ಪುನೀತ್ ಅಭಿಮಾನಿಗಳ ಕಿವಿಗೆ ಸಿಹಿ ಸುದ್ದಿ; ಮತ್ತೆ ಕೇಳಲಿದೆ ಅಪ್ಪು ಧ್ವನಿ

By Infoflick Correspondent

Updated:Monday, April 18, 2022, 08:26[IST]

ಪುನೀತ್ ಅಭಿಮಾನಿಗಳ ಕಿವಿಗೆ ಸಿಹಿ ಸುದ್ದಿ; ಮತ್ತೆ ಕೇಳಲಿದೆ ಅಪ್ಪು ಧ್ವನಿ

ಈಗಾಗಲೇ ತೆರೆಕಂಡು, ಯಶಸ್ವಿ ಪ್ರದರ್ಶನವಾದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಂದನವನದಲ್ಲಿ ದಾಖಲೆ ಬರೆದು ಓಟಿಟಿಗೆ ಬಂದಿದೆ. ಆದರೆ ಹೊಸ ಸುದ್ದಿ ಎಂದರೆ ಈಗ ಮತ್ತೆ ಜೇಮ್ಸ್ ತೆರೆಕಾಣಲಿದೆ‌ ವಿಶೇಷವಾಗಿ.  ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಸಿನಿಮಾ ಜೇಮ್ಸ್ ನಲ್ಲಿ ಪುನೀತ್ ಧ್ವನಿಯನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದರು. ಶಿವರಾಜ್ ಕುಮಾರ್ ಧ್ವನಿ ನೀಡಿದ್ದರು, ಆದರೆ ಈಗ ಜೇಮ್ಸ್ ಸಿನಿಮಾದಲ್ಲಿ ಅಪ್ಪು ಧ್ವನಿಯನ್ನೇ ಅಳವಡಿಸಿಕೊಂಡು ಅಪ್ಪು ಧ್ವನಿಯನ್ನು ಕೇಳಿಸಿ ಕೊಳ್ಳುವುದಕ್ಕೆ ಅವಕಾಶ ಮಾಡಿದೆ. ಬೇಸರದಲ್ಲಿದ್ದ ಅಭಿಮಾನಿಗಳಿಗೆ ಜೇಮ್ಸ್ ತಂಡ ಗುಡ್ ನ್ಯೂಸ್ ಕೊಟ್ಟಿದೆ. 

ಅಪ್ಪು ಧ್ವನಿ ಮರುಸೃಷ್ಟಿಸಿದ ಹೈದರಾಬಾದ್ ಸೌಂಡ್ ಎಂಜಿನಿಯರ್, ಏಪ್ರಿಲ್ 22ರಿಂದ ಪುನೀತ್ ಧ್ವನಿಯಲ್ಲೇ ಚಿತ್ರ ಪ್ರದರ್ಶನಕ್ಕೆ, ಚಿತ್ರತಂಡ ಮುಂದಾಗಿದೆ.  ಸೌಂಡ್ ಇಂಜಿನಿಯರ್ ಶ್ರೀನಿವಾಸ್ ರಾವ್, ಕೊನೆಗೂ ಜೇಮ್ಸ್ ಚಿತ್ರದಲ್ಲಿ ಪುನೀತ್ ಅವರ ಧ್ವನಿಯನ್ನು ರೀ ಕ್ರಿಯೇಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ತಿಂಗಳ ಕಾಲ ಸತತವಾಗಿ ಹಗಲು, ರಾತ್ರಿ ಪ್ರಯತ್ನಪಟ್ಟ ನಂತರ ಅಪ್ಪು ಅವರ ವಾಯ್ಸ್‌ ರೀ ಕ್ರಿಯೇಟ್‌ ಮಾಡಿದ್ದಾರೆ.‌  

15 ಗಂಟೆಗಳ ಕಾಲ ಒಬ್ಬ ನಟನ ಧ್ವನಿ ಸಿಕ್ಕರೇ, ಅದನ್ನು ಇಟ್ಟುಕೊಂಡು ಅವರ ಪಾತ್ರಕ್ಕೆ ಆ ಧ್ವನಿಯನ್ನು ಜೋಡಿಸುವ ಕೆಲಸ ಮಾಡುತ್ತಾರೆ. ಅಪ್ಪು ಅವರ ಹಿಂದಿನ ಚಿತ್ರಗಳ ಹಾಗೂ ಕನ್ನಡದ ಕೋಟ್ಯಾಧಿಪತಿಯಲ್ಲಿ ಅವರು ಮಾತನಾಡಿದ್ದು ಸೇರಿ 15 ಗಂಟೆ ಅವಧಿಯ ಧ್ವನಿಯನ್ನು ಪಡೆದು, 16 ಮಂದಿ ತಂಡ ಸೇರಿ, ಇದೀಗ ಪುನೀತ್ ಧ್ವನಿಯನ್ನು ಡಬ್ ಮಾಡಲು ಯಶಸ್ವಿಯಾಗಿದ್ದಾರೆ. 

ಇಂತಹದ್ದೊಂದು ತಂತ್ರಜ್ಞಾನ ವಿಶ್ವದಲ್ಲೇ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗುತ್ತಿದೆ. ಜೇಮ್ಸ್ ಬಿಡುಗಡೆ ಸಂದರ್ಭದಲ್ಲಿ ಇನ್ನೂ ಈ ತಂತ್ರಜ್ಞಾನ ರಿಸರ್ಚ್ ಹಂತದಲ್ಲಿತ್ತು. ಆದರೆ ಈಗ ಈ ತಜ್ಞರ ತಂಡ ಪ್ರಭಾಸ್ ಅಭಿನಯದ ಆದಿ ಪುರುಷ್ ಸಿನಿಮಾಗಾಗಿ ಕೆಲಸ ಮಾಡುತ್ತಿದೆ. ಆದರೆ ಪುನೀತ್ ಗಾಗಿ ಆದಿ ಪುರುಷ್ ಸಿನಿಮಾವನ್ನು ಅರ್ಧಕ್ಕೇ ಬಿಟ್ಟು ಜೇಮ್ಸ್ ಗಾಗಿ ಕೆಲಸ ಮಾಡಿದೆ. ಚಿತ್ರತಂಡದ ಈ ಹೊಸ ಪ್ರಯತ್ನದಿಂದ ಪುನೀತ್ ಕುಟುಂಬಸ್ಥರೂ ಖುಷಿಯಾಗಿದ್ದಾರಂತೆ. 

ಇದೀಗ ಅಪ್ಪು ಅವರ ಮೂಲ ಧ್ವನಿಯಲ್ಲೇ 'ಜೇಮ್ಸ್‌' ಸಿನಿಮಾ ರೀ ರಿಲೀಸ್‌ ಆಗಲು ಸಜ್ಜಾಗಿದೆ. ಏಪ್ರಿಲ್‌ 22ಕ್ಕೆ ಜೇಮ್ಸ್‌ ಸಿನಿಮಾ ಅಪ್ಪು ಅವರ ಧ್ವನಿಯಲ್ಲೇ ರೀ ರಿಲೀಸ್‌ ಆಗಲಿದೆ. ಹೀಗಾಗಿ ಮತ್ತೊಮ್ಮೆ 'ಜೇಮ್ಸ್‌' ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಿನಿಮಾ ಹೇಗಿರಲಿದೆ, ಧ್ವನಿ ಹೇಗೆ ಕೇಳಿಸಿದೆ ಎಂಬ ಸಣ್ಣ ಝಲಕ್ ಇಲ್ಲಿದೆ ನೋಡಿ.