ಜಗ್ಗೇಶ್ ಅವರ ಈ ವರ್ಕ್ಔಟ್ ನೋಡಿದರೆ ನೀವೂ ದಂಗಾಗ್ತಿರ..! ಅಸಲಿ ಕಾರಣ ಬೇರೆಯೇ ಇದೆ..?

By Infoflick Correspondent

Updated:Wednesday, April 6, 2022, 12:14[IST]

ಜಗ್ಗೇಶ್ ಅವರ ಈ ವರ್ಕ್ಔಟ್ ನೋಡಿದರೆ ನೀವೂ ದಂಗಾಗ್ತಿರ..! ಅಸಲಿ ಕಾರಣ ಬೇರೆಯೇ ಇದೆ..?

   

ಸ್ಯಾಂಡಲ್ವುಡ್ನ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟಿವ್ ಇರುತ್ತಾರೆ. ಸದಾ ಒಂದಿಲ್ಲೊಂದು ವಿಚಾರಗಳಿಗೆ ಹೆಚ್ಚು ಸುದ್ದಿ ಆಗುವ ಜಗ್ಗೇಶ್ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು ಅಭಿಮಾನಿಗಳ ಜೊತೆ ಕೆಲ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಜಗ್ಗಣ್ಣ ಇದೀಗ ಅವರ ವರ್ಕೌಟ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಕೂಡ ಬಲಿಷ್ಠವಾಗಿದೆ ಎನ್ನಲಾಗಿದೆ. ನಟ ಜಗ್ಗಣ್ಣ ಅವರ ಈ ಸಕ್ಕತ್ ವರ್ಕೌಟ್ ವಿಡಿಯೋ ನೋಡಿ ನೆಟ್ಟಿಗರು ಬೆರಗಾಗಿದ್ದು ಅಭಿಮಾನಿಗಳು ಇನ್ನೊಂದು ಮದುವೆ ಮಾಡಿಕೊಳ್ಳುತ್ತೀರಿಯೇನೋ ಎಂದು ಕಾಣಿಸುತ್ತೆ ಜಗ್ಗಣ್ಣ ಎಂದು ಹೇಳುತ್ತಿದ್ದಾರೆ.

ಹೌದು ಜಗ್ಗೇಶ್ ಅವರು ಸಕ್ಕತ್ ವರ್ಕೌಟ್ ವಿಡಿಯೋ ಶೇರ್ ಮಾಡಿ ಕೆಲವೊಂದಿಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ ಅವರ ಮಾತು ಕೇಳಿದರೆ ಎಲ್ಲ ನಿಜಕ್ಕೂ ಸತ್ಯ ಎನ್ನಿಸುತ್ತದೆ. ಅಷ್ಟಕ್ಕೂ ಜಗ್ಗಣ್ಣ ಹೇಳಿದ್ದೇನು ಗೊತ್ತಾ ಮುಂದೆ ಓದಿ. 'ನನ್ನ ಅನೇಕ ಸ್ನೇಹಿತರು ಅವರ ಕಾರ್ಯಕ್ಷೇತ್ರದಿಂದ ನಿವೃತ್ತಿ ಆಗಿ ಒಂದು ವರ್ಷ ಆಗಿದೆ, 59 ವರ್ಷಕ್ಕೆ ಅವರವರ ಮಕ್ಕಳು ಅವರವರ ಕಾರ್ಯ ಅವರವರ ಮಕ್ಕಳು ಸಂಸಾರ ಎಂದು ಪಕ್ಕ ಸರಿದು ಬದುಕುತ್ತಿದ್ದಾರೆ ಅದು ಜಗತ್ತಿನ ನಿಯಮ. ಇಷ್ಟಕ್ಕೆ ಜಗತ್ತು ಶೂನ್ಯವಾದಂತೆ 59ನೆ ವಯಸ್ಸಿಗೆ ಮಾನಸಿಕ ಒತ್ತಡದಿಂದ ಬಳಲಿ, ಬಿಪಿ ಡಯಾಬಿಟಿಸ್ ಕಾಯಿಲೆಯನ್ನು ಬರಮಾಡಿಕೊಂಡು ನರಳುತ್ತಿದ್ದಾರೆ...

ಅನೇಕ ಸ್ನೇಹಿತರು ಬಂದುಗಳು ಮರಣಹೊಂದಿದ್ದಾರೆ, ಇದ ನೋಡಿದಾಗ ಕೇಳಿದಾಗ ದುಃಖವಾಗುತ್ತದೆ, ನನ್ನ ಅನಿಸಿಕೆ ಒಪ್ಪುವರಿಗೆ ಪ್ರೀತಿಯಿಂದ ಒಂದು ಕಿವಿಮಾತು. ಬರುವಾಗ ಒಬ್ಬರೆ, ಹೋಗುವಾಗು ಒಬ್ಬರೆ, ಮತ್ತೆ ಈ ಜಗತ್ತಿಗೆ ಬರುತ್ತೇವೋ ಇಲ್ಲವೊ ಗೊತ್ತಿಲ್ಲ. ಆದರೆ ಇರುವಾಗ ಇಲ್ಲದರ ಬಗ್ಗೆ ದುಃಖಿಸಿ ಕೊರಗಿ ರೋಗ ಆಹ್ವಾನಿಸಿ ಬದುಕುವ ಬದಲು ಕೆಲಸಕ್ಕೆ ಬರದ ಚಿಂತೆಗೆ ಜಾಗ ಕೊಡದೆ ಇದ್ದಿದ್ದರಲ್ಲಿ ಸುಖಿಸಿ ರಮಿಸಿ ಆನಂದಿಸಿ ದೇಹಾರೋಗ್ಯ ರಕ್ಷಿಸಿಕೊಂಡು ನಗುತ್ತ ನಗಿಸುತ್ತ ನಾಳೆಗಳಿಗೆ ನಾಳೆ ಬಾ ಎಂದು ಯಾಮಾರಿಸಿ ಸಂತೋಷದಿಂದ ಬದುಕು ಮುಗಿಸಬೇಕು ಅಲ್ಲವೆ..? ಅದೇ ನನ್ನ ನಿಯಮ. ಅದೇ ಎಲ್ಲದಕ್ಕೂ ಪರಿಹಾರ. ಶುಭರಾತ್ರಿ' ಎಂದು ಬರೆದುಕೊಂಡಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಕಾಮೆಂಟ್ ಮಾಡಿ..ನನ್ನ ಅನೇಕ ಸ್ನೇಹಿತರು ಅವರ ಕಾರ್ಯಕ್ಷೇತ್ರದಿಂದ ನಿವೃತ್ತಿಯಾಗಿ 1ವರ್ಷ ಆಗಿದೆ..!!
59 ವರ್ಷಕ್ಕೆ ಅವರವರ ಮಕ್ಕಳು ಅವರವರ ಕಾರ್ಯ ಅವರವರ ಮಕ್ಕಳು ಸಂಸಾರ ಎಂದು ಪಕ್ಕ ಸರಿದು ಬದುಕುತ್ತಿದ್ದಾರೆ ಅದು ಜಗತ್ತಿನ ನಿಯಮ🤣ಇಷ್ಟಕ್ಕೆ ಜಗತ್ತು ಶೂನ್ಯವಾದಂತೆ 59ನೆ ವಯಸ್ಸಿಗೆ ಮಾನಸಿಕ ಒತ್ತಡದಿಂದ ಬಳಲಿ
#bp #diabetes ಬರಮಾಡಿಕೊಂಡು ನರಳುತ್ತಿದ್ದಾರೆ...ಅನೇಕ ಸ್ನೇಹಿತರು ಬಂದುಗಳು ಮರಣಹೊಂದಿದ್ದಾರೆ..!!ಇದ ನೋಡಿದಾಗ ಕೇಳಿದಾಗ ದುಃಖವಾಗುತ್ತದೆ...
ನನ್ನ ಅನಿಸಿಕೆ ಒಪ್ಪುವರಿಗೆ ಪ್ರೀತಿಯಿಂದ ಒಂದು ಕಿವಿಮಾತು ಬರುವಾಗ ಒಬ್ಬರೆ..ಹೋಗುವಾಗು ಒಬ್ಬರೆ..
ಮತ್ತೆ ಈ ಜಗತ್ತಿಗೆ ಬರುತ್ತೇವೋ ಇಲ್ಲವೊ ಗೊತ್ತಿಲ್ಲ ಆದರೆ ಇರುವಾಗ ಇಲ್ಲದರ ಬಗ್ಗೆ ದುಃಖಿಸಿ ಕೊರಗಿ ರೋಗ ಆಹ್ವಾನಿಸಿ ಬದುಕುವ ಬದಲು ಕೆಲಸಕ್ಕೆ ಬರದ ಚಿಂತೆಗೆ ಜಾಗ ಕೊಡದೆ ಇದ್ದಿದ್ದರಲ್ಲಿ ಸುಖಿಸಿ ರಮಿಸಿ ಆನಂದಿಸಿ ದೇಹಾರೋಗ್ಯ ರಕ್ಷಿಸಿಕೊಂಡು ನಗುತ್ತ ನಗಿಸುತ್ತ ನಾಳೆಗಳಿಗೆ ನಾಳೆ ಬಾ ಎಂದು ಯಾಮಾರಿಸಿ ಸಂತೋಷದಿಂದ ಬದುಕು ಮುಗಿಸಬೇಕು😜ಅಲ್ಲವೆ?