ಜಗ್ಗಣ್ಣ ಬದುಕಿನ ಪಯಣದ ಬಗ್ಗೆ ಸರಳವಾಗಿ ವಿವರಣೆ ನೀಡಿರೋದು ಯಾರಿಗೆ..?

Updated: Thursday, March 4, 2021, 09:01 [IST]

ನವರಸ ನಾಯಕ ಜಗ್ಗೇಶ್ ವಿಜಯ ಪ್ರಸಾದ್ ಅವರ ನಿರ್ದೇಶನದ ತೋತಾಪುರಿ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಮಧ್ಯೆ ಕಳೆದ ತಿಂಗಳಷ್ಟೇ ಜಗ್ಗಣ್ಣ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವೆ ಮನಸ್ತಾಪ ಉಂಟಾಗಿತ್ತು. ಇದರ ಬೆನ್ನಲ್ಲೇ ಇದೀಗ ಜಗ್ಗೇಶ್ ಅವರು ಇನ್’ಸ್ಟಾಗ್ರಾಂನಲ್ಲಿ ಬದುಕಿನ ಪಯಣದ ಬಗ್ಗೆ ಸರಳವಾಗಿ ವಿವರಿಸಿದ್ದಾರೆ.      

“ವಿಶ್ವ ಎಂಬ ಚಲಿಸುವ ಗಾಡಿಯಲ್ಲಿ ಮನುಕುಲದ ಸಮಸ್ತರು ಪ್ರಯಾಣಿಕರು ! ಈ ಪ್ರಯಾಣದಲ್ಲಿ ಯಾರು ಸ್ನೇಹಿತರಲ್ಲಾ ! ಯಾರು ಶತೃಗಳು ಅಲ್ಲಾ ! ಕೆಲವರು ನಗುತ್ತ ಮಾತಾಡಿಸುತ್ತಾರೆ ! ಕೆಲವರು ನೋಡಿಯು ನೋಡದಂತೆ ಅವರ ಬಗ್ಗೆ ಮಾತ್ರ ಚಿಂತಿಸಿ ಅನ್ಯರ ತಳ್ಳಿ ಜಾಗಹಿಡಿದು ಕೂರುತ್ತಾರೆ ! ಕೆಲವರು ತಮ್ಮ ಸಂತೋಷಕ್ಕಾಗಿ ಜೋರಾಗಿ ಕೂಗಾಡುತ್ತಾ ಆನಂದಿಸಿ ಅನ್ಯರಿಗೆ ನೋವುಂಟು ಮಾಡುತ್ತಾರೆ ! ಕೆಲವರು ತಮ್ಮ ಸಂತೋಷ ನೆಮ್ಮದಿಗಾಗಿ ಅನ್ಯರ ಬೈಯುತ್ತ ಗೆದ್ದಂತೆ ಬೀಗಿ ಪ್ರಯಾಣಿಸುತ್ತಾರೆ ! ಕೆಲವರು ಗುರು ಹಿರಿಯರ ಕಂಡಕ್ಷಣ ಅವರ ಆಸನ ಹಿರಿಯರಿಗೆ ಬಿಟ್ಟುಕೊಟ್ಟು ಸಾರ್ಥಕ ಭಾವದಿಂದ ಪ್ರಯಾಣ ಆನಂದಿಸುತ್ತಾರೆ !       

ಕೆಲವರು ಪ್ರಯಾಣದಲ್ಲಿ ಸಣ್ಣ ಚಿಲ್ಲರೆ ಗಲಾಟಿಯಿಂದ ಹಲ್ಲೆ ಕೊಲೆಯವರೆಗು ಹೋಗಿ ಸಾಮರಸ್ಯ ಹಾಳು ಮಾಡಿ ಅವರು ಹಾಳಾಗುತ್ತಾರೆ ! ಅದರಲ್ಲಿ ಕೆಲವರು ಮಾತ್ರ ಈ ಪ್ರಯಾಣ ಜಂಜಾಟ ಗಮನಿಸದೆ ತಮ್ಮಲ್ಲೆ ತಾವು ಲೀನವಾಗಿ ಕೆಸರಂತ ಈ ಪ್ರಯಾಣದಲ್ಲಿ ಅದಕ್ಕಂಟದೆ ತಾವರೆ ಹೂವಿನಂತೆ ಮೇಲೆಬಂದು ಪ್ರಯಾಣ ಆನಂದವಾಗಿ ಮುಗಿಸಿದ ಮೇಲೆಯು ಮನಸಲ್ಲಿ ಉಳಿಯುತ್ತಾರೆ ! ಇದ ಹೇಳಲು ಕಾರಣ ಈ ಬದುಕಿನ ಪ್ರಯಾಣದ ಪ್ರಕ್ರಿಯೆ ಕೂಡಿಕಳೆದಾಗ ಉಳಿವುದು ಒಂದೆ " ಸತ್ ಚಿತ್ ಆನಂದ " ಸಚ್ಚಿದಾನಂದ ರೂಪ ! ಅದು ಶಿವನ ಆನಂದ ಸ್ಥಿತಿ ! ಇದ ಅರಿತು ಜೀವನ ಪ್ರಯಾಣ ಮಾಡಿದವ ಮಾತ್ರ ಉತ್ತಮ ಪ್ರಯಾಣಿಕ ! ಇದರಲ್ಲಿ ನೀವು ಯಾವ ರೀತಿ ಪ್ರಯಾಣಿಕರು ಚಿಂತಿಸಿ ಬದುಕಿನ ಪ್ರಯಾಣಮಾಡಿ..ಶುಭಮಸ್ತು .. ಶುಭದಿನ :)” 
ಹೀಗೆ ನಟ ಜಗ್ಗೇಶ್ ಅವರು ಇಂದು ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.