ಬಚ್ಚಿಟ್ಟಿದ್ದ ಸಂಬಂಧಗಳ ಬಗ್ಗೆ ಬಿಚ್ಚಿಟ್ಟ ನಟಿ ಜಯಶ್ರೀ ಆರಾಧ್ಯ ಹೇಳಿದ್ದು ಒಂದೇರಡಲ್ಲ! ಕೇಳಿ ಶಾಕ್ ?

By Infoflick Correspondent

Updated:Tuesday, August 9, 2022, 12:55[IST]

ಬಚ್ಚಿಟ್ಟಿದ್ದ ಸಂಬಂಧಗಳ ಬಗ್ಗೆ ಬಿಚ್ಚಿಟ್ಟ ನಟಿ ಜಯಶ್ರೀ ಆರಾಧ್ಯ ಹೇಳಿದ್ದು ಒಂದೇರಡಲ್ಲ! ಕೇಳಿ ಶಾಕ್ ?

ಉಪೇಂದ್ರ ಸಿನಿಮಾದಲ್ಲಿ ಮಾರಿಮುತ್ತು ಪಾತ್ರ ಮಾಡಿದ್ದ ಪೋಷಕ ನಟಿ ಸರೋಜಾ ಅವರ ಮೊಮ್ಮಗಳು ಜಯಶ್ರೀ ಆರಾಧ್ಯ. 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಸಿನಿಮಾದ ಮೂಲಕ ಸ್ಯಾಂಡಲ್​ವುಡ್ ಪ್ರವೇಶ ಮಾಡಿದ್ದ ಈ ಚೆಲುವೆ ಇದೀಗ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ತಮ್ಮ ಜೀವನದಲ್ಲಿನ ಯಾರಿಗೂ ತಿಳಿಯದ ಸಂಬಂಧದ ಕುರಿತು ಬಿಗ್ ಬಾಸ್ ವೇದಿಕೆಯಲ್ಲಿ ಜಯಶ್ರೀ ಆರಾಧ್ಯ ಹೇಳಿಕೊಂಡಿದ್ದಾರೆ.ನಾನು ಮದುವೆಯಾದ ವ್ಯಕ್ತಿಯ ಜತೆ ಎರಡು ವರ್ಷ ರಿಲೇಶನ್​ಶಿಪ್​ನಲ್ಲಿದ್ದೆ. ನಾನು ದುಡ್ಡಿಗೋಸ್ಕರ ಅವರ ಜತೆ ಇರಲಿಲ್ಲ. ಅವರಿಗೆ ನನ್ನ ಬೆಂಬಲ ಬೇಕಿತ್ತು, ನನಗೆ ಅವರ ಬೆಂಬಲ ಬೇಕಿತ್ತು. ಅದಕ್ಕಾಗಿ ಅವರ ಜತೆ ರಿಲೇಶನ್​ಶಿಪ್​ನಲ್ಲಿದ್ದೆ' ಎಂದು ಆಗ ನಡೆದ ಬಚ್ಚಿಟ್ಟ ಘಟನೆಗಳ ಕುರಿತು ಬಿಚ್ಚಿಟ್ಟಿದ್ದಾರೆ ಜಯಶ್ರೀ.

ಮದುವೆಯಾಗಿ ಆತನಿಗೆ ಮಗು ಕೂಡ ಇತ್ತು ಆದರೂ ಅವರ ಜೊತೆ ಸಂಬಂಧದಲ್ಲಿ ಇದ್ದೆ. ಬಳಿಕ ಮನೆಯವರಿಗೆಲ್ಲ ಗೊತ್ತಾಯಿತು ದೊಡ್ಡ ಜಗಳವೆ ಆಯಿತು'. ತನ್ನ ಮತ್ತು ಸಂಬಂಧ ಹೊಂದಿದ ವ್ಯಕ್ತಿಯ ಮನೆಯವರಿಗೆ ವಿಷಯ ಗೊತ್ತಾದ ಬಳಿಕ ತುಂಬಾ ದೊಡ್ಡ ಸಮಸ್ಯೆ ಆಯಿತು. ಬಳಿಕ ನಾನು ಮನೆಬಿಟ್ಟು ಹೊರಬರಬೇಕಾಯಿತು. ಮನೆಬಿಟ್ಟು ಬಂದ ನಂತರವೂ ಆತನ ಜೊತೆ ಇದ್ದೆ ಎಂದು ಜಯಶ್ರೀ ಹೇಳಿದರು. ಬಳಿಕ ಬ್ಯುಸಿನೆಸ್ ಮಾಡಲು ಪ್ರಾರಂಭಿಸಿದೆ ಎಂದು ಆ ಸಂಬಂಧದ ಹಾಗು ಕಷ್ಟಕರ ಜೀವನದ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.   

'ನಾನು ಅವರಿಂದ ಜೂಜು ಕಲಿತೆ. ಒಂದೂವರೆ ವರ್ಷಗಳ ಕಾಲ ಜೂಜು ಆಡಿದೆ. ಆಮೇಲೆ ಜೂಜು ಬಿಟ್ಟೆ. ಅವರಿಗೂ ಜೂಜು ಬಿಟ್ಟುಬಿಡಿ ಎಂದೆ. ನನ್ನ ಮೇಲೆ ನನಗೆ ಅಸಹ್ಯ ಹುಟ್ಟಿತು. ಅವರಿಗೆ ಕ್ಯಾನ್ಸರ್ ಬಂತು. ಆದರೂ ನಾನು ಅವರನ್ನು ಬಿಡಲಿಲ್ಲ. ನಂತರ ನಾನು ಬಿಸ್ನೆಸ್ ಶುರು ಮಾಡಿದೆ. ನಾನು ಅವರನ್ನು ಏಕೆ ಬಿಡಲಿಲ್ಲ ಎಂದರೆ ಅವರು ತುಂಬಾನೇ ಕಷ್ಟದಲ್ಲಿದ್ದರು' ಎಂದಿದ್ದಾರೆ ಜಯಶ್ರೀ ಆರಾಧ್ಯ.