Jaggesh : ವೇದಿಕೆ ಮೇಲೆ ದರ್ಶನ್ ಗೆ ಚಪ್ಪಲಿ ತೋರಿಸಿದ್ದ ಜಗ್ಗೇಶ್.. ಕಾರಣ ಕೇಳಿದರೆ ಶಾಕ್ ಆಗ್ತೀರಾ ?

By Infoflick Correspondent

Updated:Tuesday, August 16, 2022, 13:14[IST]

Jaggesh :  ವೇದಿಕೆ ಮೇಲೆ ದರ್ಶನ್ ಗೆ ಚಪ್ಪಲಿ ತೋರಿಸಿದ್ದ ಜಗ್ಗೇಶ್..  ಕಾರಣ ಕೇಳಿದರೆ ಶಾಕ್ ಆಗ್ತೀರಾ ?

ಪ್ರೀಮಿಯರ್ ಪದ್ಮಿನಿ 2019 ರ ಭಾರತೀಯ ಕನ್ನಡ ಭಾಷೆಯ ಹಾಸ್ಯ ನಾಟಕ ಚಿತ್ರವಾಗಿದ್ದು, ರಮೇಶ್ ಇಂದಿರಾ ಅವರು ಈ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದಾರೆ.  ಈ ಚಿತ್ರವು ದೂರದರ್ಶನದ ವ್ಯಕ್ತಿತ್ವದ ಚೊಚ್ಚಲ ಚಿತ್ರವಾಗಿದೆ. ಶ್ರುತಿ ನಾಯ್ಡು ಅವರು ತಮ್ಮ ಹೋಮ್ ಬ್ಯಾನರ್ ಮೂಲಕ ಶ್ರುತಿ ನಾಯ್ಡು ಚಿತ್ರ ಅಡಿಯಲ್ಲಿ ನಿರ್ಮಾಪಕಿಯಾಗಿದ್ದಾರೆ. ಚಿತ್ರದಲ್ಲಿ ಜಗ್ಗೇಶ್, ಮಧು, ಸುಧಾರಾಣಿ, ಹಿತ  ಚಂದ್ರಶೇಖರ್ ಮತ್ತು ವಿವೇಕ್ ಸಿಂಹ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ಹೆಚ್ ಜಿ ದತ್ತಾತ್ರೇಯ, ಭಾರ್ಗವಿ ನಾರಾಯಣ್ ಮತ್ತು ಪ್ರಮೋದ್ ಇದ್ದಾರೆ..

ಹೌದು ಪ್ರಿಮಿಯರ್ ಪದ್ಮಿನಿ ಚಿತ್ರದ ಪ್ರೀ ರಿಲಿಸ್ ಇವೆಂಟ್ ಅಂದು ನಡೆದಿತ್ತು. ಆ ಕಾರ್ಯಕ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಆಗಮಿಸಿದ್ದರು. ವೇದಿಕೆ ಮೇಲೆ ಜಗ್ಗೇಶ್ ಚಿತ್ರದ ಬಗ್ಗೆ ಮಾತನಾಡಿ ಪ್ರಮೋದ್ ಅವರ ಬಗ್ಗೆ ಸಾಕಷ್ಟು ಹೇಳಿದರು. ಪ್ರಮೋದ್ ಒಬ್ಬ ಪ್ರತಿಭಾವಂತ ಕಲಾವಿದ. ಒಳ್ಳೆಯ ನಟ ಕೂಡ ಹೌದು, ಅವರ ಒಂದು ಈ ಪ್ರಿಮಿಯರ್ ಪದ್ಮಿನಿ ದೃಶ್ಯ ನನ್ನ ಕಣ್ಣಲ್ಲಿ ನೀರು ತರಿಸಿತ್ತು. ಡಬ್ಬಿಂಗ್ ಮಾಡುವಾಗ ನಾನು ಭಾವುಕನಾದೆ ಎಂದು ನಟ ಜಗ್ಗೇಶ್ ಅವರು ಸಿನಿಮಾದ ಬಗ್ಗೆ ಮತ್ತು ಯುವ ಕಲಾವಿದ ಪ್ರಮೋದ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು. ಹೌದು ಅದೇ ವೇದಿಕೆ ಮೇಲೆ ದರ್ಶನ್ ಅವರು ಕೂಡ ಕಾಣಿಸಿದ್ದು ಆಗ ಅವರ ಬಗ್ಗೆ ಮಾತನಾಡಿದ ಜಗ್ಗೇಶ್, ದರ್ಶನ್ ಅವರ ಬಗ್ಗೆ ನಾವು ಏನು ಹೇಳಲೇ ಬೇಕಿಲ್ಲ.   

ಅವರು ಡೌನ್ ಟು ಅರ್ತ್ , ತಮಗೆ ದರ್ಶನ್ ಅವರ ಹೈಟ್ ನೋಡಿದಾಗಲೆಲ್ಲ ಹೆಚ್ಚು ಜೇಲಸ್ ಆಗುತ್ತದೆ. ಅವರ ಎತ್ತರ ನೋಡಿ ನಾನು ಎಷ್ಟೋ ಬಾರಿ ಹೊಟ್ಟೆಕಿಚ್ಚು ಪಟ್ಟು ಕೊಂಡಿದ್ದೇನೆ ಎಂದರು. ಹಾಗೆ ದರ್ಶನ್ ಬರುತ್ತಿದ್ದಾರೆ ಎಂದು ನಾನು ಸ್ಪೆಷಲ್ ಚಪ್ಪಲಿ ಹಾಕಿಕೊಂಡು ಬಂದಿದ್ದೇನೆ ಎಂದು ತೋರಿಸಿದರು. ಹೌದು ನಟ ದರ್ಶನ್ ಅವರಿಗೆ ಹೇಳುತ್ತಾ ನೀನು ಬರುತ್ತೀಯ ಅಂದ ತಕ್ಷಣ ನಾನು ಸ್ಪೆಷಲ್ ಚಪ್ಪಲಿ ಹಾಕಿಕೊಂಡು ಬಂದಿದ್ದೇನೆ ನೋಡು ಕಣಪ್ಪ ಎಂದು ಅವರಿಗೆ ಜಗ್ಗೇಶ್ ಹೇಳಿದ್ದಾರೆ. ಅದರ ವಿಡಿಯೋ ತುಣುಕು ಕೂಡ ಎಲ್ಲಿದೆ ವೈರಲ್ ಆಗಿತ್ತು. ಅದರ ಒಳಾರ್ಥ ಏನೋ ಕೆಟ್ಟದ್ದು ಆಗಿರಲಿಲ್ಲ, ಕೇವಲ ಅವರ ಬಗ್ಗೆ ಇರುವ ಗೌರವ ಮತ್ತು ಅವರ ನಟನೆ ಬಗ್ಗೆ ಹಾಗೂ ಎತ್ತರದ ಪರ್ಸನಾಲಿಟಿ ಬಗ್ಗೆ ಇರುವ ಕಾಳಜಿ ಕುರಿತು ಜಗ್ಗೇಶ್ ಅವರು ಹಾಗೆ ಮಾತನಾಡಿದರು ಅಷ್ಟೇ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...