ಮಂತ್ರಾಲಯಕ್ಕೆ ಹೋದಾಗ ರಾಯರ ಬಗ್ಗೆ ಅಪ್ಪು ಆಡಿದ್ದ ಮಾತು ಸಾಯೋವರೆಗೂ ಮರೆಯೋಲ್ಲವೆಂದ ಜಗ್ಗೇಶ್..!

By Infoflick Correspondent

Updated:Saturday, March 5, 2022, 11:39[IST]

ಮಂತ್ರಾಲಯಕ್ಕೆ ಹೋದಾಗ ರಾಯರ ಬಗ್ಗೆ ಅಪ್ಪು ಆಡಿದ್ದ ಮಾತು ಸಾಯೋವರೆಗೂ ಮರೆಯೋಲ್ಲವೆಂದ ಜಗ್ಗೇಶ್..!

ಪುನೀತ್ ರಾಜ್ ಕುಮಾರ್  (Puneeth Rajkumar) ಅವರು ಇದೀಗ ನಮ್ಮ ಜೊತೆಗೆ ಇಲ್ಲ, ಆದರೆ ಅವರ ನೆನಪುಗಳಿಗೆ ಎಂದಿಗೂ ಸಾವಿಲ್ಲ ಎಂದು ಹೇಳಬಹುದು. ಕಾರಣ ಅಷ್ಟು ಪ್ರೀತಿಯಿಂದಲೇ ಅಪ್ಪು ಜೀವನ ಮಾಡಿದ್ದಾರೆ. ಎಲ್ಲರೂಟ್ಟಿಗೆ ಬೆರೆತು ಹೆಚ್ಚು ಸ್ನೇಹದಿಂದ ಇದ್ದು, ಎಲ್ಲರಿಗೂ ಪ್ರೀತಿಯನ್ನು ನೀಡಿ ಅಪಾರ ಅಭಿಮಾನಿ ಬಳಗವನ್ನು ತಮ್ಮದಾಗಿಸಿಕೊಂಡು ಇದೀಗ ಅಪ್ಪು ಕೇವಲ ದೈಹಿಕವಾಗಿ ಮಾತ್ರ ಮರೆಯಾಗಿದ್ದಾರೆ. ನಟ ಅಪ್ಪು ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿ ಒಬ್ಬ ಮನುಷ್ಯ ಹೇಗಿರಬೇಕು, ಹೇಗೆ ಒಳ್ಳೆ ತತ್ವ ಗುಣಗಳನ್ನು ಹೊಂದಿರಬೇಕು, ಎಷ್ಟು ಸರಳತೆಯಿಂದ ಇರಬೇಕು, ಜೀವನದಲ್ಲಿ ಸಹಾಯದ ಗುಣಗಳನ್ನು ಯಾವ ರೀತಿ ಇಟ್ಟುಕೊಂಡಿರಬೇಕು ಎಂದು ತೋರಿಸಿಕೊಟ್ಟವರು..

ನಟ ಜಗ್ಗೇಶ್  (Jaggesh) ಅವರು ಇದೀಗ ಅಪ್ಪು ಬಗ್ಗೆ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ತೋತಾಪುರಿ ಸಿನಿಮಾ ವೇಳೆ ಈ ರೀತಿ ಮಾತನಾಡಿದ್ದಾರೆ. ಹೌದು ಅಪ್ಪು ಸಾಯುವ ಮುನ್ನ 5 ತಿಂಗಳ ಮುಂಚೆ ಜಗ್ಗೇಶ್ ಅಪ್ಪು ಜೊತೆ ಮಂತ್ರಾಲಯಕ್ಕೆ ಹೋಗಿದ್ದರಂತೆ. ಆಗ ಇಲ್ಲಿಂದ 450 ಕಿಲೋಮೀಟರ್ ಉದ್ದಕ್ಕೂ ಕೂಡ ಅಪ್ಪು ಅವ್ರು ಜಗ್ಗೇಶ್ ಅವರ ಜೊತೆ ಮಾತನಾಡುತ್ತಲೇ ನಗುತ್ತಲೇ ಖುಷಿಯಿಂದ ಹೋದರಂತೆ. ಹೌದು ಆ ಬಗ್ಗೆ ಹೇಳಿರುವ ಜಗ್ಗೇಶ್ ಅವರು ಮಂತ್ರಾಲಯದ ಒಳಗೆ ಹೋದ ಬಳಿಕ ಶ್ರೀಗಳ ಜೊತೆ ನಾನು ರಿಕ್ವೆಸ್ಟ್ ಮಾಡಿಕೊಂಡು, ಇನ್ನರ್ ಬೃಂದಾವನವನ್ನ ಅಪ್ಪುಗೆ ತೋರಿಸಬೇಕು ಎಂಬುದಾಗಿ ಕೇಳಿದ್ದರಂತೆ.   

ಆಗ ಅಪ್ಪು ಅವರು ಒಳಗೆ ಹೋದ ಬಳಿಕ ಜಗ್ಗೇಶ್ ಅವರಿಗೆ ಅಣ್ಣ ನೀವು ಎಷ್ಟು ಪುಣ್ಯ ಮಾಡಿದ್ದಿರಾ ಅಣ್ಣ, ರಾಯರು  ಬೃಂದಾವನದ ಪಕ್ಕ ನಡೆಯುತ್ತಿದ್ದಾರೆ ಎನಿಸುತ್ತದೆ, ಹಾಗೆ ನನ್ನ ಮೈ ಜುಮ್ ಎನಿಸುತ್ತಿದೆ ಎಂದು ಹೇಳಿದ್ದರಂತೆ..ಇದರ ಬಗ್ಗೆ ಹೇಳಿ ಈಗ ಜಗ್ಗೇಶ್ ಈ ಮಾತನ್ನು ಹೇಳಿ, ಅಪ್ಪು ಇನ್ನೂ ಬದುಕಿದ್ದಾನೆ ಎಣಿಸುತ್ತೇ, ನಾನು ನನ್ನ ಹೆಂಡತಿ ಅಪ್ಪು ಜೇಮ್ಸ್ ಚಿತ್ರದ ಕೆಲಸ ನೋಡಿ ಕಣ್ಣೀರು ಹಾಕಿದ್ದೇವೆ. ಅಂದು ಮಂತ್ರಾಲಯದಲ್ಲಿ ಅಪ್ಪು ಹೇಳಿದ ಆ ಮಾತನ್ನು ನಾನು ಸಾಯುವವರೆಗೂ ಮರೆಯಲಾಗುವುದಿಲ್ಲ ಎಂದರು.ಹೌದು ನಟ ಜಗ್ಗೇಶ್ ಅಪ್ಪು ಬಗ್ಗೆ ಇನ್ನೇನೆಲ್ಲ ಹೇಳಿದ್ದಾರೆ ಗೊತ್ತಾ.? ಈ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ವಿಡಿಯೋವನ್ನು ಶೇರ್ ಮಾಡಿ..(video credit: media centre)