500 ಕೋಳಿ ಕುಯ್ದಿದ್ದ ವಿಚಾರ ಬಿಚ್ಚಿಟ್ಟ ಜಗ್ಗೇಶ್..! ತೋತಾಪುರಿ ನಿರ್ದೇಶಕರ ಬಗ್ಗೆ ಹೇಳಿದ್ದು ಕೇಳಿ
Updated:Friday, April 22, 2022, 17:03[IST]

ಕನ್ನಡ ಬಹುನಿರೀಕ್ಷಿತ ಚಿತ್ರ ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಟ ಜಗ್ಗೇಶ್ ಅವರ ಅಭಿನಯದ ತೋತಾಪುರಿ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ 1.4 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಈ ಸಿನಿಮಾ ಹಾಸ್ಯಭರಿತವಾಗಿ ಮೂಡಿ ಬರುತ್ತಿದ್ದು ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿರುವುದಂತೂ ಸುಳ್ಳಲ್ಲ. ಹೀಗಿರುವಾಗ ನಿನ್ನೆಯಷ್ಟೇ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಕನ್ನಡದ ಕಿಚ್ಚ ಸುದೀಪ್ ಅವರು ಕೂಡ ಆಗಮಿಸಿದ್ದರು. ಹಾಗೆ ಡಾಲಿ ಧನಂಜಯ್, ನಟಿ ಅದಿತಿ ಪ್ರಭುದೇವ್, ನಟ ಜಗ್ಗಣ್ಣ, ಸುಮನ್ ರಂಗನಾಥ್, ದತ್ತಣ್ಣ ಇನ್ನು ಸಾಕಷ್ಟು ಕಲಾವಿದರು ಆಗಮಿಸಿದ್ದರು. ಈ ವೇಳೆ ವೇದಿಕೆಯ ಮೇಲೆ ಸಿನಿಮಾದ ಶೂಟಿಂಗ್ ವಿಚಾರವಾಗಿ ಜಗ್ಗೇಶ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವೇದಿಕೆ ಮುಂಭಾಗದಲ್ಲಿ ಕುಳಿತಿರುವವರ ಮುಖದಲ್ಲಿ ನಗು ತರಿಸಿದ್ರು ಎಂದರೆ ತಪ್ಪಾಗಲಾರದು. ನಟ ಜಗ್ಗೇಶ್ ಅವರು ಸಾಮಾನ್ಯವಾಗಿ ಎಲ್ಲೇ ಹೋದರೂ ಕಾಮಿಡಿ ಮಾಡುತ್ತಾರೆ. ಕೆಲವೊಂದಿಷ್ಟು ವಿಚಾರಗಳನ್ನು ಹೇಳಿ ಅಭಿಮಾನಿಗಳಲ್ಲಿ ನಗು ತರಿಸುತ್ತಾರೆ. ಹೌದು ತೋತಾಪುರಿ ಚಿತ್ರದ ಶೂಟಿಂಗ್ ಮಾಡುವಾಗ ಒಂದು ಸ್ಥಳದಲ್ಲಿ, ಶೂಟ್ ಸರಿಯಾಗಿ ಬರ್ತಿಲ್ಲ ಸಾರ್ ಎಂಬುದಾಗಿ ಹೇಳಿ ನಿರ್ದೇಶಕರು ಪದೇ ಪದೇ ಅದೇ ದೃಶ್ಯ ಟೇಕ್ ತೆಗೆದುಕೊಳ್ಳುವಂತೆ ನಟನೆ ಮಾಡಿಸಿದ್ದರಂತೆ. ಹಾಗೆ ಸೀನಿಯರ್ ಕಲಾವಿದನಾ, ಈಗ ನೋಡು ಹೇಗೆ ಮಾಂಜ ಕೊಡುತ್ತೇನೆಂದು ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಇವರು ಮಾತನಾಡಿಕೊಳ್ಳುತ್ತಿದ್ದರು ಎಂದು ತುಂಬಾ ಕಾಮಿಡಿ ಆಗಿ ಹೇಳಿದ್ದಾರೆ. ಹೋದ ಜನ್ಮದ ಸವತಿ ಆಗಿದ್ದ ಎನ್ನುವಷ್ಟು ನಟ ಜಗ್ಗೇಶ್ ಅವರಿಗೆ ಡೈರೆಕ್ಟರ್ ಕಾಟ ಕೊಟ್ಟಿದ್ದರಂತೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170
ಒಂದು ದೃಶ್ಯಕ್ಕಾಗಿ ಸುಮಾರು ಐದುನೂರು ಕೋಳಿಯನ್ನು ನಿಂತ ಸ್ಥಳದಲ್ಲಿ ಕುಯ್ದಿದ್ರು. ದೃಶ್ಯ ಚೆನ್ನಾಗಿ ಬರುತ್ತಿಲ್ಲ ಎಂದು ಪದೇಪದೇ ಹೇಳಿ ಮಟನ್ ಅಂಗಡಿ ಪಕ್ಕದಲ್ಲಿಯೇ ಶೂಟ್ ತೆಗೆಸಿದ್ದು ಒಟ್ಟು ಐದುನೂರು ಕೋಳಿಯನ್ನು ಕುಯ್ದಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಕೋಳಿ ಕುಯ್ದಿದ್ದ ಕಾರಣ ಈ ವಿಡಿಯೋದಲ್ಲಿ ನೋಡಿ. ಹಾಗೆ ತೋತಾಪುರಿ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿ ಧನ್ಯವಾದಗಳು.. ( video credit : kannada pichhar )