ಜೇಮ್ಸ್' ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಹೇಗೆ ಸಿದ್ಧತೆ  ನಡೆದಿದೆ ಗೊತ್ತ, ಇಲ್ಲಿದೆ ಹಲವಾರು ವಿಶೇಷತೆಗಳು ! ; ಜಗತ್ತಿನಲ್ಲೇ ಇದು ಅದ್ಬುತ

By Infoflick Correspondent

Updated:Sunday, March 13, 2022, 11:27[IST]

ಜೇಮ್ಸ್' ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಹೇಗೆ ಸಿದ್ಧತೆ  ನಡೆದಿದೆ ಗೊತ್ತ, ಇಲ್ಲಿದೆ ಹಲವಾರು ವಿಶೇಷತೆಗಳು ! ; ಜಗತ್ತಿನಲ್ಲೇ ಇದು ಅದ್ಬುತ

ಅಪ್ಪು  (Puneeth Rajkumar) ಅಭಿನಯದ ಕೊನೆಯ ಸಿನಿಮಾ ಆಗಿರುವುದರಿಂದ ಈ ಚಿತ್ರದ ಮೇಲೆ ಪುನೀತ್ ಅಭಿಮಾನಿಗಳಿಗಷ್ಟೇ  ಅಲ್ಲದೆ ಎಲ್ಲಾ ಕನ್ನಡಿಗರಿಗೂ ಪ್ರೀತಿ, ಅಭಿಮಾನಗಳಿದ್ದು ಸಾಕಷ್ಟು ನಿರೀಕ್ಷೆಗಳು ಇವೆ. ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆಮಾಡಲು ಅಭಿಮಾನಿಗಳು, ಸಿನಿಮಾ ರಂಗದವರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.  

ಮಾರ್ಚ್​ 13 ಭಾನುವಾರದಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿ (ಅರಮನೆ ಮೈದಾನ) ರಾತ್ರಿ 7ಗಂಟೆಗೆ ಭರ್ಜರಿಯಾಗಿ 'ಜೇಮ್ಸ್' ಪ್ರೀ-ರಿಲೀಸ್ ​ (James Pre release event ) ಇವೆಂಟ್ ಕಾರ್ಯಕ್ರಮ ನಡೆಯುತ್ತಿದೆ. ಅಭಿಮಾನಿಗಳೇ ದೇವರು ಎನ್ನುವ ದೊಡ್ಡಮನೆಯ ಹುಡಗನ ಸಿನಿಮಾ ಇದಾದ್ದರಿಂದ ಕಾರ್ಯಕ್ರಮಕ್ಕೆ ಯಾವುದೇ ಪಾಸ್ ಅಗತ್ಯವಿಲ್ಲ. ಸರ್ವರಿಗೂ ಸ್ವಾಗತ ಎಂದಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಪ್ಪು ಪತ್ನಿ ಅಶ್ವಿನಿ , (Aswini Puneeth ) ಪುನೀತ್​ ಸಹೋದರರಾದ ಶಿವರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ದೊಡ್ಮನೆ ಹಾಗು ಸಿನಿಮಾ ಬಳಗ,ಚಿತ್ರರಂಗದ ಅನೇಕ ಸ್ಟಾರ್‌ಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ 7 ಸಾವಿರದ ಜನರಿಗೆ ಕೂರಲು ಆಸನದ ವ್ಯವಸ್ಥೆಯಿದೆ. 15-20 ಸಾವಿರದ ಜನರು ನಿತ್ತು ನೋಡಲು ಅವಕಾಶವಿದೆ. ಎಲ್.ಇ.ಡಿ. ವ್ಯವಸ್ಥೆ ಮಾಡಲಾಗಿದೆ. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ವ್ಯವಸ್ಥೆಯಿದೆ. ಜಗತ್ತಿನ ಯಾವ ಮೂಲೆಯಲ್ಲಿರುವ ಅಪ್ಪು ಅಭಿಮಾನಿ ಲೈವ್ ನಲ್ಲಿ ಕಾರ್ಯಕ್ರಮ ಕಣ್ಣತುಂಬಿಸಿಕೊಳ್ಳಬಹುದು. ಜೇಮ್ಸ್ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಜೇಮ್ಸ್ ಹೊಸ ದಾಖಲೆ ಮಾಡಿದೆ. ಒಂದೇ ಚಿತ್ರ ಮಂದಿರದಲ್ಲಿ ಜೇಮ್ಸ್ ಚಿತ್ರದ 5 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ನಿವಾಸದ ಬಳಿ ಇರುವ 'ಕಾವೇರಿ ಸಿನಿಮಾಸ್' ಚಿತ್ರಮಂದಿರದಲ್ಲಿ ಬೆಳಗ್ಗಿನ 4 ಗಂಟೆಯ ಪ್ರದರ್ಶನ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಟಿಕೆಟ್ ಈಗಾಗಲೇ ಮಾರಾಟ ಆಗಿದ್ದು, ಜನ ಮತ್ತೆ ಮತ್ತೆ ಟಿಕೆಟ್‌ಗಾಗಿ ಮುಗಿ ಬೀಳುತ್ತಿದ್ದಾರೆ.  

ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಡೊಂದನ್ನು ಬರೆದದ್ದು, ಪುನೀತ್ ವ್ಯಕ್ತಿತ್ವವನ್ನು ಸಾರುವಂತಹ ಗೀತೆ ಅದಾಗಿದೆ. ಆ ಹಾಡನ್ನು ಪುನೀತ್ ಅವರ ಹುಟ್ಟು ಹಬ್ಬದ ದಿನದಂದು (ಮಾ.17) ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಗೀತೆಯನ್ನು ವಿಜಯ ಪ್ರಕಾಶ್ ಹಾಡಿದ್ದು, ತಮನ್ನಾ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬರಲಿದೆ.( video credit : one plus news kannada )