಇದರಿಂದ ಆಕ್ರೋಶ ಹೊರ ಹಾಕಿದ ನಟ ಜಗ್ಗೇಶ್ ಅವರು ಟ್ವಿಟರ್ ಮೂಲಕ ಈ ರೀತಿ ಮನವಿ ಮಾಡಿದ್ದು, ತಮ್ಮ ನೋವ ವ್ಯಕ್ತಪಡಿಸಿದ್ದಾರೆ.  ಜೊತೆಗೆ ಇದಕ್ಕೆ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ. 
'ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ.. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ.ಮಾಯಸಂದ್ರ ತಳದಲ್ಲಿ ಇರುವ ಸುಮಾರು 20ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ
ವಿನಂತಿ'. ಎಂದು ಬರೆದುಕೊಂಡಿದ್ದಾರೆ.

ನಿಮಗೆ ನಟ ಜಗ್ಗೇಶ್ ಅವರ ಮನೆಯ ಒಳಾಂಗಣ ದೃಶ್ಯ ಈ ವೀಡಿಯೋದಲ್ಲಿದೆ. ಮಳೆಯಿಂದಾಗಿ ಜಲಾವೃತಗೊಂಡ ಫೋಟೋಗಳು ಕಾಣಿಸಿ ಸಿಗುತ್ತವೆ. ಹೌದು ವಿಡಿಯೋವನ್ನ ಒಮ್ಮೆ ನೋಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು..(VIDEO CREDIT: ANI TV KANNADA)