ದಚ್ಚು ಫ್ಯಾನ್ಸ್ ಜಗಳದಲ್ಲಿ ಕೊನೆಗೂ ಇದನ್ನ ತ್ಯಜಿಸಿದ ನಟ ಜಗ್ಗೇಶ್..! ಮನನೊಂದು ಹೇಳಿದ್ದೇನು..? ವಿಡಿಯೋ ನೋಡಿ

Updated: Tuesday, February 23, 2021, 08:43 [IST]

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ಡಿ ಬಾಸ್ ಅವರಿಗೆ ಅವಮಾನ ಮಾಡಿದ್ದಾರೆ, ಬೈದಿದ್ದಾರೆ ಫೋನ್ ಕಾಲ್ ನಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡಿ ಅವಹೇಳನ ಮಾಡಿದ್ದಾರೆ, ಎನ್ನುವ ಮಾತುಗಳೊಂದಿಗೆ ದರ್ಶನ್ ಅಭಿಮಾನಿಗಳು ನಿನ್ನೆಯಷ್ಟೇ ಮೈಸೂರಿನಲ್ಲಿ ತೋತಾಪುರಿ ಸಿನಿಮಾದ ಶೂಟಿಂಗ್ನಲ್ಲಿ ಬಿಜಿಯಾಗಿದ್ದ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿ ಗಲಾಟೆ ಮಾಡಿದರು. ಮತ್ತು ಹೇಗೆ ದರ್ಶನ್ ಅವರಿಗೆ ಹೀಗೆ ಮಾತನಾಡಿದ್ದೀರಿ, ಕಾರಣವೇನು.? ನೀವೇ ಅಲ್ವಾ ಮಾತನಾಡಿದ್ದು? ಎಂದು ಗಲಾಟೆ ಮಾಡಿ ಡಿ ಬಾಸ್ ಫ್ಯಾನ್ಸ್ ಪ್ರಶ್ನೆ ಮಾಡಿದರು.   

ಇದಕ್ಕೆ ನಟ ಜಗ್ಗೇಶ್, 'ಆ ಧ್ವನಿ ನನ್ನದಲ್ಲ ಸ್ವಾಮಿ, ನಾನು ಅವರಿಗೆ ಏನು ಅಂದಿಲ್ಲ, ನಾನು ದರ್ಶನ್ ಚೆನ್ನಾಗಿದ್ದೇವೆ' ಎಂದೆಲ್ಲಾ ಪ್ರತಿಕ್ರಿಯಿಸಿದರು. ಆದರೆ ಅಲ್ಲೇ ನಿಂತಿದ್ದ ಡಿ ಬಾಸ್ ಫ್ಯಾನ್ಸ್ ತಾಳ್ಮೆ ಕಳೆದುಕೊಂಡು ಹೆಚ್ಚು ಗಲಾಟೆ ಮಾಡಿ ನವರಸ ನಾಯಕ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿ ದೊಡ್ಡ ರಾದ್ಧಾಂತ ಮಾಡಿದರು.ಇದೇ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಅವರು ತಮ್ಮ ಖಾತೆಯಲ್ಲಿ ಎಲ್ಲರೆದುರಿಗೆ ಒಂದು ವಿಚಾರವನ್ನ ಇದೀಗ ಬಿಚ್ಚಿಟ್ಟಿದ್ದು , ಮುಂದೆ ತಾವಾಯಿತು ತಮ್ಮ ಕೆಲಸವಾಯಿತು, ಎಂದು ಹೇಳಿ ಅದನ್ನು ತ್ಯಜಿಸಬೇಕು ಎಂದು ಹೇಳಿದರು. ಅಷ್ಟಕ್ಕೂ ನಟ ಜಗ್ಗೇಶ್ ಅವರು  ಹೇಳಿದ್ದೇನು ಗೊತ್ತಾ ಮುಂದೆ ಓದಿ..   

'ಆತ್ಮೀಯರೆ ನನಗೆ ನೀವು, ನಿಮಗೆ ನಾನು ಇನ್ನುಮುಂದೆ! ಇನ್ನುಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮ, ಸ್ನೇಹ, ಕಾರ್ಯಕ್ರಮ, ಬೇಟಿ, ಹರಟೆ ನನ್ನಿಂದ ಇರುವುದಿಲ್ಲ! ಮುಂದೆ ನನ್ನಸಿನಿಮ ನನ್ನztv showಗೆ ಮೀಸಲುಬದುಕು! ಕಾರಣ ತುಂಬ ತಾಮಸವಾಗಿದೆ ನಮ್ಮರಂಗ,ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ! ' ಎಂದು ಹೇಳಿದ್ದಾರೆ. ಈ ವಿಷ್ಯ ಕುರಿತು ನಿಮ್ಮ ಅಭಿಪ್ರಾಯವೇನು.? ಮಾಹಿತಿ ಬಗ್ಗೆ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು...