Jaggesh : ನನ್ನ ಮಗನ ಜೀವನ ನಾನೇ ಹಾಳು ಮಾಡಿದ್ದು ಎಂದ ಜಗ್ಗಣ್ಣ..! ಕಾರಣ ನಿಮಗೂ ಅಚ್ಚರಿ ತರಿಸುತ್ತೆ..!

By Infoflick Correspondent

Updated:Friday, July 15, 2022, 07:37[IST]

Jaggesh :  ನನ್ನ ಮಗನ ಜೀವನ ನಾನೇ ಹಾಳು ಮಾಡಿದ್ದು ಎಂದ ಜಗ್ಗಣ್ಣ..! ಕಾರಣ ನಿಮಗೂ ಅಚ್ಚರಿ ತರಿಸುತ್ತೆ..!

ನವರಸ ನಾಯಕ (Jaggesh)ಎಂದೇ ಗುರುತಿಸಿಕೊಂಡಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಜಗ್ಗೇಶ್ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಬೆರಗಾಗುವ ಹೇಳಿಕೆ ನೀಡಿದ್ದು, ಅವರ ಮಗನ ವಿಚಾರವಾಗಿ ಮಾತನಾಡಿರುವ ಸುದ್ದಿ ಈಗ ಬಾರಿ ವೈರಲಾಗುತ್ತಿದೆ. ಹಾಗೆ ಚರ್ಚೆ ಕೂಡ ಆಗುತ್ತಿದೆ ಎಂದು ಹೇಳಬಹುದು. ಇಂದಿನ ಚಿತ್ರರಂಗ ತುಂಬಾ ಬದಲಾಗಿದೆ ಗೆಳೆಯರೇ. ನಿಮಗೂ ಕೂಡ ಅದು ಗೊತ್ತು. ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಆಗಬೇಕು ಒಳ್ಳೆಯ ಸಂಭಾವನೆ ಪಡೆಯಬೇಕು ಎಂದು ಇರಲಿಲ್ಲ. ಜೀವನ ನಡೆದರೆ ಸಾಕು ಎಂದು ಕೆಲ ಕಲಾವಿದರು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದರು. ಅಂತಹವರ ಸಾಲಿನಲ್ಲಿ ಜಗ್ಗೇಶ್ ಅವರು ಅವರದೇ ಆದ ಪ್ರತಿಭೆ ಮೂಲಕ ಕನ್ನಡಿಗರ ಮನೆಮನೆಗೂ ತಲುಪಿ ಹೆಚ್ಚು ಕಷ್ಟ ಪಟ್ಟು ನಟನೆಯಲ್ಲಿ ಅಭಿಮಾನಿಗಳನ್ನು ಗಿಟ್ಟಿಸಿಕೊಂಡವರು. 

ಹೌದು ಇದೀಗ ಸಿನಿಮಾರಂಗ ತುಂಬಾ ಬದಲಾಗಿದೆ, ಸೆಟ್ಟಿಗೆ ಬರಬೇಕು ಶೂಟಿಂಗಾಗಿ ಎಂದರೆ ಐಷಾರಾಮಿ ಕಾರಿನಲ್ಲೇ ಹೆಚ್ಚು ನಟ ನಟಿಯರು ಬರುತ್ತಾರೆ. ನಟ ಜಗ್ಗೇಶ್ ಅವರು ಆರಂಭದ ದಿನಗಳಲ್ಲಿ ಪರಿಮಳ ಎನ್ನುವರನ್ನು ಪ್ರೀತಿ ಮಾಡಿ ಮದುವೆಯಾದರು. ಈ ಸಿನಿರಂಗದಲ್ಲಿ ಹಂತ ಹಂತವಾಗಿ ಬೆಳೆದು ಸತತ ಪ್ರಯತ್ನದ ಕಷ್ಟದ ಪರಿಶ್ರಮ ಇಂದು ಜಗ್ಗೇಶ್ ಅವರು ತುಂಬಾ ದೊಡ್ಡದಾಗಿ ಬೆಳೆದಿದ್ದಾರೆ ಎನ್ನಬಹುದು. ಮಕ್ಕಳನ್ನು ಕೂಡ ಸಿನಿಮಾರಂಗದಲ್ಲಿ ಯಶಸ್ವಿ ಮಾಡಬೇಕು ಎಂದು ಹೆಚ್ಚು ಕಷ್ಟಪಟ್ಟಿದ್ದಾರೆ ಜಗ್ಗೇಶ್. ಆದರೆ ಅವರೇ ಒಂದು ಬಾರಿ ಹೇಳಿಕೊಂಡಂತೆ ಅವರ ಮಗನ ಜೀವನವನ್ನು ಜಗ್ಗೇಶ್ ಅವರೇ ಹಾಳು ಮಾಡಿದ್ದಾರಂತೆ. ಕಾರಣ ತೆಲುಗು ಮತ್ತು ತಮಿಳು ಚಿತ್ರರಂಗದಿಂದ ದೊಡ್ಡ ದೊಡ್ಡ ಬ್ಯಾನರ್ ಜೊತೆ ನನ್ನ ಮಗ ಗುರುರಾಜ್ ಅವನಿಗೆ ಹೆಚ್ಚು ಸಿನಿಮಾಗಳ ಅವಕಾಶ ಬಂದವು.

ಆದರೆ, ನಾವು ಹುಟ್ಟಿದ್ದು ಇಲ್ಲಿ, ಬೆಳೆದಿದ್ದು ಇಲ್ಲಿ, ನಾವು ತಿನ್ನುವ ಅನ್ನ ಕನ್ನಡದ್ದು, ಏನೇ ಆದರೂ ಕನ್ನಡದಲ್ಲಿಯೇ ಆಗಬೇಕು, ಏನಾದರೂ ಮಾಡಿದರೆ ಇಲ್ಲೇ ಮಾಡಬೇಕು ಎಂಬು ಹೆಚ್ಚು ಬಾರಿ ಅವನನ್ನು ತಡೆದು ಬಿಟ್ಟೆ. ಒಂದು ವೇಳೆ ಅಂದು ನಾನು ಅವನನ್ನ ತಡೆಯದೆ ಇದ್ದಿದ್ದರೆ, ಇಂದು ಅತ್ತ ತಮಿಳು ಅಥವಾ ತೆಲುಗು ಇಂಡಸ್ಟ್ರಿಯಲ್ಲಿ ಒಬ್ಬ ದೊಡ್ಡ ಸ್ಟಾರ್ ನಟ ಆಗಿ ಗುರುತಿಸಿಕೊಳ್ಳುತ್ತಿದ್ದ ಎಂದು ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನನ್ನ ಮಗನ ಜೀವನವನ್ನೇ ನಾನು ಹಾಳು ಮಾದಿದೆ ಎಂದು ಹೇಳಿಕೊಂಡಿದ್ದಾರೆ ಜಗ್ಗೇಶ್ ಅವರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ತಪ್ಪದೆ ಮಾಹಿತಿ ಶೇರ್ ಮಾಡಿ, ಧನ್ಯವಾದಗಳು...