ಗಲ್ಲಾಪೆಟ್ಟಿಯಲ್ಲಿ ಗುಲ್ಲೆಬ್ಬಿಸಿದ  ಜೇಮ್ಸ್ ಒಂದೇ ದಿನದಲ್ಲಿ ಜೇಮ್ಸ್ ಕಲೆಕ್ಷನ್ ಎಷ್ಟು ಗೊತ್ತೆ?

By Infoflick Correspondent

Updated:Thursday, March 17, 2022, 21:42[IST]

ಗಲ್ಲಾಪೆಟ್ಟಿಯಲ್ಲಿ ಗುಲ್ಲೆಬ್ಬಿಸಿದ  ಜೇಮ್ಸ್  ಒಂದೇ ದಿನದಲ್ಲಿ ಜೇಮ್ಸ್ ಕಲೆಕ್ಷನ್ ಎಷ್ಟು ಗೊತ್ತೆ?

'ಜೇಮ್ಸ್' ಸಿನಿಮಾ ರಿಲೀಸ್ ಒಂದು ದಾಖಲೆ ಎನ್ನಬಹುದು‌ ಏಕೆಂದರೆ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದೆ ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ಎಂದೂ ಯಾವ ಸಿನಿಮಾವೂ ಮಾಡದ ದಾಖಲೆ ಮಾಡಿದೆ. ಸಿನಿಮಾ ನೋಡಿದ ಅಭಿಮಾನಿಗಳು ಭಾವುಕರಾಗಿ ಹೊರ ಬರುತ್ತಿದ್ದಾರೆ. ಎಲ್ಲೆಡೆ ಜೇಮ್ಸ್ ಮಯ ವಾಗಿದೆ.ವಿದೇಶಗಳಲ್ಲಿ ಸೇರಿ 4000 ಸಾವಿರ ಶೋಗಳು ನಡೆದಿದೆ ! 

ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್​ ನಿಲ್ಲಿಸಿ ಹಬ್ಬದ ರೀತಿಯಲ್ಲಿ ಬರ್ತ್​ಡೇ ಆಚರಿಸಲಾಗಿದೆ. ಎಲ್ಲ ಕಡೆಗಳಲ್ಲೂ 'ಜೇಮ್ಸ್​' ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ಸಿಗದೆ ಜನ ಪರದಾಡುತ್ತಿದ್ದಾರೆ. ಒಂದೇ ದಿನಕ್ಕೆ ಚಿತ್ರದ ಕಲೆಕ್ಷನ್ ಎಷ್ಟು ಎಂದು ಎಣಿಸುವುದು ಕಷ್ಟವಾಗಿದೆ. ಅಭಿಮಾನಿಗಳ ಪ್ರೀತಿ, ಸಿನಿಮಾ ನೋಡಲು ಜನರು ಮುಗಿಬೀಳುವ ರೀತಿ, ಕಲೆಕ್ಷನ್ ಲೆಕ್ಕಾಚಾರವನ್ನೂ ದಿಕ್ಕು ತಪ್ಪಿಸಿದೆ. ಅಂದಾಜಿನ ಲೆಕ್ಕಾಚಾರದ ಪ್ರಕಾರ ಹೇಳುವುದಾದರೆ ಒಂದೇ ದಿನದಲ್ಲಿ ಜೇಮ್ಸ್ ಕಲೆಕ್ಷನ್ ಹೀಗಿದೆ ನೋಡಿ     

ಒಂದು ಮಾಲ್ ನಲ್ಲಿ ಒಂದು ದಿನ 416 ಪ್ರದರ್ಶನಗಳು ಆಗಿದೆ.‌ ಅಂದಾಜು ಲೆಕ್ಕದ ಪ್ರಕಾರ,  ಬೆಂಗಳೂರಿನಲ್ಲಿಯೇ ಒಂದು ದಿನದ ಕಲೆಕ್ಷನ್ ಎಂಟು ಕೋಟಿ ಐವತ್ತಾರು ಲಕ್ಷಕ್ಕೂ ಹೆಚ್ಚು ಆಗಿದೆ. ಇನ್ನು ಈಡೀ ಕರ್ನಾಟಕ ಮತ್ತು ವಿಶ್ವದಲ್ಲಿ ಲೆಕ್ಕಾಚಾರ ಮಾಡಿದರೆ ಹೊಸ ದಾಖಲೆಯನ್ನೇ ಸೃಷ್ಟಿಸುತ್ತದೆ ಜೇಮ್ಸ್ . ಹೊರದೇಶಗಳಲ್ಲಂತೂ ಡಾಲರ್ ಲೆಕ್ಕದಲ್ಲಿ ಬಾಕ್ಸ್ ಆಫೀಸ್ ತುಂಬಿಸಿದೆ ಜೇಮ್ಸ್ ! ಇವತ್ತು ಒಂದೇ ದಿನಕ್ಕೆ 25 ರಿಂದ 30 ಕೋಟಿ ಕಲೆಕ್ಷನ್ ಎಂದು ಹೇಳಲಾಗುತ್ತಿದೆ 

ಪ್ರಪಂಚದಾದ್ಯಂತ 40 ಕೋಟಿ ಕಲೆಕ್ಷನ್ ಆಗಿರಬಹುದು ಎಂಬ ಲೆಕ್ಕಾಚಾರ ಜನರೂ ಊಹಿಸಿದ್ದಾರೆ. ಎಷ್ಟೋ ಜನರು ತಮ್ಮ ತಮ್ಮ ಕೆಲಸ ಕಾರ್ಯಕ್ಕೆ ಅಘೋಷಿತ ರಜೆಯನ್ನ ಹಾಕಿದ್ದಾರೆ.ಹೊರದೇಶದಲ್ಲಿ ಲೆಕ್ಕ ಹಾಕಿದರೆ ಗಳಿಕೆ 18 ಕೋಟಿ ಗೂ ಹೆಚ್ಚು ಕಲೆಕ್ಷನ್ ಆಗಿದೆ‌.  ಇದೇ ಟ್ರೆಂಡ್ ಮುಂದುವರಿದರೆ ಭಾನುವಾರದ ವರೆಗೆ ಒಟ್ಟಾರೆ 80 ಕೋಟಿಗೂ ಹೆಚ್ಚು ಕಲೆಕ್ಷನ್ ಆಗುತ್ತದೆ.