Jaggesh : ಓಪನ್ ಆಗಿ ತಮ್ಮ ಸಂಭಾವನೆಯ ಬಗ್ಗೆ ಮಾತನಾಡಿದ ನಟ ಜಗ್ಗೇಶ್ ಅಬ್ಬಾ ಇಷ್ಟೊಂದ ?

By Infoflick Correspondent

Updated:Wednesday, September 7, 2022, 11:47[IST]

Jaggesh : ಓಪನ್  ಆಗಿ ತಮ್ಮ ಸಂಭಾವನೆಯ ಬಗ್ಗೆ ಮಾತನಾಡಿದ ನಟ ಜಗ್ಗೇಶ್   ಅಬ್ಬಾ ಇಷ್ಟೊಂದ ?

ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ ಚಿತ್ರ ರಿಲೀಸ್ ಗೆ ಸಜ್ಜಾಗಿದೆ. ವಿಜಯ್ ಪ್ರಸಾದ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರ ಎರಡು ಭಾಗಗಳಲ್ಲಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಜಗ್ಗೇಶ್ ಅವರೊಂದಿಗೆ ಅಧಿತಿ ಪ್ರಭುದೇವ, ಡಾಲಿ ಧನಂಜಯ್, ದತ್ತಣ್ಣ ಹಾಗೂ ಸುಮನ್ ರಂಗನಾಥ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಈ ಚಿತ್ರಕ್ಕೆ ನಿರಂಜನ್ ಬಾಬು ಅವರ ಕ್ಯಾಮರಾ ಕೈಚಳಕವಿದೆ. ಸುರೇಶ್ ಅರಸ್ ಅವರ ಸಂಕಲನವಿದ್ದು, ಇನ್ನು ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಕೇರಳ, ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಈ ಚಿತ್ರದ ರಿಲೀಸ್ ಕುರಿತು ನಿನ್ನೆ ಪ್ರೆಸ್ ಮೀಟ್ ನಡೆಸಲಾಯ್ತು. ಈ ವೇಳೆ, ಮಾತನಾಡಿದ ನಟ ಜಗ್ಗೇಶ್ ಅವರು ತಮ್ಮ ಸಂಭಾವನೆ ಬಗ್ಗೆ ನೇರವಾಗಿ ಹೇಳಿದ್ದಾರೆ. ನನ್ನ ಸಂಭಾವನೆ ವಿಚಾರದಲ್ಲಿ ಮುಚ್ಚು ಮರೆ ಏನೂ ಇಲ್ಲ. ನಾನು ಚಿತ್ರರಂಗಕ್ಕೆ ಬಂದಾಗ ತುಂಬಾ ಕಷ್ಟ ಪಟ್ಟಿದ್ದೀನಿ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಪರದಾಡಿದ ದಿನಗಳೂ ಇವೆ. ಅದು ಈಗ ಸಂಪೂರ್ಣವಾಗಿ ಬದಲಾಗಿದೆ. ಈಗ ಮೊದಲಿನಷ್ಟು ಕಷ್ಟವಿಲ್ಲ. ಎಲ್ಲವೂ ಸುಲಭವಾಗಿ ಕೈಗೆಟಕುತ್ತದೆ.   

ಇನ್ನು ನಾನು ಒಂದು ಸಿನಿಮಾಗಾಗಿ ಎರಡು ಕೋಟಿ ಸಂಭಾವನೆಯನ್ನು ಪಡೆಯುತ್ತೇನೆ. ಇನ್ನು ಟಿವಿಯವರು ನನಗೆ ಮೂರು ಕೋಟಿ ರೂ ಸಂಭಾವನೆಯನ್ನು ನೀಡುತ್ತಾರೆ. ನನಗೆ ಇರುವ ಸಂಸಾರಕ್ಕೆ ಇಷ್ಟು ಸಾಕಾಗುತ್ತದೆ. ನನ್ನ ಹೆಂಡತಿ, ಹಾಗೂ ಇಬ್ಬರು ಮಕ್ಕಳನ್ನು ಈ ಹಣದಿಂದ ಸುಖವಾಗಿ ನೋಡಿಕೊಳ್ಳುತ್ತೇನೆ. ಆ ದೇವರನ್ನು ನಂಬಿ ಬದುಕುತ್ತಿರುವ ನಾನು ಆತ ಇಟ್ಟಂತೆ ಇದ್ದೇವೆ ಎಂದೂ ಎಳ್ಳಷ್ಟೂ ಹೆದರದೆ  ಬಹಿರಂಗವಾಗಿ ಹೇಳಿಕೊಂಡಿದ್ದಾರೆ.