ವೀಡಿಯೋ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಬೆಲ್ಲಿ ಡ್ಯಾನ್ಸ್! ವಿಡಿಯೋ ನೋಡಿ

Updated: Thursday, January 14, 2021, 11:25 [IST]

ವೀಡಿಯೋ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಬೆಲ್ಲಿ ಡ್ಯಾನ್ಸ್!

 

Advertisement

ಇತ್ತೀಚೆಗಷ್ಟೇ 39 ಕೋಟಿ ಮೌಲ್ಯದ ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ಖರೀದಿಸಿ ಭಾರೀ ಸುದ್ದಿಯಾಗಿದ್ದ ನಟಿ ಜಾಹ್ನವಿ ಕಪೂರ್ ಇದೀಗ ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

 

Advertisement

ಹೌದು. ಈಗಾಗಲೇ ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಜಾಹ್ನವಿ ಇದೀಗ ಬೆಲ್ಲಿ ಡ್ಯಾನ್ಸ್ ಮಾಡಿರುವ ಮೂಲಕ ಸುದ್ದಿಯಾಗಿದ್ದಾರೆ. ನಟಿ ಕರೀನಾ ಕಪೂರ್ ಅಭಿನಯದ ಅಶೋಕ ಸಿನಿಮಾದ ಸನ್.. ಸನನ್ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಅದರ ವೀಡಿಯೋವನ್ನು ನಟಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಿಳಿ ಬಣ್ಣದ ಪೈಜಾಮಾ ಹಾಗೂ ಕ್ರಾಪ್ ಟಾಪ್ ಧರಿಸಿ ಜಾಹ್ನವಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಜಾಹ್ನವಿ ಈ ಡ್ಯಾನ್ಸ್ ಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.ಜಾಹ್ನವಿ ತಾಯಿ ಶ್ರೀದೇವಿ ಅವರು ಅಧ್ಬುತ ನೃತ್ಯಗಾರ್ತಿ ಎಂಬ ವಿಚಾರ ಎಲ್ಲರಿಗೂ ತಿಳೀದಿದೆ. ಇದೀಗ ಮಗಳು ಕೂಡ ತಾಯಿಯ ನೃತ್ಯ ಕೌಶಲ್ಯಗಳನ್ನು ಬಳುವಳಿಯಾಗಿ ಪಡೆದ ರೀತಿ ಜಾಹ್ನವಿ ನೃತ್ಯ ಮಾಡಿ ಸೈ ಎನಿಸಿದ್ದಾರೆ.