Jaggesh : ಅಂದು ಕಷ್ಟ ಕಾಲದಲ್ಲಿ 200 ಕೇಳಿದ್ದ ಜಗ್ಗೇಶ್ ರವಿಚಂದ್ರನ್ ಕೊಟ್ಟದ್ದು ಎಷ್ಟು..! ಶಿವಣ್ಣನ ಬಗ್ಗೆ ಹೇಳಿದ್ದೆ ಬೇರೆ ನೋಡಿ

By Infoflick Correspondent

Updated:Monday, August 15, 2022, 10:05[IST]

Jaggesh : ಅಂದು   ಕಷ್ಟ ಕಾಲದಲ್ಲಿ   200 ಕೇಳಿದ್ದ ಜಗ್ಗೇಶ್ ರವಿಚಂದ್ರನ್ ಕೊಟ್ಟದ್ದು ಎಷ್ಟು..! ಶಿವಣ್ಣನ ಬಗ್ಗೆ ಹೇಳಿದ್ದೆ ಬೇರೆ ನೋಡಿ

ಜೀ ಕನ್ನಡ ಚಾನಲ್ ಅಲ್ಲಿ ಆಗಲೇ ಸಾಕಷ್ಟು ವರ್ಷಗಳಿಂದ ಹೆಚ್ಚು ಮನರಂಜನೆ ನೀಡುವ ಕಾರ್ಯಕ್ರಮಗಳು ಹಾಗೂ ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯಕ್ರಮಗಳು ಹೆಚ್ಚಾಗಿ ಪ್ರಸಾರ ಆಗುತ್ತಿವೆ. ಈ ವೇದಿಕೆಗಳ ಮೂಲಕ ಅದೆಷ್ಟೋ ಪ್ರತಿಭೆಗಳು ಹೊರ ಹೊಮ್ಮತಿದ್ದಾರೆ..ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ವಾರಾಂತ್ಯಕ್ಕೆ ಸಾಕಷ್ಟು ಚಾನೆಲ್ಗಳು ಟಿಆರ್ಪಿ ವಿಚಾರವಾಗಿ ದೊಡ್ಡದಾಗಿಯೇ ಹರ ಸಾಹಸ ಪಡುವುದ ನೀವೂ ನೋಡಿದ್ದೀರಿ. ವಾರಂತ್ಯಕ್ಕೆ ಪ್ರೇಕ್ಷಕರ ರಂಜಿಸಬೇಕು, ಮನೋರಂಜನೆ ನೀಡಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಪ್ರಯತ್ನ ಮಾಡಿಕೊಂಡು ದೊಡ್ಡ ದೊಡ್ಡ ರೀತಿಯ ಸಾಹಸಗಳನ್ನು ಮಾಡುತ್ತಾರೆ. ಹೌದು ಅದರಲ್ಲಿ ಡಿಕೆಡಿ ಕೂಡ ಒಂದು. ಈ ಡಾನ್ಸ್ ಕರ್ನಾಟಕ ಡಾನ್ಸ್ ಈಗಾಗಲೇ ಅದ್ಭುತ ಪ್ರತಿಕ್ರಿಯ ಪಡೆದುಕೊಂಡಿದೆ.

ಈ ಬಾರಿ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಬಂದಿರುವುದು ಅತಿ ದೊಡ್ಡ ಎನರ್ಜಿ ಎನ್ನಬಹುದು. ಶಿವಣ್ಣ ಅವರು ಆಡುವ ಮಾತುಗಳು ನಿಜಕ್ಕೂ ತುಂಬಾನೇ  ಅದ್ಭುತವಾಗಿರುತ್ತವೆ. ಅಂತಹ ವೇದಿಕೆಗೆ ಇದೀಗ ಮತ್ತೆ ರವಿಚಂದ್ರನ್ ಜೊತೆಗೆ ಜಗ್ಗೇಶ್ ಇತ್ತೀಚಿಗೆ ಆಗಮಿಸಿದ್ದರು. ಆ ವೇಳೆ ಜಗ್ಗೇಶ್ ಅವರು ರವಿಚಂದ್ರನ್ ಮತ್ತು ಶಿವಣ್ಣ ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು ಜಗ್ಗೇಶ್. ಹೌದು ನಟ ಜಗ್ಗೇಶ್ ಅವರು ನಾನು ಗಣೇಶನನ್ನು ತುಂಬಾ ನಂಬಿದ್ದೇನೆ, ಗಣೇಶನನ್ನು ಕೂರಿಸಬೇಕು ಎಂದಾಗ ನನ್ನ ಬಳಿ ದುಡ್ಡು ಇರದೇ ಇದ್ದರೂ ನನ್ನ ಅಮ್ಮ ಹೇಳಿಕೊಟ್ಟ ಹಾಗೆ ಒಂದು ಮಣ್ಣಿನ ಸಣ್ಣ ಗಣಪನ್ನಾದರೂ ತಂದು ಕೂರಿಸುತ್ತಿದ್ದೆ. ಆಗ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರವಿಚಂದ್ರನ್ ಅವರು ಬರುತ್ತಿದ್ದರು. ನಾನು ಬಲಕ್ಕೆ ನಿಂತಿದ್ದೆ.

ಏನೋ ಎಂದು ಕೇಳಿದರು ರವಿಚಂದ್ರನ್. ನಾನು ಸರ್ 200 ರೂಪಾಯಿ ಕೊಡುತ್ತೀರಾ ಎಂದು ಕೇಳಿದೆ. ನನ್ನನ್ನು ಒಮ್ಮೆ ನೋಡಿ ಹೇ ಬಾಲು ಇವನಿಗೆ 500 ರೂಪಾಯಿಯ ಕೊಟ್ಟು ಕಳಿಸು ಎಂದು ಹೇಳಿದ್ರು ಎಂದು ಅದು ರವಿಚಂದ್ರನ್ ಸರ್ ಅವರ ಕೈಂಡ್ ಹಾರ್ಟ್ ಎಂದು ಜಗ್ಗೇಶ್ ಮಾತನಾಡಿದರು. ಜೊತೆಗೆ ಶಿವಣ್ಣ ಅವರ ಬಗ್ಗೆ ಮತ್ತು ರಾಜಣ್ಣ ಅವರ ಬಗ್ಗೆ ಹೇಳಿದ್ದಾದರೂ ಏನು ಗೊತ್ತಾ, ಆ ಸಮಯದಲ್ಲಿ ಶಿವಣ್ಣ ಮಾಡಿದ ಸಹಾಯವನ್ನು ಜಗ್ಗೇಶ್ ಅವರು ಇದೀಗ ಡಿಕೆಡಿ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ. ಇಲ್ನೋಡಿ ವಿಡಿಯೋ. ಮತ್ತು ವಿಡಿಯೋ ನಿಮಗೂ ಕೂಡ ಖಂಡಿತವಾಗಿ ಇಷ್ಟವಾದ ಮೇಲೆಯೇ ಶೇರ್ ಮಾಡಿ ಧನ್ಯವಾದಗಳು...