Adhiti prabhudeva : ಅಧಿತಿ ಪ್ರಭುದೇವ ಹಾಗೂ ಡಾಲಿ ಧನಂಜಯ್ ಮದುವೆ ಮಾಡಲು ಹೊರಟಿದ್ದ ಜಗ್ಗೇಶ್ ಕಡೆಗೆ ಏನಾಯ್ತು ನೋಡಿ ?

By Infoflick Correspondent

Updated:Wednesday, September 7, 2022, 15:38[IST]

Adhiti prabhudeva : ಅಧಿತಿ ಪ್ರಭುದೇವ ಹಾಗೂ ಡಾಲಿ ಧನಂಜಯ್ ಮದುವೆ ಮಾಡಲು  ಹೊರಟಿದ್ದ ಜಗ್ಗೇಶ್   ಕಡೆಗೆ ಏನಾಯ್ತು ನೋಡಿ ?

ನಟ ಡಾಲಿ ಧನಂಜಯ್ ಬಗ್ಗೆ ಯಾರಿಗೂ ಹೇಳುವುದೇ ಬೇಕಿಲ್ಲ. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಹೀರೋ ಆಗಬೇಕು ಎಂಬ ಕನಸು ಕಾಣುತ್ತಿದ್ದ ಡಾಲಿ ಧನಂಜಯ್ ಸೂಪರ್ ಡೂಪರ್ ಆಗಿ ವಿಲನ್ ಆಗಿಬಿಟ್ಟರು. ಹೀರೋ ಆಗಿ ಅವಕಾಶ ಸಿಗದಿದ್ದಾಗ ಡಾಲಿ ಧನಂಜಯ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಟನೆಯ ಟಗರು ಚಿತ್ರದಲ್ಲಿ ಡಾಲಿ ಪಾತ್ರದಲ್ಲಿ ಧನಂಜಯ್ ಅವರು ನಟಿಸಿದ್ದರು. ಟಗರು ಸಿನಿಮಾ ಮೂಲಕವೇ ಡಾಲಿ ಧನಂಜಯ್ ಎಂದು ಗುರುತಿಸಿಕೊಂಡು ವಿಲನ್ ಪಾತ್ರಗಲ್ಲಿ ಮಿಂಚಲು ಶುರುಮಾಡಿದರು. ಅಂದಿನಿಂದ ಇಂದಿನವರೆಗೂ ಹಿಂತಿರುಗಿ ನೋಡದ ಧನಂಜಯ್ ಅವರು ಸಾಲು ಸಾಲು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಲು ಆಫರ್ ಗಳ ಸುರಿಮಳೆಯೇ ಬಂದವು.

ಇನ್ನು ನಟಿ ಅಧಿತಿ ಪ್ರಭುದೇವ ಅವರು ಸಿಂಪಲ್ ಹುಡುಗಿ. ಕೋವಿಡ್ ಸಂದರ್ಭದಲ್ಲಿ ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ತೆರೆದು ಫೇಮಸ್ ಆಗಿ ಬಿಟ್ಟರು. ಸಿಂಪಲ್ ತನದಿಂದಲೇ ಎಲ್ಲರ ಮನ ಮೆಚ್ಚಿದವರು. ತೋತಾಪುರಿ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣೀಸಿಕೊಂಡಿದ್ದಾರೆ. ಇನ್ನು ಈ ಜೋಡಿಯನ್ನು ನಿಜ ಜೀವನದಲ್ಲೂ ಒಟ್ಟಿಗೆ ಬದುಕಲಿದ್ದಾರೆ ಎಂಬ ಗಾಸಿಪ್ ಎದ್ದಿತ್ತು. ಆದರೆ ಈ ಗಾಸಿಪ್ ಗೆ ಈಗ ನಟ ಜಗ್ಗೇಶ್ ಅವರು ತೆರೆ ಎಳೆದಿದ್ದಾರೆ.   

ಅಧಿತಿ ಪ್ರಭುದೇವ ಹಾಗೂ ಡಾಲಿ ಧನಂಜಯ್ ಅವರನ್ನು ಒಂದು ಮಾಡಲು ನಾವು ಪ್ರಯತ್ನ ಪಟ್ಟೆವು. ಆದರೆ ಅದು ಸಹಕಾರಿಯಾಗಲಿಲ್ಲ. ಇವರಿಬ್ಬರ ಮದುವೆಗೆ ಅವರ ತಾಯಿ ಒಪ್ಪಿಕೊಳ್ಳಲಿಲ್ಲ. ಹಾಗ ಅಗಿ ಇಬ್ಬರೂ ಮದುವೆಯಾಗುವುದಕ್ಕೆ ಸಾಧ್ಯವಾಗಲಿಲ್ಲ. ಇಬ್ಬರೂ ಮದುವೆಯಾಗಿದ್ದರೆ, ನಮ್ಮ ಇಂಡಸ್ಟ್ರಿಯಲ್ಲಿ ಮತ್ತೊಂದು ಸ್ಟಾರ್ ಕಪಲ್ಸ್ ಇರುತ್ತಿದ್ದರು. ಇನ್ನು ಅಧಿತಿ ಪ್ರಭುದೇವ ಅವರು ಬೇರೆ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.