ಜೂಜಾಡಲು ಕಲಿತಿದ್ದ ಜಯಶ್ರೀ ಆರಾಧ್ಯ ಅವರ ಬದುಕಲ್ಲಿ ಏನೆಲ್ಲಾ ನಡೆದಿದೆ ಗೊತ್ತಾ..?

By Infoflick Correspondent

Updated:Friday, August 12, 2022, 08:31[IST]

ಜೂಜಾಡಲು ಕಲಿತಿದ್ದ ಜಯಶ್ರೀ ಆರಾಧ್ಯ ಅವರ ಬದುಕಲ್ಲಿ ಏನೆಲ್ಲಾ ನಡೆದಿದೆ ಗೊತ್ತಾ..?

ಬಿಗ್ ಬಾಸ್ ಕನ್ನಡ ಓಟಿಟಿ 1 ರಲ್ಲಿ ಈಗ ನಿತ್ಯ ಒಂದೊಂದು ಬಿಸಿ ಬಿಸಿ ಸುದ್ದಿಗಳು ಬರುತ್ತಿವೆ. ನಿತ್ಯ ಒಬ್ಬೊಬ್ಬ ಸ್ಪರ್ಧಿಗಳು ತಮ್ಮ ತಮ್ಮ ಬಗ್ಗೆ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಏಲ್ಲರ ಬದುಕಿನಲ್ಲೂ ಕಷ್ಟದ ದಿನಗಳು ಬಂದಿದ್ದು, ಎಲ್ಲರೂ ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ಮಾರಿಮುತ್ತು ಖ್ಯಾತಿಯ ಸರೋಜಮ್ಮ ಮೊಮ್ಮಗಳು ಜಯಶ್ರೀ ಆರಾಧ್ಯ ಅವರು ಕೂಡ ತಮ್ಮ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಅದಾಗಲೇ ಮದುವೆಯಾಗಿದ್ದವರ ಜೊತೆಗೆ ರಿಲೇಶನ್‌ ಶಿಪ್‌ ನಲ್ಲಿ ಇದ್ದರಂತೆ. ಇದಕ್ಕೆಲ್ಲಾ ಕಾರಣ ಏನ್‌ ಗೊತ್ತಾ..?

ಜಯಶ್ರೀ ಅವರಿಗೆ ಆಕ್ಟಿಂಗ್‌ ಮಾಡುವ ಆಸೆ ಇದ್ದಿದ್ದರಿಂದ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದರಿಂದ ಮನೆಯಲ್ಲೀ ಟೀಕೆಗೆ ಒಳಗಾಗಿದ್ದರು. ಅಲ್ಲದೇ, ಜಯಶ್ರೀ ಅವರು ಪಿಯುಸಿ ನಲ್ಲಿ ಫೇಳ್‌ ಆಗಿದ್ದರು. ಮನೆಯಲ್ಲಿ ಅವರ ನಟನೆಗೆ ವಿರೋಧವಿತ್ತು ಜೊತೆಗೆ ಫೇಲ್‌ ಆದ ಬೇಸರವೂ ಇತ್ತು. ಇದರಿಂದ ಜಯಶ್ರೀ ಅವರು ತಿರಸ್ಕೃತಕ್ಕೆ ಒಳಗಾಗಿದ್ದರು. ಆದರೆ ಜಯಶ್ರೀ ಅವರ ಅಣ್ಣ ಜೈಲಿಗೆ ಹೋಗಿ ಬಂದಿದ್ದರೂ ಕೂಡ ಅಣ್ಣನಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಕಾರಣ ಆತ ಗಂಡು ಮಗ ಎಂಬುದೊಂದೆ. ಹೀಗಅಗಿ ಪದೇ ಪದೇ ಜಗಳವಾಗುತ್ತಿತ್ತು. ಒಮ್ಮೆ ಮನೆಯಿಂದ ಹೊರಟು ಬಂದ ಜಯಶ್ರೀಗೆ ಸಿಕ್ಕ ಪ್ರೀತಿಯೇ ಆ ವ್ಯಕ್ತಿ. ಆತನಿಗೆ ಅದಾಗಲೇ ಮದುವೆಯಾಗಿತ್ತು. ಆತನ ಪ್ರೀತಿ ಸಿಕ್ಕ ಕಾರಣ ಆತನ ಜೊತೆಗೆ ಜಯಶ್ರೀಗೆ ಸಿಕ್ಕ ಪ್ರೀತಿಯೇ ಆ ಜಯಶ್ರೀ ಅವರು ರಿಲೇಶನ್‌ ಶಿಪ್‌ ನಲ್ಲಿ ಇದ್ದರು.    

ಆತನಿಂದ ಜಯಶ್ರೀ ಅವರು ಜೂಜಾಡುವುದು, ಗ್ಯಾಂಬ್ಲಿಂಗ್‌ ಎಲ್ಲವನ್ನೂ ಕಲಿತಿದ್ದರು. ಇದರಿಂದ ಜಯಶ್ರೀ ಅವರಿಗೆ ತಮ್ಮ ಮೇಲೆ ತಮಗೆ ಅಸಹ್ಯ ಹುಟ್ಟಿತ್ತಂತೆ. ತದ ನಂತರ ಅದು ಹೇಗೋ ವ್ಯಸನದಿಂದ ದೂರ ಬಂದು ಬ್ಯಾಂಕ್‌ ನಲ್ಲಿ ಲೋನ್‌ ತೆಗೆದು ಹೇರ್ & ಸ್ಕಿನ್ ಕ್ಲಿನಿಕ್ ಶುರು ಮಾಡಿದರಂತೆ. ಈಗ ಬೆಂಗಳುರಿನಲ್ಲಿ ಎರಡು ಬ್ರ್ಯಾಂಚ್‌ ತೆಗೆದಿದ್ದು, ಒಂದು ಕೋಟಿ ಸಾಲ ಇದ್ಯಯಂತೆ. ಇನ್ನು ಅವರ ತಂದೆ ತಾಯಿಯನ್ನು ಈಗ ಜಯಶ್ರೀ ಅವರೇ ನೋಡಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಬಿಗ್‌ ಬಾಸ್‌ ಮನೆಯಲ್ಲಿ ಹೇಳಿಕೊಂಡಿದ್ದಾರೆ.